ನಳಿನ್ ಕುಮಾರ ಕಟೀಲ್​ರನ್ನು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರೆಂದರು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್

ಅಮೇಲೆ ಬಾಬುರಾವ್ ಅವರು ನಳಿನ್ ಕುಮಾರ ಕಟೀಲರ ಗುಣಗಾನ ಶುರುಮಾಡುತ್ತಾ ಕೃಷ್ಣನ ಚಾತುರ್ಯ, ರಾಮನ ಸೌಜನ್ಯತೆಯ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ಅನ್ನುತ್ತಿದ್ದಂತೆಯೇ ನೆರದಿದ್ದ ಜನ ಹೋ ಅಂತ ಕೂಗುತ್ತಾರೆ.

TV9kannada Web Team

| Edited By: Arun Belly

May 17, 2022 | 12:48 AM

ಯಾದಗಿರಿ:  ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ (Baburao Chinchansur) ಎಡವಟ್ಟುಗಳನ್ನು ಮಾಡುತ್ತಿದ್ದರೆ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಆಶ್ಚರ್ಯವಾಗದು ಮಾರಾಯ್ರೇ. ಯಾಕೆಂದರೆ ಸಾರ್ವಜನಿಕ ಸಭೆಗಳಲ್ಲಿ ಇವರ ಎಡವಟ್ಟುಗಳನ್ನು ಮಾಡುವುದನ್ನು ನೋಡಿ ಜನರಿಗೆ ಅಭ್ಯಾಸವಾಗಿದೆ. ಮೊನ್ನೆಯಷ್ಟೇ ಇವರನ್ನು ಕುರಿತ ಒಂದು ವಿಡಿಯೊವನ್ನು ನಿಮಗೆ ತೋರಿಸಿದ್ದೆವು. ಅದರ ಬಗ್ಗೆ ಆಮೇಲೆ ಮಾತಾಡೋಣ. ಸೋಮವಾರ ಯಾದಗಿರಿಯಲ್ಲಿ (Yadgir) ಅವರು ಮಾಡಿದ ಎಡವಟ್ಟು ಏನು ಅನ್ನೋದನ್ನು ನೋಡೋಣ. ಯಾದಗಿರಿ ನಗರದಲ್ಲಿ ಬಿಜೆಪಿ ಹೊಸ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವನ್ನು ಆಯೋಜನಗೊಂಡಿತ್ತು. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ (Nalin Kumar Kateel) ಮತ್ತು ಬಿಜೆಪಿಯ ಹಲವಾರು ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವೇದಿಕೆಯ ಮೇಲೆ ಮೈಕ್ ಹಿಡಿದು ಅಲ್ಲಿ ಆಸೀನರಾಗಿರಬಹುದಾದ ಹಿರಿಯ ನಾಯಕರ ಗುಣಗಾನ ಮಾಡುವುದೆಂದರೆ ಬಾಬುರಾವ್ ಗೆ ಎಲ್ಲಿಲ್ಲದ ಖುಷಿ.

ಸೋಮವಾರವೂ ಅವರು ಯಾದಗಿರಿಯಲ್ಲಿ ಅದನ್ನೇ ಮಾಡಿದರು. ಭಾಷಣ ಆರಂಭಿಸುತ್ತಿದ್ದಂತೆಯೇ ಅವರು ರಾಜುಗೌಡ ಅವರರನ್ನು ಈ ಭಾಗದ ಅತ್ಯಂತ ಜನಪ್ರಿಯ ನಾಯಕರಾಗಿರುವ ರಾಜಕುಮಾರ ಪಾಟೀಲ ಅಂತ ಸಂಬೋಧನೆ ಮಾಡಿ ಮೊದಲ ಎಡವಟ್ಟು ಮಾಡುತ್ತಾರೆ.

ಅಮೇಲೆ ಬಾಬುರಾವ್ ಅವರು ನಳಿನ್ ಕುಮಾರ ಕಟೀಲರ ಗುಣಗಾನ ಶುರುಮಾಡುತ್ತಾ ಕೃಷ್ಣನ ಚಾತುರ್ಯ, ರಾಮನ ಸೌಜನ್ಯತೆಯ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ಅನ್ನುತ್ತಿದ್ದಂತೆಯೇ ನೆರದಿದ್ದ ಜನ ಹೋ ಅಂತ ಕೂಗುತ್ತಾರೆ. ವೇದಿಕೆ ಮೇಲಿದ್ದ ಕಾರ್ಯಕರ್ತರು ಕಾಂಗ್ರೆಸ್ ಅಲ್ಲ ಸಾರ್ ಬಿಜೆಪಿ, ಬಿಜೆಪಿ ಅಂತ ಹೇಳಿದಾಗ ಸಾವರಿಸಿಕೊಂಡು ಸಾರಿ ಸಾರಿ ಅಂತ ತೇಪೆ ಹಾಕಲು ಪ್ರಯತ್ನಿಸುತ್ತಾರೆ.

2018ರಲ್ಲಿ ಬಿಜೆಪಿಗೆ ಪಕ್ಷಾಂತರ ಮಾಡುವ ಮೊದಲು ಅವರು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದರು ಮತ್ತು ಸಚಿವನಾಗಿ ಬೇರೆ ಬೇರೆ ಮುಖ್ಯಮಂತ್ರಿಗಳ ಸಂಪುಟದಲ್ಲಿ ಕೆಲಸ ಮಾಡಿದ್ದರು. ನಮಗೆ ಲಭ್ಯವಾಗಿರುವ ಮೂಲಗಳ ಪ್ರಕಾರ ಅವರು ಪುನಃ ಕಾಂಗ್ರೆಸ್ ಗೆ ಹೋಗಲು ತವಕಿಸುತ್ತಿದ್ದಾರೆ.

ಇದನ್ನೂ ಓದಿ:   ಯಾದಗಿರಿ: ಕೊವಿಡ್​ನಿಂದ ಮೃತಪಟ್ಟ ವ್ಯಕ್ತಿಯ ನಂಬರ್​ಗೆ ಬೂಸ್ಟರ್ ಡೋಸ್ ನೀಡಿದ ಮೆಸೇಜ್; ಬೆಳಕಿಗೆ ಬಂದ ಆರೋಗ್ಯ ಇಲಾಖೆಯ ಯಡವಟ್ಟು

Follow us on

Click on your DTH Provider to Add TV9 Kannada