Sakutumba Sametha Movie: ‘ಸಕುಟುಂಬ ಸಮೇತ’ ಚಿತ್ರ ವೀಕ್ಷಿಸಿ ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ ಹೇಳಿದ್ದೇನು?

Rakshith Shetty | Raj B Shetty: ‘ಸಕುಟುಂಬ ಸಮೇತ’ ಚಿತ್ರ ವೀಕ್ಷಿಸಿ ರಕ್ಷಿತ್ ಶೆಟ್ಟಿ ಹಾಗೂ ರಾಜ್​ ಬಿ ಶೆಟ್ಟಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

TV9kannada Web Team

| Edited By: shivaprasad.hs

May 20, 2022 | 10:22 AM

ಸ್ಯಾಂಡಲ್​ವುಡ್​ನಲ್ಲಿ ಇಂದು (ಮೇ 20) ಒಟ್ಟು 11 ಚಿತ್ರಗಳು ತೆರೆಗೆ ಬಂದಿವೆ. ಅವುಗಳಲ್ಲಿ ‘ಸಕುಟುಂಬ ಸಮೇತ’ (Sakutumba Sametha Movie) ಚಿತ್ರವೂ ಒಂದು. ಟ್ರೈಲರ್ ಮೂಲಕ ಗಮನ ಸೆಳೆದಿರುವ ಈ ಚಿತ್ರ ನಿರೀಕ್ಷೆ ಹುಟ್ಟಿಸಿದೆ. ಚಿತ್ರದ ಪ್ರೀಮಿಯರ್ ನಂತರ ಮಾತನಾಡಿರುವ ನಿರ್ಮಾಪಕ ರಕ್ಷಿತ್ ಶೆಟ್ಟಿ (Rakshith Shetty) ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘‘ಎಲ್ಲರೂ ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿ’’ ಎಂದು ಮನವಿ ಮಾಡಿರುವ ಅವರು, ‘‘ಇಂತಹ ಕುಟುಂಬವರೊಂದಿಗೆ ನೋಡುವಂತಹ ಚಿತ್ರಗಳು ಬರುವುದು ಕಡಿಮೆ. ಚಿತ್ರದಲ್ಲಿ ಒಳ್ಳೆಯ ಬರವಣಿಗೆ ಇದೆ. ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ಯಾರೂ ನಟಿಸುತ್ತಿದ್ದಾರೆ ಎಂದನ್ನಿಸುವುದಿಲ್ಲ’’ ಎಂದಿದ್ದಾರೆ. ‘‘ನೀವು ಚಿತ್ರ ನಿರ್ಮಿಸಲು ಯಾವೆಲ್ಲಾ ಅಂಶಗಳಿರಬೇಕು?’’ ಎಂಬ ಪ್ರಶ್ನೆಗೆ ಉತ್ತರಿಸಿದ ರಕ್ಷಿತ್, ‘‘ಸ್ಕ್ರಿಪ್ಟ್​ ಚೆನ್ನಾಗಿರಬೇಕು. ಡೈರೆಕ್ಟರ್​ ಟೆಕ್ನಿಕಲ್​ ಆಗಿ ಉತ್ತಮವಾಗಿರಬೇಕು. ಆಗ ನಿರ್ಮಾಣ ಮಾಡುತ್ತೇನೆ’’ ಎಂದಿದ್ದಾರೆ.

ಚಿತ್ರ ವೀಕ್ಷಿಸಿದ ರಾಜ್​ ಬಿ ಶೆಟ್ಟಿ ಮಾತನಾಡಿ, ‘‘ಈ ಕತೆಯನ್ನು ಇಷ್ಟು ಎಂಗೇಜಿಂಗ್ ಆಗಿ ಹೇಳಿದ ಬರಹಗಾರ ಹಾಗೂ ನಿರ್ದೇಶಕರಿಗೆ ಅಭಿನಂದನೆ ಹೇಳುತ್ತೇನೆ’’ ಎಂದಿದ್ದಾರೆ. ಕಲಾವಿದರ ಶ್ರಮವನ್ನೂ ಶ್ಲಾಘಿಸಿದ್ದಾರೆ ರಾಜ್. ಚಿತ್ರದಲ್ಲಿ ಪಂಚಿಂಗ್ ಡೈಲಾಗ್ ಇಲ್ಲದೇ ಶಿಳ್ಳೆ ಹೊಡೆಯುತ್ತಿದ್ದೆ. ಆ ರೀತಿ ದೃಶ್ಯಗಳನ್ನು ಕಟ್ಟಿಕೊಡಲಾಗಿದೆ ಎಂದಿದ್ದಾರೆ.

ಸಿರಿ ರವಿಕುಮಾರ್, ಭರತ್ ಬಿಜಿ, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಗಣವಿರುವ ‘ಸಕುಟುಂಬ ಸಮೇತ’ ಚಿತ್ರಕ್ಕೆ ರಾಹುಲ್ ಪಿಕೆ ನಿರ್ದೇಶನ ಮಾಡಿದ್ದಾರೆ. ಮಿಧುನ್​ ಮುಕುಂದನ್​ ಸಂಗೀತ ನೀಡಿದ್ದು, ಕರಮ್​ ಚಾವ್ಲಾ ಹಾಗೂ ಸಂದೀಪ್​ ಛಾಯಾಗ್ರಹಣ ಮಾಡಿದ್ದಾರೆ. ಭರತ್​ ಎಂ.ಸಿ. ಸಂಕಲನ ಮಾಡಿದ್ದಾರೆ. ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ಜಯಲಕ್ಷ್ಮಿ ಪಾಟೀಲ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.  ಪರಂವಾ ಸ್ಟುಡಿಯೋಸ್ ಬ್ಯಾನರ್​ನಲ್ಲಿ ರಕ್ಷಿತ್​ ಶೆಟ್ಟಿ ಬಂಡವಾಳ ಹೂಡಿದ್ದಾರೆ.

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada