AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಕ್ಷಣ ನೀತಿ ಕೇಸರಿಕರಣ: ಸ್ವಾತಂತ್ರ್ಯ ಹೋರಾಟಗಾರರನ್ನೇ ಕೈಬಿಟ್ಟು ದೇಶ ವಿಭಜಿಸಲು ಹೊರಟಿದ್ದ ಹೆಡ್ಗೆವಾರ್​​ ಭಾಷಣ ಸೇರಿಸಲಾಗುತ್ತಿದೆ – ಬಿ.ಕೆ. ಹರಿಪ್ರಸಾದ್ ಕಿಡಿಕಿಡಿ

ಹೆಡ್ಗೆವಾರ್ ಕೋಮುವಾದ ಪ್ರತಿನಿಧಿಸುವ ಸಂಘಟನೆ ಮುಖ್ಯಸ್ಥರಾಗಿದ್ದರು. ಸ್ವತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡವರನ್ನು ಮಾತ್ರ ಪಠ್ಯದಲ್ಲಿ ಸೇರಿಸಲಾಗುತ್ತಿತ್ತು. ಆದ್ರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಂಪೂರ್ಣವಾಗಿ RSS ಅಜೆಂಡಾ ಅನುಷ್ಠಾನಗೊಳಿಸುತ್ತಿದ್ದಾರೆ.

ಶಿಕ್ಷಣ ನೀತಿ ಕೇಸರಿಕರಣ: ಸ್ವಾತಂತ್ರ್ಯ ಹೋರಾಟಗಾರರನ್ನೇ ಕೈಬಿಟ್ಟು ದೇಶ ವಿಭಜಿಸಲು ಹೊರಟಿದ್ದ ಹೆಡ್ಗೆವಾರ್​​ ಭಾಷಣ ಸೇರಿಸಲಾಗುತ್ತಿದೆ - ಬಿ.ಕೆ. ಹರಿಪ್ರಸಾದ್ ಕಿಡಿಕಿಡಿ
ಬಿ.ಕೆ.ಹರಿಪ್ರಸಾದ್
TV9 Web
| Updated By: ಆಯೇಷಾ ಬಾನು|

Updated on: May 17, 2022 | 5:45 PM

Share

ದೆಹಲಿ: ರಾಜ್ಯ ಪಠ್ಯಪುಸ್ತಕ ಪರಿಷ್ಕರಣ ಸಮಿತಿ 2022-23ನೇ ಸಾಲಿನ ಶೈಕ್ಷಣಿಕ ವರ್ಷದಿಂದ 10ನೇ ತರಗತಿ ಕನ್ನಡ ವಿಷಯದ ಐದನೇ ಪಾಠಕ್ಕೆ ಕೆ. ಬಿ. ಹೆಡ್ಗೆವಾರ್(KB Hedgewar) ಸಾರ್ವಜನಿಕ ಭಾಷಣವನ್ನ ಸೇರಿಸಲು ಶಿಫಾರಸ್ಸು ಮಾಡಿದೆ. ಈ ವಿಚಾರ ಈಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಪಠ್ಯದಲ್ಲಿ ಆರ್ಎಸ್ಎಸ್(RSS) ಸಂಸ್ಥಾಪಕರ ಭಾಷಣ ಸೇರಿಸುವುದನ್ನ ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್, ನಾಗಪುರ ಯುನಿವರ್ಸಿಟಿ ಅಜೆಂಡಾವನ್ನ ಪಠ್ಯ ಪುಸ್ತಕದಲ್ಲಿ ಸೇರ್ಪಡೆ ಮಾಡಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಲ್ಲಿ ಶಿಕ್ಷಣವನ್ನ ಕೇಸರಿಕರಣ ಮಾಡಲಾಗುತ್ತಿದೆ. ಮಕ್ಕಳಲ್ಲಿ ವಿಷ ಬೀಜ ಬಿತ್ತಿ ಭಯಾನಕ ವಾತವರಣ ಸೃಷ್ಠಿ ಮಾಡಲು ಹುನ್ನಾರ ನಡೆಯುತ್ತಿದೆ ಎಂದು ವಿಧಾನ ಸಭೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್(BK Hariprasad) ಆರೋಪಿಸಿದ್ದಾರೆ.

ಹೆಡ್ಗೆವಾರ್ ಕೋಮುವಾದ ಪ್ರತಿನಿಧಿಸುವ ಸಂಘಟನೆ ಮುಖ್ಯಸ್ಥರಾಗಿದ್ದರು. ಸ್ವತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡವರನ್ನು ಮಾತ್ರ ಪಠ್ಯದಲ್ಲಿ ಸೇರಿಸಲಾಗುತ್ತಿತ್ತು. ಆದ್ರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಂಪೂರ್ಣವಾಗಿ RSS ಅಜೆಂಡಾ ಅನುಷ್ಠಾನಗೊಳಿಸುತ್ತಿದ್ದಾರೆ. ಅದರಲ್ಲೂ ಬಸವಣ್ಣ, ಕುವೆಂಪು, ಕನಕದಾಸರ ನಾಡಲ್ಲಿ ಹೆಡ್ಗೆವಾರ್ ಪಠ್ಯ ಸೇರಿಸಿದ್ದಾರೆ. ಸಣ್ಣ ಮಕ್ಕಳಲ್ಲಿ ದ್ವೇಷದ ಭಾವನೆ ಬಿತ್ತಲೆಂದೇ ಈ ಕೃತ್ಯಮಾಡಲಾಗಿದೆ. ಹೆಡ್ಗೆವಾರ್ ಭಾಷಣವನ್ನು ಪಠ್ಯದಲ್ಲಿ ಸೇರಿಸಿರುವುದು ಸರಿಯಲ್ಲ. ತಕ್ಷಣವೇ ಪಠ್ಯದಿಂದ ಹೆಡ್ಗೆವಾರ್ ಭಾಷಣವನ್ನು ತೆಗೆಯಬೇಕು ಎಂದು ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದಾರೆ. ಇದನ್ನೂ ಓದಿ:Breaking Gyanvapi Mosque Survey ಶಿವಲಿಂಗವನ್ನು ರಕ್ಷಿಸಲು ಸುಪ್ರೀಂ ಆದೇಶ, ಮಸೀದಿಗೆ ಮುಸ್ಲಿಮರ ಪ್ರವೇಶಕ್ಕೆ ನಿರ್ಬಂಧಗಳಿಲ್ಲ

ಇನ್ನು ಪಠ್ಯದಿಂದ ಭಗತ್ ಸಿಂಗ್ ಪಾಠವನ್ನು ಕೈಬಿಟ್ಟಿರುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಭಗತ್ ಸಿಂಗ್ ಮಾತ್ರವಲ್ಲ, ಬಸವಣ್ಣ, ನಾರಾಯಣಗುರು ಕುವೆಂಪು ವಿಚಾರವನ್ನೂ ಪಠ್ಯದಿಂದ ತೆಗೆದಿದ್ದಾರೆ. ಇವರೆಲ್ಲರನ್ನೂ ಮೀರಿದ ಕೊಡುಗೆ ಹೆಡ್ಗೆವಾರ್ ಕೊಟ್ಟಿದ್ದಾರಾ? ಸಮಾಜದಲ್ಲಿ ಕೋಮುವಾದ ಹುಟ್ಟುಹಾಕಿದವರು ಹೆಡ್ಗೆವಾರ್ ಎಂದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಭಜರಂಗದಳ ರೈಫಲ್ ಟ್ರೈನಿಂಗ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಬಿ.ಕೆ.ಹರಿಪ್ರಸಾದ್, ದಲಿತರು ಆತ್ಮರಕ್ಷಣೆಗೆ ಬಂದೂಕು ಹಿಡಿದರೆ ನಕ್ಸಲರು ಅಂತಾರೆ. ಅಲ್ಪಸಂಖ್ಯಾತರು ಬಂದೂಕು ಹಿಡಿದರೇ ಭಯೋತ್ಪಾದಕರು ಅಂತಾರೆ. ಭಜರಂಗದಳದವರನ್ನು ಏನೆಂದು ಕರೆಯಬೇಕು? ಎಂದು ಪ್ರಶ್ನೆ ಮಾಡಿದ್ದಾರೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬಿಜೆಪಿ ಸರ್ಕಾರ ಶಿಕ್ಷಣವನ್ನು ಸಹ ಕೇಸರಿಕರಣ ಮಾಡುತ್ತಿದೆ ಬಿಜೆಪಿ ಸರ್ಕಾರ ಶಿಕ್ಷಣವನ್ನು ಸಹ ಕೇಸರಿಕರಣ ಮಾಡುತ್ತಿದೆ. ಮೃಗ & ಸುಂದರಿ, ಸಾರಾ ಅಬೂಬಕ್ಕರ್ ಯುದ್ಧವನ್ನು ಕೈಬಿಟ್ಟಿದ್ದಾರೆ. ಇದೆಲ್ಲವನ್ನು ಬಿಟ್ಟು ಪಠ್ಯದಲ್ಲಿ ಹೆಡ್ಗೆವಾರ್ ವಿಷಯ ಸೇರಿಸಿದ್ದಾರೆ. 1925ರಲ್ಲಿ ದೇಶವನ್ನೇ ವಿಭಜಿಸಲು ಹೆಡ್ಗೆವಾರ್ ಹೊರಟಿದ್ದರು. ಹೆಡ್ಗೆವಾರ್ ಬ್ಯಾನ್ ಮಾಡಿದ ಸಂಘಟನೆಯೊಂದರ ಮುಖ್ಯಸ್ಥ. ಸಮಾಜದಲ್ಲಿ ಸಾಮರಸ್ಯ ಒಡೆದು ಹಾಕಲು ಹೊರಟಿದ್ದಾರೆ ಎಂದು ಬೆಂಗಳೂರಿನಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ:ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಈಗ ಎನು ಮಾಡುತ್ತಿದ್ದಾರೆ? ಇಲ್ಲಿದೆ ಮಾಹಿತಿ

ಸಂವಿಧಾನ ಎತ್ತಿ ಹಿಡಿಯುತ್ತೇವೆ ಎಂದು ಪ್ರಮಾಣ ವಚನ ವೇಳೆ ಸಚಿವರು, ಪ್ರಧಾನಿ ಹೇಳಿದ್ದಾರೆ. ದೇಶಕ್ಕೆ ಕೊಡುಗೆ ನೀಡಿದ್ದ ಭಗತ್ ಸಿಂಗ್ ಪಠ್ಯ ಕೈಬಿಡಲಾಗಿದೆ. ಪಿ.ಲಂಕೇಶ್ರ ಕಥೆಯನ್ನು ಪಠ್ಯಪುಸ್ತಕದಿಂದ ಕೈಬಿಟ್ಟಿದ್ದಾರೆ. ಸಾರಾ ಅಬೂಬಕ್ಕರ್ ‘ಯುದ್ಧ’ ಕತೆಯನ್ನು ಕೈಬಿಡಲಾಗಿದೆ. ಇದು ಸಂವಿಧಾನಕ್ಕೆ ಎಸಗಿದ ಅಪಚಾರ. ತಮ್ಮ ತೀರ್ಮಾನವನ್ನು ಸರ್ಕಾರ ಪುನರ್ ಪರಿಶೀಲನೆ ಮಾಡಬೇಕು ಎಂದರು.

100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವಿಡಿಯೋ: ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಸಂಚಾರ
ವಿಡಿಯೋ: ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಸಂಚಾರ