ತುಮಕೂರಿನ ಟ್ರಾಫಿಕ್ ಪೇದೆ ಮತ್ತು ಒಬ್ಬ ಪೊಲೀಸ್ ಅಧಿಕಾರಿ-ಇಬ್ಬರಲ್ಲೂ ಮಾನವೀಯ ಕಳಕಳಿಯ ಹೃದಯ

ಅವರು ಕಾರಿನಿಂದ ಇಳಿದು ಸ್ಮೃತಿ ತಪ್ಪಿ ಬಿದ್ದಿರುವ ವ್ಯಕ್ತಿಯನ್ನು ತಮ್ಮ ಕಾರಲ್ಲಿ ಅಸ್ಪತ್ರೆಗೆ ಕರೆದೊಯ್ಯುವಂತೆ ರಾಘವೇಂದ್ರ ಮತ್ತು ತಮ್ಮ ಜೊತೆಗಿದ್ದ ಮತ್ತೊಬ್ಬ ಪೊಲೀಸ್ ಪೇದೆಗೆ ಹೇಳುತ್ತಾರೆ. ಆಗ ರಾಘವೇಂದ್ರ ಅ ವ್ಯಕ್ತಿಯನ್ನು ಅನಾಮತ್ತಾಗಿ ಎತ್ತಿಕೊಂಡು, ತಮ್ಮ ಸಾಹೇಬರ ಕಾರಿನ ಹಿಂದಿನ ಸೀಟಿನ ಮೇಲೆ ಮಲಗಿಸುತ್ತಾರೆ.

TV9kannada Web Team

| Edited By: Arun Belly

May 16, 2022 | 6:56 PM

Tumakuru: ಅಪಸ್ಮಾರದಿಂದ (Epilepsy) ಬಳಲುತ್ತಿದ್ದ ವ್ಯಕ್ತಿಯೊಬ್ಬರು ರಸ್ತೆ ದಾಟುವಾಗ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಾಗ ಒಬ್ಬ ಸಂಚಾರಿ ಪೊಲೀಸ ಕಾನ್ ಸ್ಟೇಬಲ್ ಮತ್ತು ಒಬ್ಬ ಹಿರಿಯ ಪೊಲೀಸ್ ಅಧಿಕಾರಿ ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಪ್ರಸಂಗ ಸೋಮವಾರ ತುಮಕೂರು ನಗರದಲ್ಲಿ ನಡೆಯಿತು. ಮೂರ್ಛೆ ಬಂದು ಬಿದ್ದ ಯಾರು, ಎಲ್ಲಿಯವರು ಅಂತ ಗೊತ್ತಾಗಿಲ್ಲ. ಸೋಮವಾರ ಬೆಳಗ್ಗೆ ಅವರು ನಗರದ ಟೌನ್ ಹಾಲ್ (Town Hall) ಬಳಿ ರಸ್ತೆ ದಾಟುವಾಗ ಅಪಸ್ಮಾರದ ಅಟ್ಯಾಕ್ ಗೆ ಒಳಗಾಗಿ ಕೆಳಗೆ ಬಿದ್ದಿದ್ದಾರೆ. ಅದೇ ಜಾಗದಲ್ಲಿ ಕರ್ತವ್ಯನಿರತರಾಗಿದ್ದ ಟ್ರಾಫಿಕ್ ಪೊಲೀಸ್ ಪೇದೆ ರಾಘವೇಂದ್ರ (Raghavendra) ಅವರ ಸಹಾಯಕ್ಕೆ ಧಾವಿಸಿ ಕಬ್ಬಿಣದ ಕಂಬಿಯನ್ನು ಕೈಗಿತ್ತಿದ್ದಾರೆ. ಅಪಸ್ಮಾರದ ಅಟ್ಯಾಕ್ ಗೊಳಗಾದವರಿಗೆ ಪ್ರಥಮ ಚಿಕಿತ್ಸೆಯಾಗಿ ಇದನ್ನೇ ಮಾಡಲಾಗುತ್ತದೆ. ಚರ್ಮದಿಂದ ತಯಾರಿಸಿದ ವಸ್ತು (ಚಪ್ಪಲಿ, ಪರ್ಸ್, ಬೆಲ್ಟ್) ಮೂಸುವಂತೆ ಮಾಡಿದರೂ ಪ್ರಜ್ಞೆ ಮರಳುತ್ತದೆ ಅಂತ ಹೇಳುತ್ತಾರೆ.

ರಾಘವೇಂದ್ರ ಅವರ ಮೀಸೆ ನೋಡಿದರೆ ಕಳ್ಳಕಾಕರಿಗೆ ಭಯವಾಗೋದು ನಿಜವಾದರೂ ಅವರಲ್ಲಿ ಬೇರೆಯವರ ಕಷ್ಟಕಂಡು ಮರುಗುವ ಹೃದಯವಿದೆ. ಪೊಲೀಸರ ಹೃದಯ ವೈಶಾಲ್ಯತೆ ಅಲ್ಲಿಗೆ ಮುಗಿಯುವುದಿಲ್ಲ ಮಾರಾಯ್ರೇ. ತುಮಕೂರಿನ ಎ ಎಸ್ ಪಿ ಉಮೇಶ್ ಟೌನ್ ಹಾಲ್ ಮೂಲಕ ಹಾದುಹೋಗುವಾಗ ಜನ ಘೇರಾಯಿಸದನ್ನು ಗಮನಿಸಿ ವಿಚಾರಿಸಿದಾಗ ವಿಷಯ ಗೊತ್ತಾಗುತ್ತದೆ.

ಕೂಡಲೇ ಅವರು ಕಾರಿನಿಂದ ಇಳಿದು ಸ್ಮೃತಿ ತಪ್ಪಿ ಬಿದ್ದಿರುವ ವ್ಯಕ್ತಿಯನ್ನು ತಮ್ಮ ಕಾರಲ್ಲಿ ಅಸ್ಪತ್ರೆಗೆ ಕರೆದೊಯ್ಯುವಂತೆ ರಾಘವೇಂದ್ರ ಮತ್ತು ತಮ್ಮ ಜೊತೆಗಿದ್ದ ಮತ್ತೊಬ್ಬ ಪೊಲೀಸ್ ಪೇದೆಗೆ ಹೇಳುತ್ತಾರೆ. ಆಗ ರಾಘವೇಂದ್ರ ಅ ವ್ಯಕ್ತಿಯನ್ನು ಅನಾಮತ್ತಾಗಿ ಎತ್ತಿಕೊಂಡು, ತಮ್ಮ ಸಾಹೇಬರ ಕಾರಿನ ಹಿಂದಿನ ಸೀಟಿನ ಮೇಲೆ ಮಲಗಿಸುತ್ತಾರೆ. ಉಮೇಶ ಅವರು ರಾಘವೇಂದ್ರರನ್ನೂ ಕಾರಲ್ಲಿ ಹೋಗುವಂತೆ ಹೇಳಿ ತಾವು ಅಲ್ಲೇ ನಿಂತುಕೊಳ್ಳುತ್ತಾರೆ. ಯಾರೋ ಒಬ್ಬರು ತಮ್ಮ ಕಾರಲ್ಲಿ ಲಿಫ್ಟ್ ನೀಡಲು ಮುಂದಾದಾಗ, ಅಧಿಕಾರಿ ನಯವಾಗಿ ನಿರಾಕರಿಸುತ್ತಾರೆ.

ರಾಘವೇಂದ್ರ ಮತ್ತು ಉಮೇಶ ಅವರ ಗುಡ್ ಸಮಾರಿಟನ್ ಕೆಲಸ ನಮ್ಮ ಸ್ಮೃತಿಪಟಲದಲ್ಲಿ ಬಹಳ ದಿನ ಉಳಿಯಲಿದೆ.

ಇದನ್ನೂ ಓದಿ:  ತುಮಕೂರು: ಸರ್ಕಾರಿ ಬಸ್ -ಆಟೋ ಮುಖಾಮುಖಿ ಡಿಕ್ಕಿಯಾಗಿ ಬಾಲಕಿ ಸ್ಥಳದಲ್ಲೆ ಸಾವು, ಚಳ್ಳಕೆರೆ ಬಳಿ ಬೈಕಿಗೆ ಲಾರಿ ಡಿಕ್ಕಿ, ಬೈಕ್ ಸವಾರರಿಬ್ಬರು ಸಾವು

Follow us on

Click on your DTH Provider to Add TV9 Kannada