AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣಿವೆ ರಾಜ್ಯದಲ್ಲಿ ಮತ್ತೆ ಹತ್ಯೆಗೆ ಕಾರಣವಾಯ್ತಾ ಕಾಶ್ಮೀರ್ ಫೈಲ್ಸ್​ ಸಿನಿಮಾ?; ಕಾಶ್ಮೀರಿ ಪಂಡಿತರು ಹೇಳೋದೇನು?

The Kashmir Files: ದಿ ಕಾಶ್ಮೀರ್ ಫೈಲ್ಸ್​ ಸಿನಿಮಾ ಕಾಶ್ಮೀರದ ಯುವಕರು ಹಾಗೂ ಭಾರತದಲ್ಲಿ ದ್ವೇಷವನ್ನು ಹುಟ್ಟುಹಾಕಿರುವ ಆಧಾರರಹಿತ ಸಿನಿಮಾವಾಗಿದೆ. ಇಂತಹವುಗಳನ್ನು ನಿಷೇಧಿಸಬೇಕು ಎಂದು ಫಾರೂಕ್ ಅಬ್ದುಲ್ಲಾ ಒತ್ತಾಯಿಸಿದ್ದಾರೆ.

ಕಣಿವೆ ರಾಜ್ಯದಲ್ಲಿ ಮತ್ತೆ ಹತ್ಯೆಗೆ ಕಾರಣವಾಯ್ತಾ ಕಾಶ್ಮೀರ್ ಫೈಲ್ಸ್​ ಸಿನಿಮಾ?; ಕಾಶ್ಮೀರಿ ಪಂಡಿತರು ಹೇಳೋದೇನು?
ಫಾರೂಕ್ ಅಬ್ದುಲ್ಲಾ, ಮೆಹಬೂಬ ಮುಫ್ತಿImage Credit source: PTI
TV9 Web
| Edited By: |

Updated on:May 17, 2022 | 7:00 PM

Share

ನವದೆಹಲಿ: ಈ ವರ್ಷ ತೆರೆಕಂಡ ಸಿನಿಮಾಗಳ ಪೈಕಿ ‘ದಿ ಕಾಶ್ಮೀರ್ ಫೈಲ್ಸ್’​ (The Kashmir Files) ಸಿನಿಮಾ ಭಾರೀ ಚರ್ಚೆಗೊಳಗಾಗಿತ್ತು. ಈ ಸಿನಿಮಾಗೆ ಹಲವು ರಾಜ್ಯಗಳಲ್ಲಿ ತೆರಿಗೆ ವಿನಾಯಿತಿಯನ್ನೂ ನೀಡಲಾಗಿತ್ತು. ಈ ಸಿನಿಮಾದ ಪರ-ವಿರೋಧದ ಚರ್ಚೆ ಇನ್ನೂ ಇಂತಿಲ್ಲ. ಇಂದು ನ್ಯಾಷನಲ್ ಕಾನ್ಫರೆನ್ಸ್ (National Conference) ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮತ್ತು ಪಿಡಿಪಿಯ ಮೆಹಬೂಬಾ ಮುಫ್ತಿ ಅವರು ‘ದಿ ಕಾಶ್ಮೀರ್ ಫೈಲ್ಸ್‘ ಚಲನಚಿತ್ರವು ದೇಶದಲ್ಲಿ ದ್ವೇಷದ ವಾತಾವರಣವನ್ನು ಸೃಷ್ಟಿಸಿದೆ ಎಂದು ಆರೋಪಿಸಿದ್ದಾರೆ. ಈ ಸಿನಿಮಾದಲ್ಲಿ ಚಿತ್ರಿಸಿರುವ ದೃಶ್ಯಗಳು ಆಧಾರರಹಿತವಾಗಿವೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

“ನಾವು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿ ಮಾಡಿದ್ದೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನು ಪ್ರಸ್ತಾಪಿಸಿದ್ದೇವೆ. ನಾವು ಪರಸ್ಪರ ಹತ್ತಿರವಾಗಬೇಕಾದರ ಈ ದ್ವೇಷದ ಮನಸ್ಥಿತಿ ಕೊನೆಗೊಳ್ಳಬೇಕು. ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಒಬ್ಬ ಮುಸ್ಲಿಂ ಹಿಂದೂವನ್ನು ಕೊಂದಿರುವುದನ್ನು ತೋರಿಸಲಾಗಿದೆ. ಹಾಗೇ, ಅಕ್ಕಿಯನ್ನು ತನ್ನ ರಕ್ತದಲ್ಲಿ ತೊಳೆದು ಅದನ್ನು ಅನ್ನ ಮಾಡಿ ಅದನ್ನು ತಿನ್ನಲು ಹೇಳುತ್ತಾನೆ. ಇದು ಸಾಧ್ಯವೇ? ಇದು ಭಾರತದಲ್ಲಿ ಮಾತ್ರವಲ್ಲದೆ ಕಾಶ್ಮೀರದ ಯುವಕರಲ್ಲೂ ದ್ವೇಷವನ್ನು ಹುಟ್ಟುಹಾಕಿರುವ ಆಧಾರರಹಿತ ಸಿನಿಮಾವಾಗಿದೆ. ಇಂತಹವುಗಳನ್ನು ನಿಷೇಧಿಸಬೇಕು” ಎಂದು ಫಾರೂಕ್ ಅಬ್ದುಲ್ಲಾ ANIಗೆ ತಿಳಿಸಿದ್ದಾರೆ. (Source)

ಮೆಹಬೂಬಾ ಮುಫ್ತಿ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಜಮ್ಮು ಕಾಶ್ಮೀರದ ಕಣಿವೆಯಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ ಕಾಶ್ಮೀರ್ ಫೈಲ್ಸ್​ ಸಿನಿಮಾವನ್ನು ದೂಷಿಸಿದ್ದಾರೆ. “ನಾವು ಕಣಿವೆಯಲ್ಲಿ ಕಾಶ್ಮೀರಿ ಪಂಡಿತರಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಿಸಿದ್ದೇವೆ. 2010 ಮತ್ತು 2016ರಲ್ಲಿ ಅಶಾಂತಿಯ ಉತ್ತುಂಗದಲ್ಲಿಯೂ ಸಹ ಕಣಿವೆಯಲ್ಲಿ ಯಾವುದೇ ಪಂಡಿತರಿಗೆ ಹಾನಿಯಾಗಲಿಲ್ಲ. ಕಾಶ್ಮೀರ್ ಫೈಲ್ಸ್​ ಸಿನಿಮಾ ಕಾಶ್ಮೀರದ ಕಣಿವೆಯಲ್ಲಿ ಅಶಾಂತಿಯನ್ನು ಸೃಷ್ಟಿಸಿ ಜನರಲ್ಲಿ ದ್ವೇಷವನ್ನು ಹುಟ್ಟುಹಾಕಿದೆ. ಎರಡು ಸಮುದಾಯಗಳ ನಡುವಿನ ಅಂತರವನ್ನು ಹೆಚ್ಚಿಸಿದೆ” ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ
Image
Viral News: ಕೆಟ್ಟ ಕನಸಿಗೆ ಹೆದರಿ ಕದ್ದ ದೇವರ ವಿಗ್ರಹಗಳನ್ನು ವಾಪಾಸ್ ತಂದಿಟ್ಟ ಕಳ್ಳರು; ಅಂಥದ್ದೇನಾಯ್ತು?
Image
Vivek Agnihotri: ‘ದಿ ಕಾಶ್ಮೀರ್ ಫೈಲ್ಸ್’ ಕಾಲ್ಪನಿಕ ಕತೆ ಎಂದ ವಿಕಿಪೀಡಿಯಾ ಬರಹ; ವಿವೇಕ್ ಅಗ್ನಿಹೋತ್ರಿ ತೀವ್ರ ಆಕ್ಷೇಪ
Image
ಹೊರಬಿತ್ತು ‘ದಿ ಕಾಶ್ಮೀರ್ ಫೈಲ್ಸ್’ ಒಟಿಟಿ ರಿಲೀಸ್ ದಿನಾಂಕ; ಇಲ್ಲಿದೆ ವಿವರ

ಇದನ್ನೂ ಓದಿ: ಕಾಶ್ಮೀರಿ ಪಂಡಿತ್ ರಾಹುಲ್ ಭಟ್​ನನ್ನು ಕೊಂದಿದ್ದ ಇಬ್ಬರು ಉಗ್ರರು ಸೇರಿ ಮೂವರು ಭಯೋತ್ಪಾದಕರ ಎನ್​ಕೌಂಟರ್

ಕೆಲವು ದಿನಗಳ ಹಿಂದೆ ಬದ್ಗಾಮ್​ನ ಕಂದಾಯ ಇಲಾಖೆ ಕಚೇರಿಯಲ್ಲಿ ಕಾಶ್ಮೀರಿ ಪಂಡಿತ್ ಸಮುದಾಯದ ರಾಹುಲ್ ಭಟ್ ಎಂಬ ಉದ್ಯೋಗಿಯನ್ನು ಉಗ್ರರು ಹತ್ಯೆ ಮಾಡಿದ್ದರು. ಕಚೇರಿಯೊಳಗೆ ನಡೆದ ಈ ಕೊಲೆಯು ಅನೇಕ ಪಂಡಿತರಿಗೆ 1990ರ ದಶಕದ ಪರಿಸ್ಥಿತಿಯನ್ನು ಮತ್ತೆ ನೆನಪಿಸಿತು. ಇದು ಭಾರೀ ಪ್ರತಿಭಟನೆಗೂ ಕಾರಣವಾಗಿತ್ತು. 1990ರಲ್ಲಿ ಕಾಶ್ಮೀರ್ ಫೈಲ್‌ ಸಿನಿಮಾ ಇರಲಿಲ್ಲ. ಆದರೂ ಅರ್ಧ ಮಿಲಿಯನ್ ಕಾಶ್ಮೀರಿ ಹಿಂದೂಗಳಿಗೆ ತಮ್ಮ ಮನೆಯನ್ನು ತೊರೆಯುವಂತೆ ಒತ್ತಾಯಿಸಲಾಯಿತು. ನಾಡಿಮಾರ್ಗ್, ಸಂಗ್ರಾಂಪೋರಾ, ವಂಧಾಮಾ ಮತ್ತು ತೆಲ್ವಾನಿ ಹತ್ಯಾಕಾಂಡಗಳನ್ನು ಹೇಗೆ ಸಮರ್ಥಿಸಿಕೊಳ್ಳಲು ಸಾಧ್ಯ? ಎಂದು ಕಾಶ್ಮೀರಿ ಪಂಡಿತ್ ಕಾರ್ಯಕರ್ತರೊಬ್ಬರು ಟೀಕಿಸಿದ್ದಾರೆ.

ಸಿನಿಮಾದಲ್ಲಿ ಏನು ತಪ್ಪಾಗಿದೆ? ಅದರಲ್ಲಿ ತೋರಿಸಿದ ಘಟನೆಗಳು ನಿಜವಲ್ಲವೇ? ಈ ಸಿನಿಮಾ ನಮ್ಮ ಮೇಲೆ ಅಂತಹ ಪ್ರಭಾವ ಬೀರಿಲ್ಲ. ಅಕ್ಟೋಬರ್‌ನಲ್ಲಿ ಕೂಡ ಹತ್ಯೆಗಳು ನಡೆದಿಲ್ಲವೇ? ಕಾಶ್ಮೀರ್ ಫೈಲ್‌ಗಳಿಂದ ರಾಹುಲ್ ಭಟ್ ಕೊಲ್ಲಲ್ಪಟ್ಟಿಲ್ಲ. ಅವರು ಕಾಶ್ಮೀರಿ ಪಂಡಿತರು ಎಂಬ ಕಾರಣಕ್ಕಾಗಿ ಅವರನ್ನು ಕೊಲ್ಲಲಾಯಿತು ಎಂದು ದುಃಖಿತ ಕಾಶ್ಮೀರಿ ಪಂಡಿತರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್​’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಬ್ರಿಟನ್ ಸಂಸತ್ತಿನಿಂದ ಆಹ್ವಾನ

1990ರಲ್ಲಿ ಕಾಶ್ಮೀರಿ ಪಂಡಿತರು ಯಾವ ರೀತಿ ಕಾಶ್ಮೀರ ಕಣಿವೆಯಿಂದ ಪಲಾಯನ ಮಾಡಬೇಕಾಯಿತು, ತಮ್ಮದೇ ದೇಶದಲ್ಲಿ ನಿರಾಶ್ರಿತರಂತೆ ಬದುಕುವಂತೆ ಮಾಡಿದ ದೌರ್ಜನ್ಯದ ನೈಜ ವಿವರವನ್ನು ತೋರಿಸಿರುವುದಾಗಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತಂಡ ಹೇಳಿಕೊಂಡಿದೆ. ಭಯೋತ್ಪಾದನೆಯಲ್ಲಿ ಮುಖ್ಯವಾಹಿನಿಯ ರಾಜಕಾರಣಿಗಳ ಪಾತ್ರವನ್ನು ತನಿಖೆ ಮಾಡಲು ತನಿಖಾ ಆಯೋಗವನ್ನು ಕಾಶ್ಮೀರಿ ಪಂಡಿತರು ಒತ್ತಾಯಿಸಿದ್ದಾರೆ. ಈ ವರ್ಷ ಇಲ್ಲಿಯವರೆಗೆ ದಕ್ಷಿಣ ಕಾಶ್ಮೀರ ಮತ್ತು ಶ್ರೀನಗರದಲ್ಲಿ 10 ಪಂಡಿತರು ಮತ್ತು ಕಾರ್ಮಿಕರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. 2021ರ ಅಕ್ಟೋಬರ್​ನಿಂದ 2022ರ ಮೇವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ದಾಳಿಯಲ್ಲಿ 31 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 90 ಜನರು ಗಾಯಗೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:58 pm, Tue, 17 May 22

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ