ದತ್ತಪೀಠವಿರುವ ಸ್ಥಳದಲ್ಲಿ ಮಾಂಸಾಹಾರ ಸೇವನೆ ವಿರೋಧಿಸಿ ಹಿಂದೂ ಸಂಘಟನೆ ಸದಸ್ಯರ ಪ್ರತಿಭಟನೆ

ದತ್ತಪೀಠದ ಆವರಣದಲ್ಲಿ ಮಾಂಸ ತೆಗೆದುಕೊಂಡು ಬಂದು ಬೇಯಿಸಿಕೊಂಡು ತಿಂದರೆ ಸ್ಥಳದ ಪಾವಿತ್ರ್ಯತೆ ಹಾಳಾಗುತ್ತದೆ. ಸರ್ಕಾರ ಅದರಲ್ಲೂ ವಿಶೇಷವಾಗಿ ಮುಜರಾಯಿ ಹಾಗೂ ಪೊಲೀಸ್ ಕೂಡಲೇ ಕಾರ್ಯಪ್ರವೃತ್ತರಾಗಿ ತಪ್ಪಿತಸ್ಥರನ್ನು ಪತ್ತೆ ಮಾಡಿ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ವಿ ಎಚ್ ಪಿ ಮತ್ತು ಭಜರಂಗ ದಳದ ಸದಸ್ಯರು ಅಗ್ರಹಿಸಿದ್ದಾರೆ.

ದತ್ತಪೀಠವಿರುವ ಸ್ಥಳದಲ್ಲಿ ಮಾಂಸಾಹಾರ ಸೇವನೆ ವಿರೋಧಿಸಿ ಹಿಂದೂ ಸಂಘಟನೆ ಸದಸ್ಯರ ಪ್ರತಿಭಟನೆ
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:May 16, 2022 | 5:49 PM

Chikkamagalur: ವಿವಾದಿತ ದತ್ತಪೀಠದ (Dattapeetha) ಸ್ಥಳದಲ್ಲಿ ಕಾನೂನಿನ ಉಲ್ಲಂಘನೆಯಾಗಿದೆ ಮತ್ತೂ ಹಿಂದೂಗಳಿಗೆ ಪವಿತ್ರವೆನಿಸಿರುವ (sacred) ಸದರಿ ಸ್ಥಳದಲ್ಲಿ ಮಾಂಸದಡಿಗೆ ತಯಾರಿಸಿ ಸೇವಿಸಿದ್ದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ (Vishva Hindu Parishad) ಮತ್ತು ಬಜರಂಗ ದಳದ ಕಾರ್ಯಕರ್ತರು ದತ್ತಪೀಠದ ಎದುರುಗಡೆ ಸೋಮವಾರ ಪ್ರತಿಭಟನೆ ನಡೆಸಿದರು. ಮುಸ್ಲಿಂ ಸಮುದಾಯದ ಕೆಲ ಜನ ವಿವಾದಿತ ಸ್ಥಳದಲ್ಲಿನ ತಾತ್ಕಾಲಿಕ ಶೆಡ್ ಒಂದರಲ್ಲಿ ಮಾಂಸದ ಭಕ್ಷ್ಯಗಳನ್ನು ಸಿದ್ಧಪಡಿಸಿ ಅಲ್ಲೇ ಊಟ ಮಾಡಿ ಸ್ಥಳವನ್ನು ಅಪವಿತ್ರಗೊಸಿದ್ದಾರೆ ಅಲ್ಲಿರುವ ಗೋರಿಗಳಿಗೆ ಪೂಜೆ ಮಾಡು ಮೂಲಕ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ಪ್ರತಿಭಟನೆಕಾರರು ಕಿಡಿ ಕಾರಿದರು.

ಚಿಕ್ಕಮಗಳೂರು ತಾಲ್ಲೂಕಿನಲ್ಲಿರುವ ದತ್ತಪೀಠದಲ್ಲಿ ಮಾಂಸಾಹಾರವನ್ನು ನಿಷೇಧಿಸಲಾಗಿದೆ. ಹೋಮ ಮತ್ತು ಹವನ ನಡೆಸುವ ಹಿಂದೂಗಳಿಗೆ ಇದು ಬಹಳ ಪವಿತ್ರವಾದ ಸ್ಥಳವಾಗಿದೆ. ಪರಿಸ್ಥಿತಿ ಹೀಗಿರುವಾಗ ದತ್ತಪೀಠದ ಆವರಣದಲ್ಲಿ ಮಾಂಸ ತೆಗೆದುಕೊಂಡು ಬಂದು ಬೇಯಿಸಿಕೊಂಡು ತಿಂದರೆ ಸ್ಥಳದ ಪಾವಿತ್ರ್ಯತೆ ಹಾಳಾಗುತ್ತದೆ. ಸರ್ಕಾರ ಅದರಲ್ಲೂ ವಿಶೇಷವಾಗಿ ಮುಜರಾಯಿ ಹಾಗೂ ಪೊಲೀಸ್ ಕೂಡಲೇ ಕಾರ್ಯಪ್ರವೃತ್ತರಾಗಿ ತಪ್ಪಿತಸ್ಥರನ್ನು ಪತ್ತೆ ಮಾಡಿ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ವಿ ಎಚ್ ಪಿ ಮತ್ತು ಭಜರಂಗ ದಳದ ಸದಸ್ಯರು ಅಗ್ರಹಿಸಿದ್ದಾರೆ.

ಏತನ್ಮಧ್ಯೆ, ಸೋಮವಾರ ಬಾಗಲಕೋಟೆಯಲ್ಲಿ ಹೇಳಿಕೆಯೊಂದನ್ನು ನೀಡಿದ ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಷ ಪ್ರಮೋದ್ ಮುತಾಲಿಕ್ ಅವರು ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು, ಕೆಲವು ಮೌಲ್ವಿಗಳು ಶೆಡ್ ನಲ್ಲಿ ಮಾಂಸದೂಟ ಸೇವಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವುಗಳ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಹಾಗೂ ಎಲ್ಲ ಗೊತ್ತಿದ್ದೂ ಅಮಾಯಕರಂತೆ ವರ್ತಿಸುತ್ತಿರುವ ಮುಜರಾಯಿ ಇಲಾಖೆ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕೆಂದು ಹೇಳಿದರು.

ಇದನ್ನೂ ಓದಿ:   Dattapeeta Fighter: ಅಂದು-ಇಂದು ಎಂದೆಂದಿಗೂ ನಾನು ದತ್ತಪೀಠ ಹೋರಾಟಗಾರನೇ, ಹಿಂದೆ ಸರಿಯುವ ಮಾತೇ ಇಲ್ಲ-ಸಚಿವ ಸುನಿಲ್ ಕುಮಾರ್

Published On - 5:46 pm, Mon, 16 May 22

Follow us
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
ಮುಂಡರಗಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರು ನದಿಗೆ
ಮುಂಡರಗಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರು ನದಿಗೆ
ಉಡುಪಿಯಲ್ಲಿ ನಿಲ್ಲದ ಮಳೆ ಪ್ರತಾಪ, ನಗರದಲ್ಲಿ ಬೆಳಗ್ಗೆಯಿಂದ ಕುಂಭದ್ರೋಣ
ಉಡುಪಿಯಲ್ಲಿ ನಿಲ್ಲದ ಮಳೆ ಪ್ರತಾಪ, ನಗರದಲ್ಲಿ ಬೆಳಗ್ಗೆಯಿಂದ ಕುಂಭದ್ರೋಣ
ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಸ್ವಿಮ್ಮಿಂಗ್; ಇಲ್ಲಿದೆ ವಿಡಿಯೋ
ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಸ್ವಿಮ್ಮಿಂಗ್; ಇಲ್ಲಿದೆ ವಿಡಿಯೋ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಚೆಂಡಿಯಾದಲ್ಲಿ ಮನೆಗಳು ಜಲಾವೃತ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಚೆಂಡಿಯಾದಲ್ಲಿ ಮನೆಗಳು ಜಲಾವೃತ
ಟೀಮ್ ಇಂಡಿಯಾ ವಿಜಯಯಾತ್ರೆ ವೇಳೆ ಪಾಕಿಸ್ತಾನ್ ಘೋಷಣೆ ಕೂಗಿದ ಫ್ಯಾನ್ಸ್..!
ಟೀಮ್ ಇಂಡಿಯಾ ವಿಜಯಯಾತ್ರೆ ವೇಳೆ ಪಾಕಿಸ್ತಾನ್ ಘೋಷಣೆ ಕೂಗಿದ ಫ್ಯಾನ್ಸ್..!