ಹಿಂದಿ ಓದಿದರೆ ಉದ್ಯೋಗ ಸಿಗುತ್ತದೆ ಅಂತಿದ್ರು, ಕೊಯಮತ್ತೂರಿನಲ್ಲಿ ಈಗ ಯಾರು ಪಾನಿಪುರಿ ಮಾರುತ್ತಿದ್ದಾರೆಂದು ನೋಡಿದ್ದೀರಾ?: ತಮಿಳುನಾಡು ಸಚಿವ
ಹಿಂದಿ ಓದಿದರೆ ಉದ್ಯೋಗ ಸಿಗುತ್ತದೆ ಎಂದು ಅವರು ಹೇಳುತ್ತಿದ್ದರು. ಕೊಯಮತ್ತೂರಿನಲ್ಲಿ ಈಗ ಯಾರು ಪಾನಿಪುರಿ ಮಾರುತ್ತಿದ್ದಾರೆಂದು ನೋಡಿದ್ದೀರಾ? ಅದು ಒಂದು ಕಾಲದಲ್ಲಿ ಆಗಿತ್ತು. ಈಗ ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆಯಾಗಿದೆ ಎಂದು ಪೊನ್ಮುಡಿ ಹೇಳಿದ್ದಾರೆ.
ಚೆನ್ನೈ: ಕೊಯಮತ್ತೂರಿನ ಭಾರತಿಯಾರ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ತಮಿಳುನಾಡಿನ (Tamil Nadu) ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ (Ponmudy) ಹಿಂದಿ ಮಾತನಾಡುವವರು ಚಾಕರಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಹಿಂದಿಗಿಂತ (Hindi) ಇಂಗ್ಲಿಷ್ ಹೆಚ್ಚು ಮೌಲ್ಯಯುತವಾಗಿದೆ ಎಂದು ಹೇಳಿದ್ದಾರೆ. ಹಿಂದಿ ಮಾತನಾಡುವವರು ಕೊಯಮತ್ತೂರಿನಲ್ಲಿ ಪಾನಿಪುರಿ ಮಾರುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ. ತಮಿಳು ವಿದ್ಯಾರ್ಥಿಗಳು ಯಾವುದೇ ಭಾಷೆಯನ್ನು ಕಲಿಯಲು ಸಿದ್ಧರಿದ್ದಾರೆ. ಹಿಂದಿ ಐಚ್ಛಿಕವಾಗಿರಬೇಕು ಮತ್ತು ಕಡ್ಡಾಯವಾಗಿರಬಾರದು ಎಂದು ಅವರು ಹೇಳಿದರು. ಕೊಯಮತ್ತೂರಿನ ಭಾರತಿಯಾರ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ತಮಿಳುನಾಡು ಉನ್ನತ ಶಿಕ್ಷಣ ಸಚಿವ ಪೊನ್ಮುಡಿ, ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪ್ರಯೋಜನಕಾರಿ ಅಂಶಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದರು, ಆದರೆ ರಾಜ್ಯ ಸರ್ಕಾರವು ಕೇವಲ ದ್ವಿಭಾಷಾ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ ಎಂದು ಹೇಳಿದರು. ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರೊಂದಿಗೆ ಘಟಿಕೋತ್ಸವ ಸಮಾರಂಭದಲ್ಲಿ ವೇದಿಕೆ ಹಂಚಿಕೊಂಡ ಅವರು, ಈಗಾಗಲೇ ಅಂತಾರಾಷ್ಟ್ರೀಯ ಭಾಷೆಯಾದ ಇಂಗ್ಲಿಷ್ ಕಲಿಸುತ್ತಿರುವಾಗ ಹಿಂದಿಯನ್ನು ಏಕೆ ಕಲಿಯಬೇಕು ಎಂದು ಪ್ರಶ್ನಿಸಿದರು.
ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ತಮಿಳುನಾಡು ಮುಂಚೂಣಿಯಲ್ಲಿದೆ. ತಮಿಳು ವಿದ್ಯಾರ್ಥಿಗಳು ಯಾವುದೇ ಭಾಷೆಯನ್ನು ಕಲಿಯಲು ಸಿದ್ಧರಿದ್ದಾರೆ. ಆದರೆ, ಹಿಂದಿ ಐಚ್ಛಿಕ ಭಾಷೆಯಾಗಿರಬೇಕೇ ಹೊರತು ಕಡ್ಡಾಯವಲ್ಲ ಎಂದು ಸಚಿವರು ಹೇಳಿದರು. ಹಿಂದಿಗಿಂತ ಇಂಗ್ಲಿಷ್ ಹೆಚ್ಚು ಮೌಲ್ಯಯುತವಾಗಿದೆ ಎಂದು ವ್ಯಂಗ್ಯವಾಡಿದ ಪೊನ್ಮುಡಿ, ಹಿಂದಿ ಭಾಷಿಕರು ಚಾಕರಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.
“ಹಿಂದಿ ಓದಿದರೆ ಉದ್ಯೋಗ ಸಿಗುತ್ತದೆ ಎಂದು ಅವರು ಹೇಳುತ್ತಿದ್ದರು. ಕೊಯಮತ್ತೂರಿನಲ್ಲಿ ಈಗ ಯಾರು ಪಾನಿಪುರಿ ಮಾರುತ್ತಿದ್ದಾರೆಂದು ನೋಡಿದ್ದೀರಾ? ಅದು ಒಂದು ಕಾಲದಲ್ಲಿ ಆಗಿತ್ತು. ಈಗ ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆಯಾಗಿದೆ ಎಂದು ಪೊನ್ಮುಡಿ ಹೇಳಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 4:35 pm, Fri, 13 May 22