ತುಮಕೂರು: ಸರ್ಕಾರಿ ಬಸ್ -ಆಟೋ ಮುಖಾಮುಖಿ ಡಿಕ್ಕಿಯಾಗಿ ಬಾಲಕಿ ಸ್ಥಳದಲ್ಲೆ ಸಾವು, ಚಳ್ಳಕೆರೆ ಬಳಿ ಬೈಕಿಗೆ ಲಾರಿ ಡಿಕ್ಕಿ, ಬೈಕ್ ಸವಾರರಿಬ್ಬರು ಸಾವು

ತುಮಕೂರಿನಿಂದ ಕೊರಟಗೆರೆ ಕಡೆಹೊಗುತ್ತಿದ್ದKA-06F1117 ಕೆ.ಎಸ್.ಆರ್ ಟಿ.ಸಿ ಬಸ್ ಮತ್ತು ಕೊರಟಗೆರೆಯಿಂದ ತುಮಕೂರು ಕಡೆಗೆ ಬರುತ್ತಿದ್ದ KA-06B-718 ಆಟೋರಿಕ್ಷಾ ನಡುವೆ ಈ ಭೀಕರ ಅಪಘಾತ ಸಂಭವಿಸಿದೆ. ತುಮಕೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ತುಮಕೂರು: ಸರ್ಕಾರಿ ಬಸ್ -ಆಟೋ ಮುಖಾಮುಖಿ ಡಿಕ್ಕಿಯಾಗಿ ಬಾಲಕಿ ಸ್ಥಳದಲ್ಲೆ ಸಾವು, ಚಳ್ಳಕೆರೆ ಬಳಿ ಬೈಕಿಗೆ ಲಾರಿ ಡಿಕ್ಕಿ, ಬೈಕ್ ಸವಾರರಿಬ್ಬರು ಸಾವು
ತುಮಕೂರು: ಸರ್ಕಾರಿ ಬಸ್ -ಆಟೋ ಮುಖಾಮುಖಿ ಡಿಕ್ಕಿಯಾಗಿ ಬಾಲಕಿ ಸ್ಥಳದಲ್ಲೆ ಸಾವು, ಚಳ್ಳಕೆರೆ- ಬೈಕಿಗೆ ಲಾರಿ ಡಿಕ್ಕಿ, ಬೈಕ್ ಸವಾರರಿಬ್ಬರು ಸಾವು
Follow us
ಸಾಧು ಶ್ರೀನಾಥ್​
|

Updated on:May 13, 2022 | 6:23 PM

ತುಮಕೂರು: ರಾಜ್ಯ ಸರ್ಕಾರಿ ಸಾರಿಗೆ ಬಸ್ (ಕೆ.ಎಸ್.ಆರ್.ಟಿ.ಸಿ) ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ 12 ವರ್ಷದ ಬಾಲಕಿ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ಮತ್ತಿಬ್ಬರಿಗೆ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಆಟೋದಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಇಬ್ಬರು ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ. ತುಮಕೂರು ತಾಲ್ಲೂಕಿನ ಹೊಸಹಳ್ಳಿ (ಗೇರೆಹಳ್ಳಿ) ಬಳಿ ಈ ದಾರುಣ ಘಟನೆ ನಡೆದಿದೆ. ತುಮಕೂರಿನಿಂದ ಕೊರಟಗೆರೆ ಕಡೆಹೊಗುತ್ತಿದ್ದKA-06F1117 ಕೆ.ಎಸ್.ಆರ್ ಟಿ.ಸಿ ಬಸ್ ಮತ್ತು ಕೊರಟಗೆರೆಯಿಂದ ತುಮಕೂರು ಕಡೆಗೆ ಬರುತ್ತಿದ್ದ KA-06B-718 ಆಟೋರಿಕ್ಷಾ ನಡುವೆ ಈ ಭೀಕರ ಅಪಘಾತ ಸಂಭವಿಸಿದೆ. ತುಮಕೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಚಳ್ಳಕೆರೆ: ಲಾರಿ-ಬೈಕ್​ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸಾವು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಮನಮೈನಹಟ್ಟಿ ಗ್ರಾಮದ ಬಳಿ ಲಾರಿ-ಬೈಕ್​ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ. ಕುಮಾರ್ ನಾಯ್ಕ್(40) ಮತ್ತು ಮಹಾಂತೇಶ್ ನಾಯ್ಕ್(42) ಮೃತ ಪಟ್ಟವರು. ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಒನಕೆಯಿಂದ ಹೊಡೆದು ಪತ್ನಿಯ ಸಾಯಿಸಿದ್ದ ಪತಿ ಮರಕ್ಕೆ ನೇಣು ಬೀಗಿದು ಆತ್ಮಹತ್ಯೆ: ಚಿಕ್ಕೋಡಿ: ಒನಕೆಯಿಂದ ಹೊಡೆದು ಪತ್ನಿಯನ್ನು ಪತಿ ಕೊಲೆ ಮಾಡಿ ಪರಾರಿಯಾಗಿದ್ದ ಪ್ರಕರಣದಲ್ಲಿ ಕೊಲೆ ಆರೋಪಿ- ಪತಿ ಮುತ್ತಪ್ಪ ಇಂದು ಹೆಣವಾಗಿ ಪತ್ತೆಯಾಗಿದ್ದಾನೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಂದಿಗುಂದದಲ್ಲಿ ಘಟನೆ ವರದಿಯಾಗಿದೆ. ಮೇ 10ನೇ ತಾರೀಖಿನಂದು ಘಟನೆ ನಡೆದಿತ್ತು. ಕೊಲೆ ಆರೋಪಿ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆದಿಸಿದ್ದರು. ಬಾಳವ್ವ ಮುತ್ತಪ್ಪ ಬಿರಾಜ (33) ಮಂಗಳವಾರ ರಾತ್ರಿ ಪತಿ ಮುತ್ತಪ್ಪನಿಂದ ಕೊಲೆಯಾಗಿದ್ದಳು. ಹೆಂಡತಿ ಕೊಲೆಗೆ ಪ್ರಾಯಶ್ಚಿತವಾಗಿ ಮುತ್ತಪ್ಪ ಬಿರಾಜ್ ಮರಕ್ಕೆ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಹಾರೂಗೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಧಾರವಾಡ: ಮಿನಿ ಲಾರಿ ಹರಿದು ಬಾಲಕಿ ಸಾವು ಧಾರವಾಡದ ಕಲ್ಯಾಣನಗರದಲ್ಲಿ ಮಿನಿ ಲಾರಿ ಹರಿದು ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅನಂ ರಿಜ್ವಾನ್ ಐನಾಪೂರ (3) ಮೃತ ಬಾಲಕಿ. ಬಾಲಕಿ ಧಾರವಾಡ ಟೈವಾಕ್ ಕಾಲನಿ ನಿವಾಸಿ. ಪೋಷಕರ ಜೊತೆ ಊರಿಗೆ ಹೋಗಲು ಬಸ್ ನಿಲ್ದಾಣದಲ್ಲಿ ಬಾಲಕಿ ನಿಂತಿದ್ದಾಗ ಆಕೆಯ ಮೇಲೆ ಮಿನಿ ಲಾರಿ ಹಾದು ಹೋಗಿದೆ. ಮಗು ಸಾವಿಗೀಡಾಗಿದ್ದನ್ನು ಕಂಡು ಪೋಷಕರು ಲಾರಿ ಗಾಜು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಧಾರವಾಡ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು: ಹಣದ ವಿಚಾರಕ್ಕೆ ಸ್ನೇಹಿತನಿಂದಲೇ ನಡೀತು ಕೊಲೆ ಬಾಣಸವಾಡಿಯ ಕಾಚರಕನಹಳ್ಳಿ ಬಳಿಯ ಮನೆಯಲ್ಲಿ ನಿನ್ನೆ ತಡರಾತ್ರಿ ಕೊಲೆ ಪ್ರಕರಣ ನಡೆದಿದೆ. ಹಣದ ವಿಚಾರಕ್ಕೆ ಸ್ನೇಹಿತನಿಂದಲೇ ಈ ಹತ್ಯೆ ನಡೆದಿದೆ. ಜೈಕುಮಾರ್(30) ಕೊಲೆಯಾದ ಯುವಕ. ಹಣದ ವಿಚಾರಕ್ಕೆ ನಡೆದ ಇಬ್ಬರ ನಡುವಿನ ಗಲಾಟೆ‌ ಕೊಲೆಯಲ್ಲಿ ಅಂತ್ಯವಾಗಿದೆ. ಸ್ನೇಹಿತ ರೋಹಿಲ್ ಚಾಕುವಿನಿಂದ ಇರಿದು ಜೈಕುಮಾರನನ್ನ ಕೊಲೆಗೈದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕೊಲೆಯಾದ ಜೈಕುಮಾರ ಗೆ ರೋಹಿಲ್ ಗೆ ಹಣವನ್ನ ಸಾಲವಾಗಿ ಕೊಡಿಸಿದ್ದ. ಇಎಂಐ ಕಟ್ಟದ ಹಿನ್ನೆಲೆ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಘಟನೆಯಲ್ಲಿ ಜೈಕುಮಾರನ ಎದೆಯ ಭಾಗಕ್ಕೆ ರೋಹಿಲ್ ಚಾಕು ಇರಿದಿದ್ದ. ಘಟನೆಯಲ್ಲಿ ಜೈಕುಮಾರ ಸ್ಥಳದಲ್ಲೇ ಸಾವನ್ನಪ್ಪಿದ್ದ. ಕೊಲೆಯಾದ ಜೈಕುಮಾರ್ ಕಾಲ್ ಸೆಂಟರ್ ಕೆಲಸ ಮಾಡಿಕೊಂಡಿದ್ದ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ರೈತ ಸಾವು: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮುಷ್ಟೂರು ಗ್ರಾಮದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ರೈತ ಮೃತಪಟ್ಟಿದ್ದಾರೆ. ಚನ್ನಬಸಪ್ಪ ಹಿರೇಮರದ (38) ಮೃತ ರೈತ. ಮೃತ ರೈತನ ಜೊತೆಗಿದ್ದ ಒಂದು ಎತ್ತಿಗೆ ಗಂಭೀರ ಗಾಯವಾಗಿದೆ. ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ದುರ್ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಜಮೀನಿನಲ್ಲಿ ವಿದ್ಯುತ್ ಲೈನ್ ಗಳು ಕೈಗೆಟುಕುವಂತಿದ್ರೂ ಸರಿಪಡಿಸದೆ ಹೆಸ್ಕಾಂ(ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ) ಸಿಬ್ಬಂದಿ ಹಾಗೆಯೇ ಬಿಟ್ಟಿದ್ದರು. ಸ್ಥಳಕ್ಕೆ ಹಲಗೇರಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ: ಬೆಂಗಳೂರಿನ ರಾಜಾಜಿನಗರ ಕೈಗಾರಿಕಾ ಪ್ರದೇಶದ ರಸ್ತೆ ಬದಿ ಕಾರೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಎರಡು ವರ್ಷಗಳಿಂದ ರಸ್ತೆ ಬದಿ ನಿಲ್ಲಿಸಿದ್ದ ಅಂಬಾಸಿಡರ್ ಕಾರಿನಲ್ಲಿ ಈ ಪುರುಷ ಶವ ಪತ್ತೆಯಾಗಿದೆ. ಕಾರಿನಲ್ಲಿ ದುರ್ವಾಸನೆ ಬರುತ್ತಿದ್ದರಿಂದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 3:56 pm, Fri, 13 May 22