ರಾಜಸ್ಥಾನದಲ್ಲಿ ಕಾಂಗ್ರೆಸ್ ಚಿಂತನ್ ಶಿವಿರ್ ಆರಂಭ; ಚರ್ಚೆಯಾಗಲಿದೆ ಒಂದು ಕುಟುಂಬ, ಒಂದು ಟಿಕೆಟ್ ಪ್ರಸ್ತಾಪ
Congress Chintan Shivir "ದೊಡ್ಡ ಬದಲಾವಣೆಗಳು" ಕಾದಿವೆ ಎಂದು ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಹೇಳಿದ್ದಾರೆ. "ಒಂದು ಕುಟುಂಬ, ಒಂದು ಟಿಕೆಟ್" ನಿಯಮವನ್ನು ಮರಳಿ ತರಲು ಒಮ್ಮತವಿದೆ ಎಂದು ಕಾಂಗ್ರೆಸ್ ಹೇಳಿದೆ
ದೆಹಲಿ: ಪಕ್ಷದ ಸಾಂಸ್ಥಿಕ ರಚನೆಯನ್ನು ಪುನರುಜ್ಜೀವನಗೊಳಿಸಲು ಉದಯಪುರದಲ್ಲಿ ಶುಕ್ರವಾರ ಕಾಂಗ್ರೆಸ್ ‘ಚಿಂತನ್ ಶಿವರ್’ (Congress Chintan Shivir) ಆರಂಭವಾಗಿದ್ದು ‘ಒಂದು ಕುಟುಂಬ, ಒಂದು ಟಿಕೆಟ್’ ಪ್ರಸ್ತಾವನೆಯನ್ನು 3 ದಿನಗಳ ಸುದೀರ್ಘ ಕಾರ್ಯಕ್ರಮದಲ್ಲಿ ಉನ್ನತ ನಾಯಕರು ವ್ಯಾಪಕವಾಗಿ ಚರ್ಚಿಸುತ್ತಾರೆ ಎಂದು ಕಾಂಗ್ರೆಸ್ (Congress) ಒತ್ತಿ ಹೇಳಿದೆ. ಈ ವರ್ಷದ ಆರಂಭದಲ್ಲಿ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಹೀನಾಯವಾಗಿ ಸೋತಿರುವ ಹಿನ್ನೆಲೆಯಲ್ಲಿ ಚಿಂತನ್ ಶಿವಿರ್ ಆಯೋಜಿಸಲಾಗಿದೆ. ಅದೇ ವೇಳೆ ಮುಂಬರುವ 2024 ರ ಸಾರ್ವತ್ರಿಕ ಚುನಾವಣೆಗಳಿಗೆ ಪಕ್ಷವು ಬಿಜೆಪಿ (BJP) ವಿರುದ್ಧ ಗಟ್ಟಿಯಾದ ಕಾರ್ಯತಂತ್ರವನ್ನು ರೂಪಿಸುವ ಬಗ್ಗೆಯೂ ಇಲ್ಲಿ ನಿರ್ಧಾರ ಕೈಗೊಳ್ಳುತ್ತದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಸುಮಾರು 400 ನಾಯಕರು ಚಿಂತನ್ ಶಿವಿರ್‌ನಲ್ಲಿ ಭಾಗವಹಿಸುತ್ತಿದ್ದಾರೆ. “ದೊಡ್ಡ ಬದಲಾವಣೆಗಳು” ಕಾದಿವೆ ಎಂದು ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಹೇಳಿದ್ದಾರೆ. “ಒಂದು ಕುಟುಂಬ, ಒಂದು ಟಿಕೆಟ್” ನಿಯಮವನ್ನು ಮರಳಿ ತರಲು ಒಮ್ಮತವಿದೆ ಎಂದು ಕಾಂಗ್ರೆಸ್ ಹೇಳಿದೆ. ಇದು ಒಂದು ಕುಟುಂಬದ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿರ್ಬಂಧಿಸುತ್ತದೆ.ಆದರೆ ಗಾಂಧಿ ಕುಟುಂಬಕ್ಕೆ ಇದು ಅನ್ವಯಿಸುವುದಿಲ್ಲ ಎಂದು ಹೇಳಿದೆ. “ಈ ನಿಯಮದ ಬಗ್ಗೆ ಒಮ್ಮತವಿದೆ. ಕುಟುಂಬದ ಸದಸ್ಯರು ಇನ್ನೂ ಸ್ಪರ್ಧಿಸಲು ಬಯಸಿದರೆ ಅವರು ಐದು ವರ್ಷಗಳ ಕಾಲ ಸಕ್ರಿಯವಾಗಿರಬೇಕು” ಎಂದು ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಹೇಳಿದ್ದಾರೆ. “ಅವರು ಕಳೆದ ಐದು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು 2018 ರಲ್ಲಿ ಪಕ್ಷಕ್ಕಾಗಿ ಔಪಚಾರಿಕವಾಗಿ ಕೆಲಸ ಮಾಡಲು ಪ್ರಾರಂಭಿಸಿದರು ಎಂದು ಅವರು ಹೇಳಿದ್ದಾರೆ. ಅಂದರೆ ಮೂವರು ಗಾಂಧಿಗಳಿಗೆ ಸ್ಪರ್ಧಿಸಬಹುದು.
ನಿರ್ಣಾಯಕ ಚುನಾವಣೆಗಳಿಗೆ ಮುಂಚಿತವಾಗಿ ರೀಬೂಟ್ ಮಾಡಲು ಕಾಂಗ್ರೆಸ್‌ನ ಪ್ರಯತ್ನಗಳ ನಡುವೆ, 50 ಕ್ಕಿಂತ ಕಡಿಮೆ ವಯಸ್ಸಿನವರಿಗೆ “ಕಾಂಗ್ರೆಸ್‌ನಲ್ಲಿ ಪ್ರತಿ ಹಂತದಲ್ಲೂ” ಅರ್ಧದಷ್ಟು ಪಕ್ಷದ ಸ್ಥಾನಗಳನ್ನು ಮೀಸಲಿಡುವ ಯೋಜನೆಯನ್ನು ಪಕ್ಷವು ಪರಿಗಣಿಸುತ್ತಿದೆ. ಯಾವುದೇ ವ್ಯಕ್ತಿ ಐದು ವರ್ಷಗಳಿಗಿಂತ ಹೆಚ್ಚು ಕಾಲ ಹುದ್ದೆಯಲ್ಲಿ ಇರಬಾರದು. ಮೂರು ವರ್ಷಗಳ ಕಾಲ ಕೂಲಿಂಗ್ ಆಫ್ ಅವಧಿ ಇರಬೇಕು” ಎಂದು ಮಾಕೆನ್ ಹೇಳಿದರು. ಮೌಲ್ಯಮಾಪನ ವಿಭಾಗವು ನಾಯಕರ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡುತ್ತದೆ.
LIVE: Congress President Smt. Sonia Gandhi ji’s address at ‘Nav Sankalp Chintan Shivir’ in Udaipur, Rajasthan https://t.co/5qm9tq5I3v
— Rahul Gandhi (@RahulGandhi) May 13, 2022
ಗುರುವಾರ ಎನ್ಡಿಟಿವಿ ಜತೆ ಮಾತನಾಡಿದ ರಾಹುಲ್ ಗಾಂಧಿ ನಿಷ್ಠಾವಂತ ಕಾಂಗ್ರೆಸ್ ನಾಯಕ ಮಾಣಿಕ್ ಟ್ಯಾಗೋರ್ “ಭಾರತದ ಜನಸಂಖ್ಯೆಯ 60 ಪ್ರತಿಶತವು 40 ಕ್ಕಿಂತ ಕಡಿಮೆ ವಯಸ್ಸಿನವರಾಗಿರುವ ಕಾರಣ ಪಕ್ಷವು ಯುವಕರನ್ನು ಪ್ರತಿನಿಧಿಸಬೇಕಾಗಿದೆ, ಇದು ನಮ್ಮ ಎಲ್ಲಾ ಪಕ್ಷದ ಘಟಕಗಳು ಮತ್ತು ನಾವು ಹೊಂದಿರುವ ಹುದ್ದೆಗಳಲ್ಲಿ ಪ್ರತಿಫಲಿಸುತ್ತದೆ ಎಂದಿದ್ದಾರೆ.
ಕಾಂಗ್ರೆಸ್ “ಕೋಮು ಧ್ರುವೀಕರಣ” ಮತ್ತು ರಾಜ್ಯ ಚುನಾವಣೆ ಮತ್ತು 2024 ರ ರಾಷ್ಟ್ರೀಯ ಚುನಾವಣೆಗೆ ಪೂರ್ವಸಿದ್ಧತೆಗಳ ಕುರಿತು ಚರ್ಚೆಗಳನ್ನು ಯೋಜಿಸಿದೆ ಎಂದು ನಾಯಕರು ಹೇಳುತ್ತಾರೆ. ಆರು ಗುಂಪುಗಳನ್ನು ರಚಿಸಲಾಗಿದ್ದು, ಅವರು ಸಂಘಟನೆ, ದೇಶದ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿ, ಸಾಮಾಜಿಕ ನ್ಯಾಯ, ರೈತರು ಮತ್ತು ಯುವಕರಿಗೆ ಸಂಬಂಧಿಸಿದ ವಿಷಯಗಳನ್ನು ಗಮನಿಸುತ್ತಾರೆ. “ಪ್ರತಿ ಗುಂಪಿನಲ್ಲಿ 60 ರಿಂದ 70 ಜನರು ಇರುತ್ತಾರೆ. ಯಾವುದೇ ಕಾಗದದ ಚರ್ಚೆ ನಡೆಯುವುದಿಲ್ಲ” ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಕಾಂಗ್ರೆಸ್ ಅಧ್ಯಕ್ಷರಾಗಿ ಮರಳಲು ಪಕ್ಷದ ಒಂದು ವರ್ಗದ ಕರೆಗಳ ನಡುವೆ, ಕೊನೆಯ ದಿನದಂದು ರಾಹುಲ್ ಗಾಂಧಿ ಸಭೆಯನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.
ಈ ಸುದ್ದಿಯನ್ನು ಇಂಗ್ಲಿಷ್ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:45 pm, Fri, 13 May 22