ದೇವನಹಳ್ಳಿ: ಮತ್ತೆ ನಿಂಬೆ ಹಣ್ಣಿನ ಡ್ಯಾನ್ಸ್ (Dance) ಮಾಡಿ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜ್ (MTB Nagaraj) ಮಿಂಚಿದ್ದಾರೆ. ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ನಡೆದ ಶ್ರೀರಾಮನವಮಿ ಪಲ್ಲಕ್ಕಿ ಉತ್ಸವದಲ್ಲಿ ಎಂಟಿಬಿ ನಾಗರಾಜ್ ಹೆಜ್ಜೆ ಹಾಕಿದ್ದಾರೆ. ನಿನ್ನೆ ಸಂಜೆ ನಡೆದ ಉತ್ಸವದಲ್ಲಿ ಭಾಗಿಯಾಗಿ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಕುಣಿದು ಕುಪ್ಪಳಿಸಿದ್ದಾರೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಬಾಯಲ್ಲಿ ನಿಂಬೆಹಣ್ಣು ಹಿಡಿದುಕೊಂಡು ತಮಟೆಗೆ ಸೌಂಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಿಂದೆಯು ನಿಂಬೆಹಣ್ಣಿನ ಡ್ಯಾನ್ಸ್ ಮಾಡಿ ಸಚಿವರು ಸುದ್ದಿಯಾಗಿದ್ದರು. ಇದೀಗ ಮತ್ತೆ ನಿಂಬೆಹಣ್ಣು ಡ್ಯಾನ್ಸ್ ಮಾಡಿ ಕಾರ್ಯಕರ್ತರಿಗೆ ಮನಃರಂಜನೆ ನೀಡಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ