AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gyanvapi Mosque Survey ಶಿವಲಿಂಗವನ್ನು ರಕ್ಷಿಸಲು ಸುಪ್ರೀಂ ಆದೇಶ, ಮಸೀದಿಗೆ ಮುಸ್ಲಿಮರ ಪ್ರವೇಶಕ್ಕೆ ನಿರ್ಬಂಧಗಳಿಲ್ಲ

'ಶಿವಲಿಂಗ' ಪತ್ತೆಯಾದ ಆವರಣವನ್ನು ನಿರ್ಬಂಧಿಸುವಂತೆ ವಾರಣಾಸಿ ಜಿಲ್ಲಾ ಮೆಜಿಸ್ಟ್ರೇಟ್ ಗೆ ವಿಚಾರಣಾ ನ್ಯಾಯಾಲಯವು ನಿರ್ದೇಶನ ನೀಡಿತ್ತು. ಅದೇ ವೇಳೆ 'ವಾಜುಖಾನಾ' ಪ್ರವೇಶವನ್ನು ನಿರ್ಬಂಧಿಸಿದ್ದು,ಅದನ್ನು ಬಳಸಲಾಗುವುದಿಲ್ಲ. ಕೇವಲ 20 ಜನರಿಗೆ ಮಾತ್ರ ಪ್ರಾರ್ಥನೆಗೆ ಅವಕಾಶ ನೀಡಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ.

Gyanvapi Mosque Survey ಶಿವಲಿಂಗವನ್ನು ರಕ್ಷಿಸಲು ಸುಪ್ರೀಂ ಆದೇಶ, ಮಸೀದಿಗೆ ಮುಸ್ಲಿಮರ ಪ್ರವೇಶಕ್ಕೆ ನಿರ್ಬಂಧಗಳಿಲ್ಲ
ಜ್ಞಾನವಾಪಿ ಮಸೀದಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:May 17, 2022 | 6:54 PM

Share

ಜ್ಞಾನವಾಪಿ ಮಸೀದಿಯಲ್ಲಿ (Gyanvapi Mosque) ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾದ ಪ್ರದೇಶವನ್ನು ರಕ್ಷಿಸಬೇಕು ಆದರೆ ಮಸೀದಿಗೆ ನಿರ್ಬಂಧ ಹಾಕಬಾರದು. ನಮಾಜ್ ಮಾಡಲು ಬಯಸುವವರಿಗೆ ಹಾಗೆ ಮಾಡಲು ಅವಕಾಶ ನೀಡಬೇಕು. ಮುಸ್ಲಿಮರು ಪ್ರವೇಶಿಸುವ ಮತ್ತು ಪೂಜಿಸುವ ಹಕ್ಕಿಗೆ ಧಕ್ಕೆಯಾಗದಂತೆ ಶಿವಲಿಂಗ ಇರುವ ಪ್ರದೇಶವನ್ನು ರಕ್ಷಿಸುವಂತೆ ಸುಪ್ರೀಂಕೋರ್ಟ್ (Supreme Court) ಮಂಗಳವಾರ ಆದೇಶ ಹೊರಡಿಸಿದೆ. ಮೇ 19 ರಂದು ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮತ್ತೊಮ್ಮೆ ನಡೆಸಲಿದೆ. ವಿಚಾರಣೆಯ ಸಂದರ್ಭದಲ್ಲಿ ಮಸೀದಿ ಸಮಿತಿಯ ಪರವಾಗಿ ಹಾಜರಾದ ಹಿರಿಯ ವಕೀಲ ಹುಝೆಫಾ ಅಹ್ಮದಿ ಅವರು ಆವರಣವನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಮತ್ತು ಆದೇಶಗಳು ಕಾನೂನುಬಾಹಿರವೆಂದು ವಾದಿಸಿದರು. “ಆವರಣವನ್ನು ನಿರ್ಬಂಧಿಸಿದರೆ ಯಥಾಸ್ಥಿತಿಯಲ್ಲಿ ಬದಲಾವಣೆ ಇರುತ್ತದೆ. ಪೂಜಾ ಸ್ಥಳಗಳ ಕಾಯಿದೆಯ ಸೆಕ್ಷನ್ 3 ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸುತ್ತದೆ ಎಂದು ಅವರು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಪಿಎಸ್ ನರಸಿಂಹ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು ಎಂದು ಎಎನ್‌ಐ ವರದಿ ಮಾಡಿದೆ. ‘ಶಿವಲಿಂಗ’ ಪತ್ತೆಯಾದ ಆವರಣವನ್ನು ನಿರ್ಬಂಧಿಸುವಂತೆ ವಾರಣಾಸಿ (Varanasi) ಜಿಲ್ಲಾ ಮೆಜಿಸ್ಟ್ರೇಟ್ ಗೆ ವಿಚಾರಣಾ ನ್ಯಾಯಾಲಯವು ನಿರ್ದೇಶನ ನೀಡಿತ್ತು. ಅದೇ ವೇಳೆ ‘ವಾಜುಖಾನಾ’ ಪ್ರವೇಶವನ್ನು ನಿರ್ಬಂಧಿಸಿದ್ದು,ಅದನ್ನು ಬಳಸಲಾಗುವುದಿಲ್ಲ. ಕೇವಲ 20 ಜನರಿಗೆ ಮಾತ್ರ ಪ್ರಾರ್ಥನೆಗೆ ಅವಕಾಶ ನೀಡಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಮೇ 19 ಮತ್ತೆ ವಿಚಾರಣೆ

ಇದೇ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಗುರುವಾರಕ್ಕೆ ಮುಂದೂಡಿದೆ. “ನಾವು ಅದನ್ನು ಹೊಂದಿಸಬೇಕಾಗಿದೆ ಮುಸ್ಲಿಮರು ಪ್ರವೇಶಿಸುವ ಮತ್ತು ಪೂಜಿಸುವ ಹಕ್ಕಿಗೆ ಧಕ್ಕೆಯಾಗದಂತೆ ಶಿವಲಿಂಗವನ್ನು ರಕ್ಷಿಸುವ ಪ್ರದೇಶವನ್ನು ವಾರಣಾಸಿಯ ಡಿಎಂ ಖಚಿತಪಡಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸುತ್ತದೆ” ಎಂದು ನ್ಯಾಯಾಲಯ ಹೇಳಿದೆ. “ಶಿವಲಿಂಗ ಪತ್ತೆಯಾದ ಈ ಆದೇಶದ ಭಾಗವನ್ನು ನಾವು ರಕ್ಷಿಸುತ್ತೇವೆ. ಆದರೆ ಪಾಯಿಂಟ್ 1,2 ಮತ್ತು 3 ರಲ್ಲಿನ ಉಳಿದ ಆದೇಶವನ್ನು ತಡೆಹಿಡಿಯಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿGyanvapi Masjid Survey ಅಡ್ವೊಕೇಟ್-ಕಮಿಷನರ್ ಅಜಯ್ ಮಿಶ್ರಾರನ್ನು ಹುದ್ದೆಯಿಂದ ವಜಾಗೊಳಿಸಿದ ವಾರಣಾಸಿ ಕೋರ್ಟ್

ವಾರಣಾಸಿ ನ್ಯಾಯಾಲಯದ ಆದೇಶದ ಬಗ್ಗೆ ಸ್ಪಷ್ಟತೆ ಬೇಕು

ಈ ಆದೇಶವು ಶಿವಲಿಂಗ ಪತ್ತೆಯಾದ ಪ್ರದೇಶವನ್ನು ನಿರ್ಬಂಧಿಸಲು ಮಾತ್ರವೇ ಅಥವಾ ಎಲ್ಲಾ ಮೂರು ಪ್ರಾರ್ಥನೆಗಳನ್ನು ಮಾಡಲು ಅವಕಾಶ ನೀಡುತ್ತದೆಯೇ ಎಂಬುದರ ಕುರಿತು ಸ್ಪಷ್ಟತೆ ಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಪ್ರತಿಕ್ರಿಯಿಸಲು ಒಂದು ದಿನದ ಸಮಯವನ್ನು ಕೇಳಿದ ಉತ್ತರ ಪ್ರದೇಶದ ಸಾಲಿಸಿಟರ್ ಜನರಲ್

ಉತ್ತರ ಪ್ರದೇಶ ರಾಜ್ಯದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಅವರು ಪ್ರತಿಕ್ರಿಯೆ ನೀಡಲು ಬುಧವಾರದವರೆಗೆ ಕಾಲಾವಕಾಶ ಕೋರಿದ್ದಾರೆ. “ಯಾವುದೇ ಅನಪೇಕ್ಷಿತ ಪರಿಣಾಮ ಉಂಟಾಗದಂತೆ ಇವುಗಳ ಕವಲುಗಳನ್ನು ನೋಡೋಣ” ಎಂದು ಅವರು ಹೇಳುವುದಾಗಿ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ  ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 5:24 pm, Tue, 17 May 22