ಖಾಸಗಿ ಶಾಲೆಯಲ್ಲಿ ಭಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ; ಎಸ್​ಡಿಪಿಐ ವಿರೋಧ

Kodagu Trishul Dikasha: ಖಾಸಗಿ ಶಾಲೆಯಲ್ಲಿ ಭಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆಗೆ ಎಸ್​ಡಿಪಿಐ ತೀವ್ರ ವಿರೋಧ ವ್ಯಕ್ತಪಡಿಸಿದೆ.

TV9kannada Web Team

| Edited By: Vivek Biradar

May 16, 2022 | 12:28 PM

ಕೊಡಗು: ಖಾಸಗಿ ಶಾಲೆಯಲ್ಲಿ ಭಜರಂಗದಳ (Bajarangadal) ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆಗೆ ಎಸ್​ಡಿಪಿಐ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕೊಡಗು (Kodagu) ಜಿಲ್ಲೆ ಪೊನ್ನಂಪೇಟೆಯ ಶ್ರೀಸಾಯಿ ವಿದ್ಯಾಮಂದಿರದಲ್ಲಿ ತ್ರಿಶೂಲ ದೀಕ್ಷೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಜರಂಗ ದಳ ತ್ರಿಶೂಲ ದೀಕ್ಷೆ ನೀಡಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಎಸ್ ಡಿಪಿಐ ಸಮವಸ್ತ್ರದ ಜೊತೆ ಹಿಜಾಬ್​ಗೆ  (Hijab)ಅವಕಾಶ ನೀಡದ ರಾಜ್ಯ ಸರ್ಕಾರ, ಇದೀಗ ತ್ರಿಶೂಲ ದೀಕ್ಷೆಗೆ ಹೇಗೆ ಅವಕಾಶ ನೀಡಿದೆ ಎಂದು ಎಸ್​ಡಿಪಿಐ ಘಟಕ ಕೊಡಗು ಜಿಲ್ಲಾಡಳಿತಕ್ಕೆ ಪ್ರಶ್ನೆ ಮಾಡಿದೆ. ಇದರ ವಿರುದ್ಧ ಕ್ರಮಕೈಗೊಳ್ಳುವಂತೆ ಕೊಡಗು ಡಿಸಿ, ಎಸ್​ಪಿರಲ್ಲಿ ಎಸ್​ಡಿಪಿಐ ಆಗ್ರಹ ಮಾಡಿದೆ.

ಕೊಡಗು ಜಿಲ್ಲೆ ಪೊನ್ನಂಪೇಟೆಯ ಶ್ರೀಸಾಯಿ ವಿದ್ಯಾಮಂದಿರದಲ್ಲಿ ನಡೆದ ಶೌರ್ಯ ಪ್ರಶಿಕ್ಷಣ ವರ್ಗದಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ, ತ್ರಿಶೂಲ ದೀಕ್ಷೆ ನೀಡಲಾಗಿದೆ. ಸುಮಾರು 10 ದಿನ ನಡೆದ ಶಿಬಿರದಲ್ಲಿ, ಬಜರಂಗದಳ, ವಿಶ್ವಹಿಂದೂ ಪರಿಷತ್ ನ 119 ಶಿಕ್ಷಣಾರ್ಥಿಗಳು ಸೇರಿ 140 ಜನರು ಇದ್ದರು.

ಮಾನ್ಯ ಬಿ.ಸಿ ನಾಗೇಶ್ ರವರೇ ಶಾಲೆಗಳಲ್ಲಿ ಹಿಜಾಬ್ ಗೆ ನಿರ್ಭಂದ ವಿಧಿಸಿರುವ ನಿಮ್ಮ ಸರ್ಕಾರ,  ಬಜರಂಗದಳಕ್ಕೆ ಒಂದು ವಾರದ ಅಕ್ರಮ ಶಸ್ತ್ರಾಸ್ತ್ರ ತರಬೇತಿ ಶಿಬಿರ ನಡೆಸಲು ಅನುಮತಿ ಕೊಟ್ಟ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಸಾಯಿ ಶಂಕರ್ ಶಿಕ್ಷಣ ಸಂಸ್ಥೆಯ ವಿರುದ್ಧ ಯಾವ ಕ್ರಮ ಕೈಗೊಂಡಿದೆ ಎಂದು ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿಅಫ್ಸರ್ ಕೋಡ್ಲಿಪೇಟೆ ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ

Follow us on

Click on your DTH Provider to Add TV9 Kannada