AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಲವಂತದ ಯಾರೂ ಮಕ್ಕಳನ್ನು ರಾಜಕಾರಣಕ್ಕೆ ತಂದು ಟಿಕೆಟ್ ಕೊಡಿಸಬಾರದು: ಸಿದ್ದರಾಮಯ್ಯ

ಬಲವಂತದ ಯಾರೂ ಮಕ್ಕಳನ್ನು ರಾಜಕಾರಣಕ್ಕೆ ತಂದು ಟಿಕೆಟ್ ಕೊಡಿಸಬಾರದು: ಸಿದ್ದರಾಮಯ್ಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 16, 2022 | 10:43 PM

ಜನ ಯತೀಂದ್ರರನ್ನು ನಾಯಕನೆಂದು ಅಂಗೀಕರಿಸಿದ್ದರೆ ಟಿಕೆಟ್ ಕೊಡದಿರಲಾಗುತ್ತದೆಯೇ? ಹಾಗೆ ನೋಡಿದರೆ ವರುಣ ಕ್ಷೇತ್ರದಲ್ಲಿ ತಮಗಿಂತ ಯತೀಂದ್ರರೇ ಜಾಸ್ತಿ ಜನಪ್ರಿಯ, ತಮ್ಮನ್ನು 36,000 ವೋಟುಗಳಿಂದ ಗೆಲ್ಲಿಸಿದರೆ, ಅವರನ್ನು 58,000 ವೋಟುಗಳಿಂದ ಗೆಲ್ಲಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

Udaipur (Rajasthan):  ಕುಟುಂಬ ರಾಜಕಾರಣದ (dynastic politics) ಬಗ್ಗೆ ಚರ್ಚೆಗಳು ಜಾಸ್ತಿಯಾಗುತ್ತಿವೆ ಮಾರಾಯ್ರೇ. ರಾಜಸ್ತಾನದ ಉದಯಪುರನಲ್ಲಿ ಕಾಂಗ್ರೆಸ್ ಆಯೋಜಿಸಿದ ಚಿಂತನ್ ಶಿವರ್ ನಲ್ಲೂ (Chintan Shivir) ವಿಷಯದ ಮೇಲೆ ಚರ್ಚೆಯಾಗಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಅಂತ ಹೇಳಿ ಕುಟುಂಬ ರಾಜಕಾರಣ ಹೆಚ್ಚಿರುವ ಕರ್ನಾಟಕದ ಕಾಂಗ್ರೆಸ್ ನಾಯಕರಲ್ಲಿ ಆತಂಕ ಮೂಡಿಸಿದ್ದಾರೆ. ಅವರು ಮನೆಯಲ್ಲೂ 2024 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಹದಾದ ಇಬ್ಬರು ಅಭ್ಯರ್ಥಿಗಳಿದ್ದಾರೆ-ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ! ಪ್ರಿಯಾಂಕಾರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಕಳಿಸುವ ಮಾತುಕತೆಯೂ ನಡೆದಿದೆ. ಶಿವಿರ್ ಮುಗಿದರೂ ಇನ್ನೂ ಉದಯಪುರನಲ್ಲೇ ಉಳಿದು ಸೋಮವಾರ ಜಲವಿಹಾರಕ್ಕೆ ತಮ್ಮ ಪಾಳೆಯದ ಕೆಲ ಸದಸ್ಯರೊಂದಿಗೆ ತೆರಳಿದ್ದ ಸಿದ್ದರಾಮಯ್ಯ (Siddaramaiah) ಅವರನ್ನು ಟಿವಿ9 ಕನ್ನಡ ವಾಹಿನಿ ವರದಿಗಾರ ಪ್ರಮೋದ್ ಶಾಸ್ತ್ರಿ ಇದೇ ವಿಷಯ ಕುರಿತು ಮಾತಾಡಿಸಿದರು.

ಒಂದೇ ಕುಟುಂಬ ಒಂದೇ ಟಿಕೆಟ್ ಉಕ್ತಿಯನ್ನು ವಿವರಿಸಲು ಸಿದ್ದರಾಮಯ್ಯ ತಡವರಿಸಿದರು. ನಮಗೆಲ್ಲ ಗೊತ್ತಿದೆ. ಸಿದ್ದರಾಮಯ್ಯ ಅವರ ಎರಡನೇ ಮಗ ಡಾ ಯತೀಂದ್ರ ಅವರು ಸಹ ಶಾಸಕರಾಗಿದ್ದಾರೆ ಮತ್ತು 2023ರ ವಿಧಾನಸಭಾ ಚುನಾವಣೆಯಲ್ಲಿ ಪುನಃ ಸ್ಪರ್ಧಿಸಲಿದ್ದಾರೆ. ಸಿದ್ದರಾಮಯ್ಯವರಂತೂ ಎರಡನೇ ಬಾರಿ ಮುಖ್ಯಮಂತ್ರಿಯಾಗುವ ತವಕದಲ್ಲಿದ್ದಾರೆ.

ಹಾಗಾಗಿ ಪ್ರಶ್ನೆ ಅವರಲ್ಲಿ ಕೊಂಚ ಇರುಸು ಮುರುಸು ಉಂಟು ಮಾಡಿದ್ದು ಸುಳ್ಳಲ್ಲ. ಜನ ಯತೀಂದ್ರರನ್ನು ನಾಯಕನೆಂದು ಅಂಗೀಕರಿಸಿದ್ದರೆ ಟಿಕೆಟ್ ಕೊಡದಿರಲಾಗುತ್ತದೆಯೇ? ಹಾಗೆ ನೋಡಿದರೆ ವರುಣ ಕ್ಷೇತ್ರದಲ್ಲಿ ತಮಗಿಂತ ಯತೀಂದ್ರರೇ ಜಾಸ್ತಿ ಜನಪ್ರಿಯ, ತಮ್ಮನ್ನು 36,000 ವೋಟುಗಳಿಂದ ಗೆಲ್ಲಿಸಿದರೆ, ಅವರನ್ನು 58,000 ವೋಟುಗಳಿಂದ ಗೆಲ್ಲಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಬಲವಂತದಿಂದ ರಾಜಕಾರಣಕ್ಕೆ ತಂದು ಟಿಕೆಟ್ ಕೊಡಿಸುವುದು ಸರಿಯಲ್ಲ ಎಂದು ಅವರು ಹೇಳಿದರು.

ಆದರೆ ಗಮನಿಸಬೇಕಾದ ಸಂಗತಿಯೆಂದರೆ, ಯತೀಂದ್ರ ಒಬ್ಬ ಒಲ್ಲದ ರಾಜಕಾರಣಿಯಾಗಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಅವರನ್ನು ಸಿದ್ದರಾಮಯ್ಯ ತಮ್ಮ ಹಿರಿಯ ಮಗ ರಾಕೇಶ್ ಅಕಾಲಿಕ ಮರಣಕ್ಕೆ ತುತ್ತಾದ ನಂತರ ವೈದ್ಯವೃತ್ತಿ ಮಾಡಿಕೊಂಡು ಆರಾಮಾಗಿದ್ದ ಯತೀಂದ್ರರನ್ನು ಬಲವಂತದಿಂದ ರಾಜಕಾರಣಕ್ಕೆ ಎಳೆತಂದರು. ಅದು ಕನ್ನಡಿಗರಿಗೆ ಗೊತ್ತಿರದ ಸಂಗತಿಯೇನಲ್ಲ.

ಇದನ್ನೂ ಓದಿ:  ರಾಜಸ್ಥಾನದಲ್ಲಿ ಕಾಂಗ್ರೆಸ್ ಚಿಂತನ್ ಶಿವಿರ್ ಆರಂಭ; ಚರ್ಚೆಯಾಗಲಿದೆ ಒಂದು ಕುಟುಂಬ, ಒಂದು ಟಿಕೆಟ್ ಪ್ರಸ್ತಾಪ