30 ವರ್ಷಗಳ ಬಳಿಕ ಖುಷ್ಬೂ ಎದುರು ಹೋಗಿ ನಿಂತ ‘ರಣಧೀರ’ ಬಾಲಕ; ನಟಿಯ ರಿಯಾಕ್ಷನ್ ಹೇಗಿತ್ತು?

‘ರಣಧೀರ’ ಸಿನಿಮಾದಲ್ಲಿ ಬಾಲ ಕಲಾವಿದನಾಗಿ ನಟಿಸಿದ್ದರು ಮಂಜುನಾಥ್. ಈ ಸಿನಿಮಾ ತೆರೆಕಂಡು 30 ವರ್ಷಗಳ ಬಳಿಕ ಮಾಸ್ಟರ್ ಮಂಜುನಾಥ್ ಅವರು ಖುಷ್ಬೂ (Kushboo Sundar) ಮುಂದೆ ಹೋಗಿ ನಿಂತರು.

TV9kannada Web Team

| Edited By: Rajesh Duggumane

May 16, 2022 | 2:03 PM

ಮಾಸ್ಟರ್ ಮಂಜುನಾಥ್ ಅವರು (Master Manjunath) ‘ರಣಧೀರ’ ಸಿನಿಮಾದಲ್ಲಿ ಬಾಲ ಕಲಾವಿದನಾಗಿ ನಟಿಸಿದ್ದರು. ‘ಏನ್​ ಹುಡ್ಗೀರೋ..’ ಎಂದು ಹಾಡು ಹೇಳಿದ್ದರು. ಈ ಸಿನಿಮಾ ಹಿಟ್ ಆಗಿತ್ತು. ರವಿಚಂದ್ರನ್ ಹಾಗೂ ಖುಷ್ಬೂ ಕಾಂಬಿನೇಷನ್​ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈ ಸಿನಿಮಾ ತೆರೆಕಂಡು 30 ವರ್ಷಗಳ ಬಳಿಕ ಮಾಸ್ಟರ್ ಮಂಜುನಾಥ್ ಅವರು ಖುಷ್ಬೂ (Kushboo Sundar) ಮುಂದೆ ಹೋಗಿ ನಿಂತರು. ಖುಷ್ಬೂಗೆ ಮೊದಲಿಗೆ ಅವರ ಗುರುತು ಸಿಗಲೇ ಇಲ್ಲ. ಈ ಗ್ಯಾಪ್​ನಲ್ಲಿ ಖುಷ್ಬೂ ಅವರನ್ನು ಮಾಸ್ಟರ್ ಮಂಜುನಾಥ್ ಅವರು ಕಾಲೆಳೆದರು. ಆ ಬಳಿಕ ‘ಮೇಡಮ್ ಒಂದು ಹಾಡು ಹೇಳಲೇ’ ಎಂದು ಕೇಳಿದರು. ಖುಷ್ಬೂ ಇದಕ್ಕೆ ಓಕೆ ಎಂದರು. ಆಗ ಮಂಜುನಾಥ್ ಅವರು ‘ಏನ್​ ಹುಡ್ಗೀರೋ..’ ಹಾಡನ್ನು ಹಾಡಿದರು. ಆಗ ಖುಷ್ಬೂಗೆ ಮಂಜುನಾಥ್ ಅವರ ಪರಿಚಯ ಸಿಕ್ಕಿತ್ತು. ಈ ಘಟನೆಯನ್ನು ಮಾಸ್ಟರ್ ಮಂಜುನಾಥ್ ಅವರು ನೆನಪಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada