Chalapathi Chowdary Death: ಹಿರಿಯ ನಟ ಕ್ಯಾಪ್ಟನ್​ ಚಲಪತಿ ಚೌದ್ರಿ ನಿಧನ

TV9 Digital Desk

| Edited By: Rajesh Duggumane

Updated on:May 19, 2022 | 4:06 PM

ಪೋಷಕ ಪಾತ್ರಗಳಿಂದ ಕ್ಯಾಪ್ಟನ್​ ಚಲಪತಿ ಚೌದ್ರಿ ಜನಪ್ರಿಯರಾಗಿದ್ದರು. ಹಲವು ಭಾಷೆಗಳಲ್ಲಿ ನಟಿಸಿದ ಅನುಭವ ಅವರಿಗೆ ಇದೆ. ತೆಲುಗು ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

Chalapathi Chowdary Death: ಹಿರಿಯ ನಟ ಕ್ಯಾಪ್ಟನ್​ ಚಲಪತಿ ಚೌದ್ರಿ ನಿಧನ
ಚಲಪತಿ

Follow us on

ಇತ್ತೀಚೆಗೆ ಚಿತ್ರರಂಗದ ಅನೇಕರು ನಿಧನ ಹೊಂದುತ್ತಿರುವುದು ಬೇಸರದ ಸಂಗತಿ. ಈಗ ಈ ಸಾಲಿಗೆ ಹಿರಿಯ ನಟ ಕ್ಯಾಪ್ಟನ್​ ಚಲಪತಿ ಚೌದ್ರಿ (Captain Chalapathi Chowdary) ಕೂಡ ಸೇರ್ಪಡೆ ಆಗಿದ್ದಾರೆ. ಅವರು ಇಂದು (ಮೇ 19) ರಾಯಚೂರಿನಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಕ್ಯಾಪ್ಟನ್​ ಚಲಪತಿ ಚೌದ್ರಿ ಅವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೆ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಪೋಷಕ ಪಾತ್ರಗಳಿಂದ ಕ್ಯಾಪ್ಟನ್​ ಚಲಪತಿ ಚೌದ್ರಿ ಜನಪ್ರಿಯರಾಗಿದ್ದರು. ಹಲವು ಭಾಷೆಗಳಲ್ಲಿ ನಟಿಸಿದ ಅನುಭವ ಅವರಿಗೆ ಇದೆ. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅವರು ಕಿರುತೆರೆಯಲ್ಲಿ ಆ್ಯಕ್ಟೀವ್​ ಆಗಿದ್ದರು. ಅವರ ನಿಧನದಿಂದ ಬಣ್ಣದ ಲೋಕಕ್ಕೆ ನಷ್ಟ ಉಂಟಾಗಿದೆ.

ಇದನ್ನೂ ಓದಿ: ನಿಕ್ಕಿ ಗಲ್ರಾನಿ-ಆದಿ ಮದುವೆಯಲ್ಲಿ ಹಾಜರಿ ಹಾಕಿದ ಸೆಲೆಬ್ರಿಟಿಗಳು; ಇಲ್ಲಿದೆ ಫೋಟೋ ಗ್ಯಾಲರಿ

ಇದನ್ನೂ ಓದಿ

ಪೋಷಕ ಪಾತ್ರದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಕ್ಯಾಪ್ಟನ್​ ಚಲಪತಿ ಚೌದ್ರಿ ಅವರು ಕನ್ನಡದ ನಟ ಶಿವರಾಜ್​ಕುಮಾರ್, ತೆಲುಗು ನಟ ಚಿರಂಜೀವಿ ಮೊದಲಾದವರ ಜತೆ ತೆರೆ ಹಂಚಿಕೊಂಡಿದ್ದರು. ಚೌದ್ರಿ ಅವರು ರಾಯಚೂರಿನಲ್ಲಿ ವಾಸವಾಗಿದ್ದರು. ಅಲ್ಲಿಯೇ ಅವರ ಅಂತ್ಯಕ್ರಿಯೆ ನೆರವೇರಲಿದೆ.

ಇದನ್ನೂ ಓದಿ: ಹೇಗಿದ್ದಾರೆ ನೋಡಿ ರಶ್ಮಿಕಾ ತಂಗಿ; ಇಲ್ಲಿದೆ ಮಂದಣ್ಣ ಫ್ಯಾಮಿಲಿಯ ಲೇಟೆಸ್ಟ್​ ಫೋಟೋ

ಕ್ಯಾಪ್ಟನ್​ ಚಲಪತಿ ಚೌದ್ರಿ ಅವರಿಗೆ ಇತ್ತೀಚೆಗೆ ಆರೋಗ್ಯ ಸಾಕಷ್ಟು ಕೈ ಕೊಟ್ಟಿತ್ತು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗಿಲ್ಲ. ಅವರ ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ. ತೆಲುಗು ಭಾಗದಲ್ಲಿ ಅವರು ಸಾಕಷ್ಟು ಜನಪ್ರಿಯತೆ ಗಳಿಸಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Related Stories

Click on your DTH Provider to Add TV9 Kannada