ಜ್ಯೂ.ಎನ್​ಟಿಆರ್​ ಜತೆ ಕಾಣಿಸಿಕೊಂಡ ಪ್ರಶಾಂತ್​ ನೀಲ್​; ಇದಕ್ಕಿದೆ ಮಹತ್ವದ ಕಾರಣ

ಪ್ರಶಾಂತ್ ನೀಲ್ ಹಾಗೂ ಲಿಖಿತಾ ಮತ್ತು ಜ್ಯೂ.ಎನ್​ಟಿಆರ್ ಹಾಗೂ ಲಕ್ಷ್ಮೀ ಪ್ರಣತಿ ದಂಪತಿಗಳು ಒಂದೇ ಫ್ರೇಮ್​ನಲ್ಲಿದ್ದಾರೆ. ಅಚ್ಚರಿ ಎಂದರೆ ಈ ಎರಡೂ ಜೋಡಿ ಮದುವೆ ಆಗಿದ್ದು ಮೇ 5ರಂದು. ಹೀಗಾಗಿ, ಇವರು ಒಟ್ಟಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ.

ಜ್ಯೂ.ಎನ್​ಟಿಆರ್​ ಜತೆ ಕಾಣಿಸಿಕೊಂಡ ಪ್ರಶಾಂತ್​ ನೀಲ್​; ಇದಕ್ಕಿದೆ ಮಹತ್ವದ ಕಾರಣ
ಜ್ಯೂ.ಎನ್​ಟಿಆರ್​ ಜತೆ ಕಾಣಿಸಿಕೊಂಡ ಪ್ರಶಾಂತ್​ ನೀಲ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: May 06, 2022 | 3:13 PM

ಜ್ಯೂ.ಎನ್​ಟಿಆರ್ (Jr.NTR)​ ಹಾಗೂ ಪ್ರಶಾಂತ್​ ನೀಲ್ (Prashant Neel)​ ಇಬ್ಬರೂ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಸಾವಿರಾರು ಕೋಟಿ ರೂಪಾಯಿ ಬಾಚಿದೆ. ಜ್ಯೂ.ಎನ್​ಟಿಆರ್ ನಟನೆಯ ‘ಆರ್​ಆರ್​ಆರ್’ ಸಿನಿಮಾ (RRR Movie) ಕೂಡ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದೆ. ಇವರು ಒಟ್ಟಾಗಿ ಕೆಲಸ ಮಾಡಲಿರುವ ವಿಚಾರ ಬಹುತೇಕರಿಗೆ ಗೊತ್ತಿದೆ. ಹೀಗಿರುವಾಗಲೇ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಅವರ ಜತೆ ಅವರ ಪತ್ನಿಯರು ಕೂಡ ಇದ್ದಾರೆ. ಇದಕ್ಕೊಂದು ಮಹತ್ವದ ಕಾರಣವಿದೆ. ಅಷ್ಟಕ್ಕೂ ಏನದು? ಆ ಪ್ರಶ್ನೆಗೆ ಉತ್ತರ ವಿವಾಹ ವಾರ್ಷಿಕೋತ್ಸವ.

ಪ್ರಶಾಂತ್ ನೀಲ್ ಹಾಗೂ ಲಿಖಿತಾ ಮತ್ತು ಜ್ಯೂ.ಎನ್​ಟಿಆರ್ ಹಾಗೂ ಲಕ್ಷ್ಮೀ ಪ್ರಣತಿ ದಂಪತಿಗಳು ಒಂದೇ ಫ್ರೇಮ್​ನಲ್ಲಿದ್ದಾರೆ. ಅಚ್ಚರಿ ಎಂದರೆ ಈ ಎರಡೂ ಜೋಡಿ ಮದುವೆ ಆಗಿದ್ದು ಮೇ 5ರಂದು. ಹೀಗಾಗಿ, ಇವರು ಒಟ್ಟಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್​ ಆಗುತ್ತಿದೆ.

ಈ ಭೇಟಿಯ ಹಿಂದೆ ಸಿನಿಮಾ ಉದ್ದೇಶ ಕೂಡ ಇದೆ ಎಂಬುದನ್ನು ಫ್ಯಾನ್ಸ್​ಗೆ ಊಹಿಸಲು ಹೆಚ್ಚು ಸಮಯ ಹಿಡಿದಿಲ್ಲ. ಜ್ಯೂ. ಎನ್​ಟಿಆರ್​ 31ನೇ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಿಲಿದ್ದಾರೆ. ಈ ಸಿನಿಮಾ ಇನ್ನು ಆರಂಭದ ಹಂತದಲ್ಲಿದೆ. ಭೇಟಿ ಸಂದರ್ಭದಲ್ಲಿ ಈ ಸಿನಿಮಾ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಫೋಟೋವನ್ನು ಹಂಚಿಕೊಂಡಿರುವ ಜ್ಯೂ.ಎನ್​ಟಿಆರ್​ ‘ಹೊಸ ಆರಂಭ’ ಎಂಬ ಹ್ಯಾಶ್​ಟ್ಯಾಗ್​ ನೀಡಿದ್ದಾರೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ.

ಪ್ರಶಾಂತ್ ನೀಲ್, ಲಿಖಿತಾ, ಜ್ಯೂ.ಎನ್​ಟಿಆರ್ ಹಾಗೂ ಲಕ್ಷ್ಮೀ ಪ್ರಣತಿ ಸೋಫಾ ಮೇಲೆ ಕೂತಿದ್ದಾರೆ. ಪ್ರಶಾಂತ್ ನೀಲ್ ಹೆಗಲ ಮೇಲೆ ಲಿಖಿತಾ ಕೈ ಹಾಕಿದ್ದಾರೆ. ಲಕ್ಷ್ಮೀ ಅವರನ್ನು ಜ್ಯೂ.ಎನ್​ಟಿಆರ್​ ತಬ್ಬಿದ್ದಾರೆ. ಈ ದಂಪತಿ ಒಟ್ಟಾಗಿ ಪಾರ್ಟಿ ಕೂಡ ಮಾಡಿದ್ದಾರೆ.

ಪ್ರಶಾಂತ್ ನೀಲ್ ಹಾಗೂ ಜ್ಯೂ.ಎನ್​ಟಿಆರ್​ ಸಿನಿಮಾ 2023ರಲ್ಲಿ ಸೆಟ್ಟೇರಲಿದೆ. ‘ನಾನು ಈ ಸಿನಿಮಾ ಬಗ್ಗೆ ತುಂಬಾ ಉತ್ಸುಕನಾಗಿದ್ದೇನೆ. ಆ ಚಿತ್ರದ ಬಗ್ಗೆ ನನ್ನನ್ನು ಕೇಳಬೇಡಿ. ಸಿನಿಮಾ ಸೆಟ್ಟೇರಲು ಇನ್ನೂ ಸಾಕಷ್ಟು ಸಮಯವಿದೆ.  ನಾನು ಕಳೆದ 15 ರಿಂದ 20 ವರ್ಷಗಳಿಂದ ಜ್ಯೂ. ಎನ್‌ಟಿಆರ್ ಅವರ ಅಭಿಮಾನಿಯಾಗಿದ್ದೇನೆ. ನಾವಿಬ್ಬರೂ ಸ್ಕ್ರಿಪ್ಟ್ ಕೆಲಸವನ್ನು ಪ್ರಾರಂಭಿಸುವ ಮೊದಲು 10 ರಿಂದ 15 ಬಾರಿ ಆಕಸ್ಮಿಕವಾಗಿ ಭೇಟಿಯಾಗಿದ್ದೇವೆ. ನಾನು ಅವರನ್ನು ಹೆಚ್ಚು ಅರ್ಥಮಾಡಿಕೊಳ್ಳಲು ಬಯಸುತ್ತೇನೆ’ ಎಂದು ಪಿಂಕ್​ವಿಲ್ಲಾಗೆ ಪ್ರಶಾಂತ್​ ನೀಲ್ ಈ ಮೊದಲು ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ