ಶ್ವಾನದ ಬಳಿಯೇ ‘777 ಚಾರ್ಲಿ’ ಟ್ರೇಲರ್ ರಿಲೀಸ್ ಮಾಡಿಸಿದ ರಕ್ಷಿತ್ ಶೆಟ್ಟಿ

ಬೆಂಗಳೂರಲ್ಲಿ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆದಿದೆ. ವಿಶೇಷ ಎಂದರೆ ಸಿನಿಮಾದಲ್ಲಿ ನಟಿಸಿದ ಶ್ವಾನದಿಂದ ಈ ಟ್ರೇಲರ್ ಲಾಂಚ್ ಮಾಡಿಸಲಾಗಿದೆ.

TV9kannada Web Team

| Edited By: Rajesh Duggumane

May 16, 2022 | 7:55 PM

‘777 ಚಾರ್ಲಿ’ ಸಿನಿಮಾ (777 Charlie) ಬಗ್ಗೆ ಅಭಿಮಾನಿಗಳಿಗಿದ್ದ ನಿರೀಕ್ಷೆ ದುಪ್ಪಟ್ಟಾಗಿದೆ. ಇದಕ್ಕೆ ಕಾರಣ ಇಂದು (ಮೇ 16) ರಿಲೀಸ್ ಆದ ಟ್ರೇಲರ್. ಈ ಟ್ರೇಲರ್​ಗೆ ಎಲ್ಲ ಕಡೆಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಪ್ರಾಣಿ ಪ್ರಿಯರಂತೂ ಸಿನಿಮಾದ ಟ್ರೇಲರ್ ನೋಡಿ ಶಭಾಶ್​ಗಿರಿ ನೀಡಿದ್ದಾರೆ. ಈ ಸಿನಿಮಾದಲ್ಲಿ ಶ್ವಾನ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಇಂದು ರಿಲೀಸ್ ಆದ ಟ್ರೇಲರ್​​ನಲ್ಲಿ ಅದು ಸಿನಿಪ್ರಿಯರಿಗೆ ಮನದಟ್ಟಾಗಿದೆ. ಬೆಂಗಳೂರಲ್ಲಿ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆದಿದೆ. ವಿಶೇಷ ಎಂದರೆ ಸಿನಿಮಾದಲ್ಲಿ ನಟಿಸಿದ ಶ್ವಾನದಿಂದ ಈ ಟ್ರೇಲರ್ ಲಾಂಚ್ ಮಾಡಿಸಲಾಗಿದೆ. ಈ ವಿಡಿಯೋ ನೋಡಿ ಎಲ್ಲರೂ ಖುಷಿಪಟ್ಟಿದ್ದಾರೆ. ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ (Rakshit Shetty), ಸಂಗೀತಾ ಶೃಂಗೇರಿ, ರಾಜ್ ಬಿ. ಶೆಟ್ಟಿ ಮೊದಲಾದವರು ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada