ಜ್ಞಾನವ್ಯಾಪಿ ಮಸೀದಿಯೊಳಗೆ ಲಿಂಗವಿದ್ದು ಅದು ಸ್ಥಳಾಂತರಗೊಂಡಿದ್ದರೆ ಅದನ್ನು ಪುನರ್ ಸ್ಥಾಪಿಸಬೇಕಾಗುತ್ತದೆ: ಶ್ರೀ ಶಿವಾಚಾರ್ಯ ಸ್ವಾಮೀಜಿ

ಲಭ್ಯವಾಗಿರುವ ಲಿಂಗಗಳು ಕೋರ್ಟಿನ ಆದೇಶದ ಮೇರೆಗೆ ಹೊರಗೆ ಬಂದ ನಂತರವೇ ಒಂದು ಸ್ಪಷ್ಟ ಚಿತ್ರಣ ನಮಗೆ ಸಿಗಲಿದೆ, ಸಿಕ್ಕಿರುವ ಲಿಂಗಗಳ ಪರೀಕ್ಷೆ ನಡೆಸಿದ ಬಳಿಕ ಅವುಗಳ ಕಾಲಮಾನದ ಮಾಹಿತಿ ಸಿಗುತ್ತದೆ ಎಂದು ಶ್ರೀಗಳು ಹೇಳಿದರು.

TV9kannada Web Team

| Edited By: Arun Belly

May 16, 2022 | 8:21 PM

ವಾರಣಾಸಿಯ ಜ್ಞಾನವ್ಯಾಪಿ ಮಸೀದಿಯ (Gyanvyapi Mosque) ಒಳಭಾಗದಲ್ಲಿ ನಡೆಯುತ್ತಿರುವ ಸರ್ವೆಯಲ್ಲಿ ಹಿಂದೂ ಸಮುದಾಯಕ್ಕೆ ಸಂತಸ ನೀಡುವ ಸಂಗತಿ ಬಯಲಾಗುತ್ತಿದೆ. ಮಾಧ್ಯಮಗಳಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮಸೀದಿ ಒಳಗಡೆ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಸಮೀಕ್ಷೆಯಲ್ಲಿ (survey) ಚಿಕ್ಕ ಚಿಕ್ಕ ಲಿಂಗಗಳು ಮತ್ತು ಒಂದು ದೊಡ್ಡ ಲಿಂಗ ಪತ್ತೆಯಾಗಿವೆ. ಇದೇ ಹಿನ್ನೆಲೆಯಲ್ಲಿ ಟಿವಿ ಕನ್ನಡ ವಾಹಿನಿ ದೆಹಲಿ ವರದಿಗಾರ ಹರೀಶ್ ಕಾಶಿ ಜಂಗಮವಾಡಿ ಮಠದ ಶ್ರೀಗಾಳಗಿರುವ ಶಿವಾಚಾರ್ಯ ಸ್ವಾಮೀಜಿಯರನ್ನು (Sri Shivacharya Swamiji) ಮಾತಾಡಿಸಿದ್ದಾರೆ. ಕೋರ್ಟಿನ ಆದೇಶದ ಮೇರೆಗೆ ಮತ್ತು ಉಭಯ ಪಕ್ಷಗಳ ಸಮ್ಮತಿಯೊಂದಿಗೆ ನಡೆಯುತ್ತಿರುವವ ಸರ್ವೆಯಲ್ಲಿ ಚಿಕ್ಕ ಚಿಕ್ಕ ಲಿಂಗಗಳು ಪತ್ತೆಯಾಗಿರುವುದು ಮಾಧ್ಯಮಗಳ ಮೂಲಕ ತಮ್ಮ ಗಮನಕ್ಕೂ ಬಂದಿದೆ ಎಂದ ಶ್ರೀಗಳು, ಇದು ಹಿಂದೂಗಳಿಗೆ ಶುಭ ಸಮಾಚಾರವಾಗಿದೆ ಎಂದರು.

ಕಾಶಿಯು ವಿಶ್ವನಾಥನ ದೇವಸ್ಥಾನಕ್ಕೆ ಪ್ರಸಿದ್ಧಿ ಪಡೆದಿದೆ. ಆದರೆ ವಿಶ್ವನಾಥ ದೇಗುಲವನ್ನು ಧ್ವಂಸ ಮಾಡಿ ಮಸೀದಿ ಕಟ್ಟಿದ ಕುರುಹುಗಳು ಈಗ ಸಿಗುತ್ತಿವೆ. ಸನಾತನ ವೀರಶೈವ ಧರ್ಮದಲ್ಲಿ ಚಿಕ್ಕ ಚಿಕ್ಕ ಲಿಂಗಗಳನ್ನು ಇಷ್ಟಲಿಂಗ ಅಂತ ಕರೆಯುತ್ತಾರೆ ಮತ್ತು ಇವುಗಳನ್ನು ಅಂಗೈಯಲ್ಲಿ ಹಿಡಿದು ಪೂಜಿಸಲಾಗುತ್ತದೆ. ಕಾಶಿ ಪೀಠದ ಮೂಲ ಆಚಾರ್ಯರು ಜಗದ್ಗುರು ವಿಶ್ವಾರಾಧ್ಯರು ವಿಶ್ವನಾಥನ ಜ್ಯೋತಿರ್ಲಿಂಗದಲ್ಲೇ ಪ್ರಕಟವಾಗಿರುವ ಪರಂಪರೆ ಇದೆ ಎಂದು ಸ್ವಾಮೀಜಿ ಹೇಳಿದರು.

ಲಭ್ಯವಾಗಿರುವ ಲಿಂಗಗಳು ಕೋರ್ಟಿನ ಆದೇಶದ ಮೇರೆಗೆ ಹೊರಗೆ ಬಂದ ನಂತರವೇ ಒಂದು ಸ್ಪಷ್ಟ ಚಿತ್ರಣ ನಮಗೆ ಸಿಗಲಿದೆ, ಸಿಕ್ಕಿರುವ ಲಿಂಗಗಳ ಪರೀಕ್ಷೆ ನಡೆಸಿದ ಬಳಿಕ ಅವುಗಳ ಕಾಲಮಾನದ ಮಾಹಿತಿ ಸಿಗುತ್ತದೆ ಎಂದು ಶ್ರೀಗಳು ಹೇಳಿದರು. ಈ ಸ್ಥಳವನ್ನು ಸುರಕ್ಷಿತವಾಗಿಡಬೇಕೆಂದು ಕೋರ್ಟ್ ಎರಡೂ ಪಕ್ಷಗಳಿಗೆ ಸೂಚನೆ ನೀಡಿದೆ.

ಒಂದು ವೇಳೆ ಅಲ್ಲಿ ಲಿಂಗ ಪತ್ತೆಯಾಗಿರುವುದು ಖಚಿತಪಟ್ಟರೆ ಪೂಜೆ ಮಾಡುವುದನ್ನು ಆರಂಭಿಸಬಹುದೆ ಎಂಬ ಪ್ರಶ್ನೆಗೆ ಶ್ರೀಗಳು, ಸ್ಥಾಪಿತ ಲಿಂಗ ಹಾಗೆಯೇ ಇದ್ದರೆ ಅದು ಪೂಜೆಗೆ ಯೋಗ್ಯ, ಸ್ಥಳಾಂತರಗೊಂಡಿದ್ದರೆ ಅದನ್ನು ಪುನರ್ ಸ್ಥಾಪಿಸಬೇಕಾಗುತ್ತದೆ ಎಂದರು. ಆ ಸ್ಥಳದಲ್ಲಿ ಮಸೀದಿ ಇರುವುದರಿಂದ ಮುಂದಿನ ಕೆಲಸಗಳನ್ನು ಶಾಸ್ತ್ರಾಧಾರಗಳ ಮೇಲೆ ಮಾಡಬೇಕಾಗುತ್ತದೆ ಎಂದು ಶ್ರೀಗಳು ಹೇಳಿದರು.

ಇದನ್ನೂ ಓದಿ:    Breaking ಜ್ಞಾನವಾಪಿ ಮಸೀದಿ ಸಮೀಕ್ಷೆ ವೇಳೆ ಶಿವಲಿಂಗ ಪತ್ತೆಯಾದ ಸ್ಥಳ ನಿರ್ಬಂಧಿಸಲು ವಾರಣಾಸಿ ನ್ಯಾಯಾಲಯ ಆದೇಶ

Follow us on

Click on your DTH Provider to Add TV9 Kannada