AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್ 2’ ನೋಡಿ ಕಲಿತುಕೊಳ್ಳಲು ಸ್ಟಾರ್​ ಡೈರೆಕ್ಟರ್​ಗೆ ಸೂಚನೆ ನೀಡಿದ ಜ್ಯೂ. ಎನ್​ಟಿಆರ್​?

ಕೊರಟಾಲ ಶಿವ ನಿರ್ದೇಶನದ ಮುಂದಿನ ಸಿನಿಮಾಗೆ ಜ್ಯೂ.ಎನ್​ಟಿಆರ್ ಹೀರೋ. ಅವರ ನಿರ್ದೇಶನದ ‘ಆಚಾರ್ಯ’ ಸಿನಿಮಾ ಅತೀ ಹೀನಾಯವಾಗಿ ಸೋತಿದೆ. ಇದರಿಂದ ಜ್ಯೂ.ಎನ್​ಟಿಆರ್​ಗೆ ಭಯ ಹೆಚ್ಚಿದೆ.

‘ಕೆಜಿಎಫ್ 2’ ನೋಡಿ ಕಲಿತುಕೊಳ್ಳಲು ಸ್ಟಾರ್​ ಡೈರೆಕ್ಟರ್​ಗೆ ಸೂಚನೆ ನೀಡಿದ ಜ್ಯೂ. ಎನ್​ಟಿಆರ್​?
ಯಶ್-ಜ್ಯೂ.ಎನ್​ಟಿಆರ್
TV9 Web
| Edited By: |

Updated on: May 06, 2022 | 2:03 PM

Share

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ (KGF: Chapter 2) ತೆರೆಕಂಡು 20 ದಿನ ಕಳೆದರೂ ಅಭಿಮಾನಿಗಳು ಚಿತ್ರವನ್ನು ಕಣ್ತುಂಬಿಕೊಳ್ಳುವುದನ್ನು ನಿಲ್ಲಿಸಿಲ್ಲ. ಈ ಸಿನಿಮಾ ಹಿಂದಿ ಬಾಕ್ಸ್ ಆಫೀಸ್​ನಲ್ಲಿ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡುವತ್ತ ಹೆಜ್ಜೆ ಹಾಕುತ್ತಿದೆ. ಈ ಸಿನಿಮಾದ ಯಶಸ್ಸಿನ ತಂತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ಅನೇಕ ಸ್ಟಾರ್​ ನಿರ್ದೇಶಕರು ಸಿನಿಮಾವನ್ನು ಮಾದರಿ ಆಗಿ ತೆಗೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಜ್ಯೂ.ಎನ್​ಟಿಆರ್ (Jr. NTR)​ ಸ್ಟಾರ್​ ನಿರ್ದೇಶಕನಿಗೆ ಸಿನಿಮಾ ನೋಡಿ ಕಲಿಯುವಂತೆ ಸೂಚನೆ ನೀಡಿದ್ದಾರೆ ಎಂದು ವರದಿ ಆಗಿದೆ.

ಜ್ಯೂ.ಎನ್​ಟಿಆರ್​ ‘ಆರ್​ಆರ್​ಆರ್’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರದ ನಂತರ ಅವರ ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ನಿರ್ದೇಶಕ ರಾಜಮೌಳಿ ಜತೆ ಕೆಲಸ ಮಾಡಿದ ನಂತರ ಬೇರೆ ನಿರ್ದೇಶಕರ ಜತೆ ಕೈ ಜೋಡಿಸಿದರೆ ಸೋಲು ಪಕ್ಕಾ ಎನ್ನುವ ಮಾತಿದೆ. ಇದು ಅನೇಕ ಬಾರಿ ಸಾಬೀತಾಗಿದೆ. ರಾಮ್​ ಚರಣ್​ ವಿಚಾರದಲ್ಲಿ ಇದು ಮರುಕಳಿಸಿದೆ. ಈ ಮಾತನ್ನು ಸುಳ್ಳು ಮಾಡಲು ಜ್ಯೂ.ಎನ್​ಟಿಆರ್ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಮುಂದಿನ ಸಿನಿಮಾ ಬಗ್ಗೆ ಅವರು ಹೆಚ್ಚು ಗಮನ ಹರಿಸುತ್ತಿದ್ದಾರೆ.

ಕೊರಟಾಲ ಶಿವ ನಿರ್ದೇಶನದ ಮುಂದಿನ ಸಿನಿಮಾಗೆ ಜ್ಯೂ.ಎನ್​ಟಿಆರ್ ಹೀರೋ. ಅವರ ನಿರ್ದೇಶನದ ‘ಆಚಾರ್ಯ’ ಸಿನಿಮಾ ಅತೀ ಹೀನಾಯವಾಗಿ ಸೋತಿದೆ. ಇದರಿಂದ ಜ್ಯೂ.ಎನ್​ಟಿಆರ್​ಗೆ ಭಯ ಹೆಚ್ಚಿದೆ. ಹೀಗಾಗಿ, ಮುಂದಿನ ಸಿನಿಮಾದ ಸ್ಕ್ರಿಪ್ಟ್​ ಬಗ್ಗೆ ಗಮನ ಹರಿಸಲು ಅವರು ಕೊರಟಾಲ ಶಿವಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ
Image
ರಾಕಿ ಭಾಯ್​ಗೆ ಈದ್​ ಗಿಫ್ಟ್​; ಹಬ್ಬದ ದಿನವೇ ಹಿಂದಿ ಬಾಕ್ಸ್​ ಆಫೀಸ್​ನಲ್ಲಿ 9.57 ಕೋಟಿ ರೂ. ಬಾಚಿದ ‘ಕೆಜಿಎಫ್​ 2’
Image
ಬಾಲಿವುಡ್​ನಲ್ಲಿ ಈ ಸಾಧನೆ ಮಾಡಲು ‘ಕೆಜಿಎಫ್ 2’ಗೆ ಇನ್ನು ಕೆಲವೇ ಮೆಟ್ಟಿಲು ಬಾಕಿ; ಇಲ್ಲಿದೆ ವಿವರ
Image
‘ಗೆದ್ದ ಸಿನಿಮಾವನ್ನು ಅತಿಯಾಗಿ ಹೊಗಳ್ತಾರೆ’: ಕೆಜಿಎಫ್​ 2, ಆರ್​ಆರ್​ಆರ್​ ಬಗ್ಗೆ ನವಾಜುದ್ದೀನ್​ ಸಿದ್ದಿಕಿ ಹೇಳಿಕೆ
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ ಸೋತರೂ ಪಾರ್ಟಿ ಮಾಡಿದ ದಳಪತಿ ವಿಜಯ್; ನಿರ್ದೇಶಕ ಹೇಳಿದ್ದೇನು?

ಕೊರಟಾಲ ಶಿವ ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಹೀಗಾಗಿ, ಅವರ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇತ್ತು. ‘ಆಚಾರ್ಯ’ ಸಿನಿಮಾ ಸೋಲಿನಿಂದ ಅವರ ಮೇಲಿದ್ದ ನಂಬಿಕೆ ತಗ್ಗಿದೆ. ಇದು ಸಹಜವಾಗಿಯೇ ಜ್ಯೂ.ಎನ್​ಟಿಆರ್ ಮುಂದಿನ ಸಿನಿಮಾ ಮೇಲೆ ಪ್ರಭಾವ ಬೀರೋದು ಪಕ್ಕಾ ಎನ್ನಲಾಗುತ್ತಿದೆ.

‘ಕೆಜಿಎಫ್ 2’ ಹಾಗೂ ‘ಆರ್​ಆರ್​ಆರ್​’ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಹೀಗಾಗಿ, ಈ ಸಿನಿಮಾಗಳನ್ನು ನೋಡಿ ಆ ಚಿತ್ರಗಳು ಗೆಲುವಿನ ಕಾರಣಗಳನ್ನು ಅರ್ಥೈಸಿಕೊಳ್ಳುವಂತೆ ಜ್ಯೂ.ಎನ್​ಟಿಆರ್​ ಅವರು ಕೊರಟಾಲ ಶಿವಗೆ ಸೂಚನೆ ನೀಡಿದ್ದಾರೆ ಎಂದು ವರದಿ ಆಗಿದೆ. ಜ್ಯೂ.ಎನ್​ಟಿಆರ್​ ಹಾಗೂ ಕೊರಟಾಲ ಶಿವ ಕಾಂಬಿನೇಷನ್ ಸಿನಿಮಾ ಹೇಗೆ ಮೂಡಿ ಬರಲಿದೆ ಅನ್ನೋದು ಸದ್ಯದ ಕುತೂಹಲ.

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

Follow Us
Web contact
Web contact

TV9 Kannada

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು