ಬಾಲ ಕಲಾವಿದನಾಗಿ ದೊಡ್ಡ ಯಶಸ್ಸು ಸಿಕ್ಕರೂ ಹೀರೋ ಆಗದಿರೋದೇಕೆ?; ಮಾಸ್ಟರ್ ಮಂಜುನಾಥ್ ಕೊಟ್ರು ಉತ್ತರ

ಮಾಸ್ಟರ್ ಮಂಜುನಾಥ್ ಅವರು ಹೀರೋ ಆಗಿ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೆ, ಅವರು ಹೀರೋ ಆಗಿ ಮಿಂಚುವ ಸಾಹಸಕ್ಕೆ ಮುಂದಾಗಲೇ ಇಲ್ಲ

TV9kannada Web Team

| Edited By: Rajesh Duggumane

May 14, 2022 | 2:10 PM

ಮಾಸ್ಟರ್​ ಮಂಜುನಾಥ್ ಅವರು (Master Manjunath) ಬಾಲ ಕಲಾವಿದರಾಗಿ ಗುರುತಿಸಿಕೊಂಡವರು. ಶಂಕರ್ ನಾಗ್ (Shankar Nag) ನಿರ್ದೇಶನದ ‘ಮಾಲ್ಗುಡಿ ಡೇಸ್​’ ಸೀರಿಸ್​ನಲ್ಲಿ ಸ್ವಾಮಿ ಹೆಸರಿನ ಹುಡುಗನಾಗಿ ಅವರು ಮಿಂಚಿದರು. ಇದರಿಂದ ಅವರಿಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿತು. ಮುಂದಿನ ದಿನಗಳಲ್ಲಿ ಅವರು ಹೀರೋ ಆಗಿ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೆ, ಅವರು ಹೀರೋ ಆಗಿ ಮಿಂಚುವ ಸಾಹಸಕ್ಕೆ ಮುಂದಾಗಲೇ ಇಲ್ಲ. ಇದು ಏಕೆ ಎನ್ನುವ ಪ್ರಶ್ನೆಗೆ ಮಾಸ್ಟರ್​ ಮಂಜುನಾಥ್​ ಉತ್ತರ ನೀಡಿದ್ದಾರೆ. ‘ನನಗೆ ಹೀರೋ ಆಗುವ ಕನಸು ಇತ್ತು. ಆದರೆ, ಆ ಸಂದರ್ಭ ಒದಗಿ ಬರಲೇ ಇಲ್ಲ. ಬೇರೆ ಕೆಲಸದಲ್ಲಿ ಬ್ಯುಸಿ ಆಗಿದ್ದರಿಂದ ಇಲ್ಲಿಗೆ ಬರಬೇಕು ಎಂದು ಅನ್ನಿಸಲೇ ಇಲ್ಲ’ ಎಂದು ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada