ವಾಸ್ತುಶಾಸ್ತ್ರ-ವಾಸ್ತುಶಿಲ್ಪ ಆಧಾರದಲ್ಲಿ ದೇಗುಲಗಳ ಕುರುಹು ಪತ್ತೆಹಚ್ಚಬಹುದಾಗಿದೆ! ಹಾಗಾದರೆ ಮಸೀದಿಗಳಲ್ಲಿನ ಹಿಂದೂ ವಾಸ್ತುಶಾಸ್ತ್ರ ಏನನ್ನು ಸೂಚಿಸುತ್ತದೆ? -ಟಿವಿ 9​ ಚರ್ಚೆ

TV9 Kannada Digital Live: ಈಗ ಭಾರತದಲ್ಲಿ ಚರ್ಚೆಯ ಮುನ್ನೆಲೆಗೆ ಬಂದಿರುವುದೇ ಈ ವಾಸ್ತುಶಾಸ್ತ್ರ ಮತ್ತು ವಾಸ್ತುಶಿಲ್ಪಗಳು! ಇವೆರಡಕ್ಕೂ ಹೊಂದಿಕೊಂಡಂತೆ ದೇಶದ ಅನೇಕ ಭಾಗಗಳಲ್ಲಿ ದೇಗುಲಗಳ ಕುರುಹುಗಳನ್ನು ಪತ್ತೆಹಚ್ಚಬಹುದಾಗಿದೆ. ಅರಬ್​ ರಾಷ್ಟ್ರಗಳಲ್ಲಿರುವ ಮಸೀದಿಗಳ ವಾಸ್ತು ಏನು, ಹಿಂದೂ ರಾಷ್ಟ್ರದಲ್ಲಿನ ದೇವಸ್ಥಾನಗಳ ವಾಸ್ತು ಏನು? ಅವುಗಳ ನಡುವಣ ವ್ಯತ್ಯಾಸ, ಭಿನ್ನತೆ, ಸ್ಪಷ್ಟತೆಗಳು ಏನು?

TV9kannada Web Team

| Edited By: sadhu srinath

May 20, 2022 | 3:35 PM

ವಾಸ್ತು (Vastu) ಎಂಬುದು ಇಂದು ನಿನ್ನೆಯದ್ದಲ್ಲ. ಅನಾದಿ ಕಾಲದಿಂದಲೂ ಆಚರಣೆಯಲ್ಲಿರುವ ಪದ್ಧತಿಗಳು ಅದರಲ್ಲಿವೆ. ಬಹುಶಃ ಭೂಮಿಯ ಜೊತೆಜೊತೆಗೆ ವಾಸ್ತು ಹುಟ್ಟಿಕೊಂಡಿರಬೇಕು. ವಾಸ್ತು ಶಾಸ್ತ್ರ, ಅದರ ಆಚರಣೆ ಭೂಮಿಯ ಮೇಲೆ ಮೂಲೆ ಮೂಲೆಯಲ್ಲೂ ಇದೆ. ಆಯಾ ಭೌಗೋಳಿಕ ಹಿನ್ನೆಲೆಗೆ, ಆಯಾ ಜನಾಂಗಕ್ಕೆ, ಅವರವರ ಅನುಕೂಲಕ್ಕೆ ತಕ್ಕಂತೆ ವಾಸ್ತು ಶಾಸ್ತ್ರ ಅಳವಡಿಸಿಕೊಳ್ಳಲಾಗಿದೆ. ಇನ್ನು ಭಾರತದ ವಿಚಾರಕ್ಕೆ ಬಂದರೆ ವಾಸ್ತು ಶಾಸ್ತ್ರವೆಂಬುದು ಬಹುಸಂಖ್ಯಾತ ಹಿಂದೂಗಳ ಮನ-ಮನೆಯಲ್ಲಿ ಭದ್ರವಾಗಿ ತಳವೂರಿದೆ. ಅದರ ವಿಸ್ತರಣೆಯಾಗಿ ಕಚೇರಿ, ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲೂ ವಾಸ್ತು ಶಾಸ್ತ್ರದ ಕುರುಹುಗಳು ಖಚಿತವಾಗಿ ಕಂಡುಬುರುತ್ತವೆ. ಆ ವಾಸ್ತುವಿನ ನೆಲೆಗಟ್ಟಿನಲ್ಲಿಯೆ ಇದಮಿತ್ಥಂ ಎಂದು ಸ್ಥಳ ಮಹಾತ್ಮೆಯನ್ನು ಸಾದರಪಡಿಸಬಹುದು. ಅಷ್ಟರಮಟ್ಟಿಗೆ ಅನಾದಿ ಕಾಲದಿಂದಲೂ ಹಿಂದೂ ಧಾರ್ಮಿಕರು ವಾಸ್ತುವನ್ನು ನಂಬಿಕೊಂಡು, ಆಚರಿಸಿಕೊಂಡು, ಚಾಚೂತಪ್ಪದೆ ಅಳವಡಿಸಿಕೊಂಡು ಬಂದಿದ್ದಾರೆ.

ಇಂತಹ ವಾಸ್ತುಶಾಸ್ತ್ರಕ್ಕೆ ಇಂಬುಕೊಡುವುದು ವಾಸ್ತುಶಿಲ್ಪಗಳು ಎಂಬುದರಲ್ಲಿ ಎರಡು ಮಾತಿಲ್ಲ. ಈಗ ಭಾರತದಲ್ಲಿ ಚರ್ಚೆಯ ಮುನ್ನೆಲೆಗೆ ಬಂದಿರುವುದೇ ಈ ವಾಸ್ತುಶಾಸ್ತ್ರ ಮತ್ತು ವಾಸ್ತುಶಿಲ್ಪಗಳು! ವಾಸ್ತುಶಾಸ್ತ್ರ ಮತ್ತು ವಾಸ್ತುಶಿಲ್ಪಗಳು ಒಂದಕ್ಕೊಂದು ಬಹುತೇಕ ಬೆಸೆದುಕೊಂಡಿರುತ್ತವೆ. ಇವೆರಡಕ್ಕೂ ಹೊಂದಿಕೊಂಡಂತೆ ದೇಶದ ಅನೇಕ ಭಾಗಗಳಲ್ಲಿ ದೇಗುಲಗಳ ಕುರುಹುಗಳನ್ನು ಪತ್ತೆಹಚ್ಚಬಹುದಾಗಿದೆ. ಅರಬ್​ ರಾಷ್ಟ್ರಗಳಲ್ಲಿರುವ ಮಸೀದಿಗಳ (masjid) ವಾಸ್ತು ಏನು, ಹಿಂದೂ ರಾಷ್ಟ್ರದಲ್ಲಿನ ದೇವಸ್ಥಾನಗಳ (hindu temple) ವಾಸ್ತು ಏನು? ಅವುಗಳ ನಡುವಣ ವ್ಯತ್ಯಾಸ, ಭಿನ್ನತೆ, ಸ್ಪಷ್ಟತೆಗಳು ಏನು?

ಇದನ್ನೂ ಓದಿ: Gyanvapi mosque case ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಮಾತ್ರವಲ್ಲ ತ್ರಿಶೂಲ, ಡಮರು, ಶಿಲ್ಪಗಳೂ ಸಿಕ್ಕಿವೆ ಎಂದ ಸಮೀಕ್ಷೆ ವರದಿ

ಉತ್ತರ ಭಾರತದ ಕೆಲವು ಮಸೀದಿಗಳಲ್ಲಿ ಹಿಂದೂ ದೇವಸ್ಥಾನಗಳ ವಾಸ್ತುಶಿಲ್ಪ ಕಂಡ ಹಿನ್ನೆಲೆಯಲ್ಲಿ, ಕೆಲವರು ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ. ಇಂತಹ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಬಾರದು ಎಂಬ ವಿಚಾರವನ್ನು ನ್ಯಾಯಾಲಯದ ಮುಂದಿಟ್ಟಿದ್ದಾರೆ. ಇದು ಸರಿಯೇ? ತಪ್ಪೆ? ಈ ವಿಚಾರವನ್ನಿಟ್ಟುಕೊಂಡು ಇಂದಿನ ಡಿಜಿಟಲ್ ಲೈವ್ ನಲ್ಲಿ ಆ್ಯಂಕರ್​ ಚಂದ್ರಮೋಹನ್​ ಚರ್ಚೆಯನ್ನು ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ರ ಈ ಚರ್ಚೆಗೆ ನಿಮಗೆ ಸ್ವಾಗತ (TV 9 Kannada Digital Live)

ಇದನ್ನೂ ಓದಿ: ದೃಷ್ಟಿ ಭ್ರಮೆ ಡಿಜಿಟಲ್ ಯುಗದ ಸೃಷ್ಟಿ ಅಲ್ಲ, ನಮ್ಮ ಶಿಲ್ಪಿಗಳು 9 ಶತಮಾನಗಳಷ್ಟು ಹಿಂದೆಯೇ ದೇವಾಲಯದಲ್ಲಿ ಅಂಥದನ್ನು ಕೆತ್ತಿದ್ದಾರೆ!!

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada