AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ: 8 ಆರೋಪಿಗಳ ಬಂಧನ!

ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಪಿ ಸಿದ್ಧಾರ್ಥ್ ಗೋಯಲ್ ವಿವರ ನೀಡಿದ್ದಾರೆ. 8 ಆರೋಪಿಗಳನ್ನು ಬಂಧಿಸಲಾಗಿದ್ದು, ಘಟನೆ ಪೂರ್ವ ಯೋಜಿತವಲ್ಲ, ಡಿಜೆ ವಿಚಾರಕ್ಕೂ ಸಂಬಂಧಿಸಿಲ್ಲ ಎಂದಿದ್ದಾರೆ. ಮಸೀದಿ ಶೂ ರ್ಯಾಕ್‌ನಿಂದ ಕಲ್ಲು ತೂರಾಟ ನಡೆದಿರುವುದಾಗಿ ತಿಳಿಸಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದಿದ್ದಾರೆ.

ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ: 8 ಆರೋಪಿಗಳ ಬಂಧನ!
ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ: 8 ಆರೋಪಿಗಳ ಬಂಧನ!
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on:Feb 20, 2026 | 2:38 PM

Share

ಬಾಗಲಕೋಟೆ, ಫೆಬ್ರವರಿ 20: ನಗರದಲ್ಲಿ ಶಿವಾಜಿ ಜಯಂತಿ ಭಾವಚಿತ್ರ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ (Stone pelting) ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್​ ಗೋಯಲ್ ಪ್ರತಿಕ್ರಿಯೆ ನೀಡಿದ್ದು, ಘಟನೆಯ ಕುರಿತ ಎಲ್ಲಾ ಮಾಹಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಬುಧವಾರ ಸಂಜೆ ನಡೆದ ಈ ಘಟನೆಯ ಹಿನ್ನೆಲೆ 8 ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ತನಿಖೆ ನಡೆಸಿದ್ದಾರೆ. ಈ ವೇಳೆ ಹೊರಬಂದ ಸತ್ಯವನ್ನು ಎಸ್ಪಿ ಮಾಧ್ಯಮದ ಮುಂದಿಟ್ಟಿದ್ದಾರೆ.

8 ಆರೋಪಿಗಳ ಬಂಧನ

ಶಿವಾಜಿ ಜಯಂತಿಯ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ್ದ ನವನಗರ ನಿವಾಸಿ ತನ್ವೀರ್ ಬಂಧಿಸಲಾಗಿದ್ದು, ಸುಮೋಟೋ ಕೇಸ್​​​ ದಾಖಲಿಸಿಕೊಂಡು FIR ಮಾಡಿದ್ದೇವೆ ಎಂದು ಎಸ್ಪಿ ಸಿದ್ಧಾರ್ಥ್​ ಹೇಳಿಕೆ ನೀಡಿದ್ದಾರೆ. ಸಿಸಿಟಿವಿ ದೃಶ್ಯ ಪರಿಶೀಲಿಸಿ 8 ಆರೋಪಿಗಳನ್ನು ಬಂಧಿಸಲಾಗಿದ್ದು, ತನ್ವೀರ್​ನನ್ನು ಹೊರತುಪಡಿಸಿ ಬೇರೆ ಯಾರೂ ಕಲ್ಲು ತೂರಾಟ ಮಾಡಿಲ್ಲವೆಂದು ಆತನೇ ಒಪ್ಪಿಕೊಂಡಿರುವುದಾಗಿ ಎಸ್ಪಿ ಹೇಳಿದ್ದಾರೆ.

ಈ ಗಲಾಟೆ ಪೂರ್ವ ಯೋಜಿತವಾಗಿದ್ದಲ್ಲ ಮತ್ತು ಡಿಜೆ ವಿಚಾರಕ್ಕಾಗಿಯಾಗಿ ಕಲ್ಲು ತೂರಾಟ ನಡೆದಿಲ್ಲ. ರಾತ್ರಿ ಸುಮಾರು 10 ಗಂಟೆ 6 ನಿಮಿಷಕ್ಕೆ ಕಲ್ಲು ತೂರಾಟವಾಗಿದ್ದು, ಈ ವೇಳೆ ನನಗೆ ಮತ್ತು ಇಬ್ಬರು ಕಾನ್ಸ್​ಟೇಬಲ್​ಗಳಿಗೆ ಗಾಯಗಳಾಗಿವೆ ಎಂದು ಎಸ್ಪಿ ತಿಳಿಸಿದ್ದಾರೆ. ಕಲ್ಲು ತೂರಾಟದ ಜೊತೆ ಚಪ್ಪಲಿಯನ್ನು ಕೂಡ ಎಸೆಯಲಾಗಿದೆ. ಮಸೀದಿ ಒಳಗೆ ಕಲ್ಲಿನಿಂದ ಶೂ ರ್ಯಾಕ್ ಮಾಡಲಾಗಿತ್ತು. ಅದೇ ರ್ಯಾಕ್ನ ಕಲ್ಲು ತೆಗೆದುಕೊಂಡು ತೂರಾಟ ನಡೆಸಲಾಗಿದೆ. ಮಸೀದಿಯೊಳಗೆ ಯಾವುದೇ ರಾಡ್ ಆಗಲಿ ಬೇರೆ ಅಸ್ತ್ರವಾಗಲಿ ಇರಲಿಲ್ಲ. ಗಲಾಟೆ ಹಿನ್ನೆಲೆ ಬಿಎನ್​​ಎಸ್​​​​​​​ 163ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಬಾಗಲಕೋಟೆ ಎಸ್​​​ಪಿ ಸಿದ್ಧಾರ್ಥ ಗೋಯಲ್ ಹೇಳಿದ್ದಾರೆ.

ಇದನ್ನೂ ಓದಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: ಘಟನೆಗೆ ಕಾರಣ ಬಿಚ್ಚಿಟ್ಟ ಎಸ್ಪಿ

ಘಟನೆಯ ವಿವರ

  • ಸಂಜೆ 5ಗಂಟೆ: ಕೊತ್ತಲೇಶ್ವರ ದೇವಸ್ಥಾನದಿಂದ ಶಿವಾಜಿ ಭಾವಚಿತ್ರ ಮೆರವಣಿಗೆ ಆರಂಭ.
  • 9.45: ವಲ್ಲಭಭಾಯಿ ವೃತ್ತ,ಬಸವೇಶ್ವರ ಮಾರ್ಗವಾಗಿ ಪಂಕಾ ಮಸೀದಿ ಬಳಿ ಮೆರವಣಿಗೆ ಆಗಮನ
  • 9.50: ಮಸೀದಿ ಪ್ರಾರ್ಥನೆಗೆ ಬಂದಿದ್ದವರಿಂದ ಸೌಂಡ್ ಬಗ್ಗೆ ತಕರಾರು. ಪ್ರಚೋಧನಾತ್ಮಕ ಮಾತು,ಸ್ಥಳದಲ್ಲಿ ಪೊಲೀಸರಿಂದ ಸಮಾಧಾನ ಯತ್ನ
  • 10 ಗಂಟೆಗೆ: ಕಲ್ಲು ತೂರಾಟ, ಎಸ್ ಪಿ ಸಿದ್ದಾರ್ಥ ಗೋಯೆಲ್ ಹಾಗೂ ಓರ್ವ ಕಾನ್ಸ್ಟೇಬಲ್, ಓರ್ವ ಹಿಂದು ಕಾರ್ಯಕರ್ತನಿಗೆ ಗಾಯ
  • 10.15ರಿಂದ: ಹಿಂದು ಕಾರ್ತಕರ್ತರ ಬೃಹತ್ ಪ್ರತಿಭಟನೆ. ತಡೆಯಲು ಬಂದ ಪೊಲೀಸರ ಜೊತೆ ವಾಗ್ವಾದ.ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ.
  • 11 ಗಂಟೆ: ಕೊತ್ತಲೇಶ್ವರ ದೇವಸ್ಥಾನದ ಎದುರು ಹಿಂದು ಮುಖಂಡರ ಪ್ರತಿಭಟನೆ.
  • 12 ಗಂಟೆ: ಎಲ್ಲರನ್ನು ಸ್ಥಳದಿಂದ ಕಳುಹಿಸಿದ ಪೊಲೀಸರು.
  • 12.25: ತರಕಾರಿ ಮಾರುಕಟ್ಟೆಯಲ್ಲಿನ ನಾಲ್ಕು ತಳ್ಳುಗಾಡಿಗಳಿಗೆ ಬೆಂಕಿ.ಪೊಲೀಸರಿಂದ ಬೆಂಕಿ ಶಮನ.

ಇದನ್ನೂ ಓದಿ ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ: ಬಾಗಲಕೋಟೆ ಉದ್ವಿಗ್ನ

ಹಿಂದೂ ಮುಖಂಡರ ಸಭೆ

ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣದ ಹಿನ್ನೆಲೆ ಹಿಂದೂ ಮುಖಂಡರ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಮಾತನಾಡಿ,ಯಾರು ಭಾಗಿಯಾಗಿದ್ದಾರೋ ಎಲ್ಲರನ್ನೂ ಬಂಧಿಸಬೇಕು. ನಾಲ್ಕು ಮಂದಿಯನ್ನು ಮಾತ್ರ ಬಂಧಿಸುವುದರಿಂದ ಸಾಲದು. ಪ್ರಕರಣದಲ್ಲಿ ಸಂಪೂರ್ಣವಾಗಿ ತನಿಖೆ ನಡೆಸಿ ಎಲ್ಲಾ ಆರೋಪಿಗಳನ್ನೂ ಕಾನೂನು ಮುಂದಿಡಬೇಕು ಎಂದು ಆಗ್ರಹಿಸಿದ್ದಾರೆ.

ಸಿಎಂ ಏನಂದ್ರು?

ಬಾಗಲಕೋಟೆಯಲ್ಲಿ ನಡೆದ ಕಲ್ಲು ತೂರಾಟವನ್ನು ಸಿಎಂ ತೀವ್ರವಾಗಿ ಖಂಡಿಸಿದ್ದಾರೆ. ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಅವರು, ಘಟನೆ ಶಾಂತಿ–ಸೌಹಾರ್ದತೆಗೆ ಮಾರಕ ಎಂದಿದ್ದಾರೆ. ನಿಷ್ಪಕ್ಷಪಾತ ತನಿಖೆಗೆ ಸೂಚನೆ ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ನಿಶ್ಚಿತ ಎಂದು ಎಚ್ಚರಿಸಿ, ಸಾರ್ವಜನಿಕರು ಪ್ರಚೋದನೆಗಳಿಗೆ ಕಿವಿಗೊಡದೆ ಸಂಯಮದಿಂದ ವರ್ತಿಸಬೇಕು ಎಂದು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:59 am, Fri, 20 February 26

Follow Us
Ravi H Mooki
Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More