Gyanvapi mosque case ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಮಾತ್ರವಲ್ಲ ತ್ರಿಶೂಲ, ಡಮರು, ಶಿಲ್ಪಗಳೂ ಸಿಕ್ಕಿವೆ ಎಂದ ಸಮೀಕ್ಷೆ ವರದಿ

ವಿವಾದಿತ ಪ್ರದೇಶದ ಬ್ಯಾರಿಕೇಡಿಂಗ್‌ನ ಹೊರಗೆ, ಹಳೆಯ ದೇವಾಲಯದ ಅವಶೇಷಗಳು ಕಂಡುಬಂದಿವೆ. ಅದರಲ್ಲಿ ದೇವರು,  ದೇವತೆಗಳ ಶಿಲ್ಪಗಳು ಮತ್ತು ಕಮಲದ ಮಾದರಿಗಳು ಕಂಡುಬಂದವು. ಮಧ್ಯದಲ್ಲಿ ಶೇಷನಾಗನ ಕಲ್ಲಿನ ಶಿಲ್ಪಗಳು ಮತ್ತು "ನಾಗನ ಹೆಡೆ"ಯಂಥಾ ಮಾದರಿಗಳು ಕಂಡುಬಂದಿದೆ.

Gyanvapi mosque case ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಮಾತ್ರವಲ್ಲ ತ್ರಿಶೂಲ, ಡಮರು, ಶಿಲ್ಪಗಳೂ ಸಿಕ್ಕಿವೆ ಎಂದ ಸಮೀಕ್ಷೆ ವರದಿ
ಜ್ಞಾನವಾಪಿ ಮಸೀದಿImage Credit source: PTI
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: May 19, 2022 | 9:00 PM

ಜ್ಞಾನವಾಪಿ ಮಸೀದಿಯಲ್ಲಿ (Gyanvapi mosque)ವಿಡಿಯೊ ಚಿತ್ರೀಕರಣ ಸಮೀಕ್ಷೆ ನಡೆಸಿದಾಗ ಹಳೆಯ ದೇವಾಲಯದ ಅವಶೇಷಗಳು, ತ್ರಿಶೂಲ್, ಡಮರು, ಶೇಷನಾಗನ ಹೆಡೆ, ಮತ್ತು ಹಲವಾರು ಹಿಂದೂ ದೇವತೆಗಳ ಶಿಲ್ಪಗಳ ತುಂಡು ಸಿಕ್ಕಿದೆ ಎಂದು ಸಮೀಕ್ಷಾ ವರದಿಯಲ್ಲಿದೆ (Survey  Report) ಎಂಬುದಾಗಿ ಇಂಡಿಯಾಟಿವಿ ನ್ಯೂಸ್  ವರದಿ ಮಾಡಿದೆ. ವಾರಣಾಸಿ ನ್ಯಾಯಾಲಯಕ್ಕೆ (Varanasi court) ಬುಧವಾರ ಸಂಜೆ ಸಮೀಕ್ಷೆ ವರದಿ ಸಲ್ಲಿಕೆಯಾಗಿದೆ. ಅಡ್ವೊಕೇಟ್-ಕಮಿಷನರ್ ಆಗಿದ್ದು ಈಗ ವಜಾಗೊಂಡಿರುವ ಅಜಯ್ ಕುಮಾರ್ ಮಿಶ್ರಾ (Ajay Kumar Mishra) ಅವರು ಬುಧವಾರ ವರದಿ ಸಲ್ಲಿಸಿದ್ದಾರೆ. ವಿವಾದಿತ ಪ್ರದೇಶದ ಬ್ಯಾರಿಕೇಡಿಂಗ್‌ನ ಹೊರಗೆ, ಹಳೆಯ ದೇವಾಲಯದ ಅವಶೇಷಗಳು ಕಂಡುಬಂದಿವೆ. ಅದರಲ್ಲಿ ದೇವರು,  ದೇವತೆಗಳ ಶಿಲ್ಪಗಳು ಮತ್ತು ಕಮಲದ ಮಾದರಿಗಳು ಕಂಡುಬಂದವು. ಮಧ್ಯದಲ್ಲಿ ಶೇಷನಾಗನ ಕಲ್ಲಿನ ಶಿಲ್ಪಗಳು ಮತ್ತು “ನಾಗನ ಹೆಡೆ”ಯಂಥಾ ಮಾದರಿಗಳು ಕಂಡುಬಂದಿದೆ. ಚಪ್ಪಡಿಗಳು ದೊಡ್ಡ ಸೌಧದ ಭಾಗವಾಗಿರುವಂತೆ ತೋರುತ್ತಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. “ಸಿಂದೂರಿ (ಸಿಂಧೂರದ ಬಣ್ಣ) ಹೊಂದಿರುವ ನಾಲ್ಕು ವಿಗ್ರಹಗಳಂತಹ ರಚನೆಗಳನ್ನು ಗಮನಿಸಲಾಯಿತು. ದೀಪಾಲಂಕಾರದ ವ್ಯವಸ್ಥೆ ಇದ್ದಂತೆ ತೋರಿತು. ಕಲಾತ್ಮಕ ಮಾದರಿಗಳನ್ನು ಹೊಂದಿರುವ ಕಲ್ಲಿನ ಚಪ್ಪಡಿಗಳನ್ನು ಮಸೀದಿಯ ಹಿಂದೆ ಪಶ್ಚಿಮ ಗೋಡೆಯಲ್ಲಿ ಇರಿಸಲಾಗಿದ್ದು, ದೊಡ್ಡ ರಚನೆಯೊಂದಿಗೆ ಸಂಬಂಧವಿರುವಂತೆ ತೋರುತ್ತಿದೆ ಎಂದು ವರದಿ ಹೇಳಿದೆ. ಮಿಶ್ರಾ ಅವರ ವರದಿಯಲ್ಲಿ ಸಿಂಧೂರದ ಗುರುತುಗಳಿರುವ ಮೂರು ನಾಲ್ಕು ಶಿಲ್ಪಗಳು ಮತ್ತು ‘ಬಾಗಿಲನಂತಿರುವ’ ಕಲ್ಲಿನ ಚಪ್ಪಡಿಗಳ ‘ಶೃಂಗಾರ ಗೌರಿ’ ಎಂದು ನಂಬಲಾಗಿದೆ.

ವರದಿಗಳ ಪ್ರಕಾರ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ಅರ್ಜಿದಾರರ ಪರವಾಗಿ ಹಾಜರಾಗಿದ್ದ ವಕೀಲ ಅಜಯ್ ಮಿಶ್ರಾ ಅವರು, ಸುಮಾರು 500 ರಿಂದ 600 ವರ್ಷಗಳಷ್ಟು ಹಳೆಯದಾದ ನೆಲಮಾಳಿಗೆಗೆ ಹೋಗಲು ನಮ್ಮನ್ನು ಅನುಮತಿಸಲಿಲ್ಲ ಎಂದು ಹೇಳಿದರು. ಸಮೀಕ್ಷೆಯ ಸಂದರ್ಭದಲ್ಲಿ ಸ್ಥಳೀಯ ಆಡಳಿತವು ಹೆಚ್ಚು ಸಹಕರಿಸಲಿಲ್ಲ ಮತ್ತು ದೂರದಿಂದಲೇ ಅವರು ನಮ್ಮನ್ನು ದಿಟ್ಟಿಸುತ್ತಿದ್ದರು ಎಂದು ಹೇಳಿದ್ದಾರೆ.

ಮಸೀದಿ ಆವರಣದೊಳಗೆ ಗುಮ್ಮಟದ ಆಕಾರದ ರಚನೆ ಇತ್ತು, ಆದರೆ ವರದಿಯಲ್ಲಿ ಅದನ್ನು ಉಲ್ಲೇಖಿಸಿಲ್ಲ ಎಂದು ಅಜಯ್ ಮಿಶ್ರಾ ಸ್ಪಷ್ಟಪಡಿಸಿದ್ದಾರೆ. ಹಿಂದೂಗಳು ಶಿವಲಿಂಗದ ರಚನೆ ಎಂದು ಹೇಳಿದರೆ, ಮುಸ್ಲಿಮರು ಇದು ಕಾರಂಜಿ ಎಂದು ವಾದಿಸಿದ್ದಾರೆ.

ಇದನ್ನೂ ಓದಿ
Image
Gyanvapi Mosque row ಜ್ಞಾನವಾಪಿ ಮಸೀದಿ ಪ್ರಕರಣ: ವಾರಣಾಸಿ ನ್ಯಾಯಾಲಯಕ್ಕೆ ವಿಡಿಯೊ ಚಿತ್ರೀಕರಣದ ವರದಿ ಸಲ್ಲಿಕೆ, ವಿಚಾರಣೆ ನಾಳೆಗೆ ಮುಂದೂಡಿದ ಸುಪ್ರೀಂಕೋರ್ಟ್
Image
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಬಗ್ಗೆ ಆಕ್ಷೇಪಾರ್ಹ ಪೋಸ್ಟ್; ಹಿಂದೂ ಕಾಲೇಜಿನ ಪ್ರೊಫೆಸರ್ ವಿರುದ್ಧ ಕೇಸು ದಾಖಲು
Image
Fact Check ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗಿರುವ ಫೋಟೊ ವಿಯೆಟ್ನಾಂನದ್ದು
Image
Gyanvapi Mosque Survey ಶಿವಲಿಂಗವನ್ನು ರಕ್ಷಿಸಲು ಸುಪ್ರೀಂ ಆದೇಶ, ಮಸೀದಿಗೆ ಮುಸ್ಲಿಮರ ಪ್ರವೇಶಕ್ಕೆ ನಿರ್ಬಂಧಗಳಿಲ್ಲ

ವಾರಣಾಸಿ ನ್ಯಾಯಾಲಯ ನೇಮಿಸಿದ ಆಯೋಗವು ಕಾಶಿ ವಿಶ್ವನಾಥ ದೇವಸ್ಥಾನ-ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆಯನ್ನು ನಡೆಸಿತು. ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ-ಜ್ಞಾನವಾಪಿ ಮಸೀದಿ ಸಂಕೀರ್ಣದ ಮೂರು ದಿನಗಳ ನ್ಯಾಯಾಲಯದ ಮೇಲ್ವಿಚಾರಣೆಯ ವಿಡಿಯೊಗ್ರಫಿ ಸಮೀಕ್ಷೆ ಸೋಮವಾರ ಮುಕ್ತಾಯವಾಯಿತು. ಸಮಿತಿಯು ಸಂಕೀರ್ಣದಲ್ಲಿ ಶಿವಲಿಂಗವನ್ನು ಕಂಡುಕೊಂಡಿದೆ ಎಂದು ಪ್ರಕರಣದ ಹಿಂದೂ ಅರ್ಜಿದಾರ ಸೋಹನ್ ಲಾಲ್ ಆರ್ಯ ಸೋಮವಾರ ಹೇಳಿದ್ದಾರೆ. ಮಸೀದಿ ಸಮೀಕ್ಷೆಗಾಗಿ ನ್ಯಾಯಾಲಯದ ಆಯೋಗದೊಂದಿಗೆ ಬಂದ ಆರ್ಯ ಅವರು “ನಿರ್ಣಾಯಕ ಪುರಾವೆಗಳು” ಸಿಕ್ಕಿವೆ ಎಂದು ಹೇಳಿದರು.

ಸಮೀಕ್ಷೆಯ ಮುಕ್ತಾಯದ ನಂತರ ವಾರಣಾಸಿಯ ನ್ಯಾಯಾಲಯವು ವಾರಣಾಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ ಅವರಿಗೆ “ಶಿವಲಿಂಗ ಪತ್ತೆಯಾದ ಪ್ರದೇಶವನ್ನು ನಿರ್ಬಂಧಿಸಲು” ಆದೇಶಿಸಿತು. ಮಂಗಳವಾರ ಜ್ಞಾನವಾಪಿ ಮಸೀದಿ ಪ್ರಕರಣವನ್ನು ಆಲಿಸಿದ ಸುಪ್ರೀಂ ಕೋರ್ಟ್, ಮುಸ್ಲಿಂ ಸಮುದಾಯದ ಆರಾಧನೆಯ ಹಕ್ಕಿಗೆ ಅಡ್ಡಿಯಾಗದಂತೆ ಶಿವಲಿಂಗ ಪತ್ತೆಯಾದ ಪ್ರದೇಶವನ್ನು ರಕ್ಷಿಸುವಂತೆ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಆದೇಶಿಸಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ