ಪಿ2 ಪಿ ಸಾಲ ಎಂದರೇನು? ಇಲ್ಲಿದೆ ಮಾಹಿತಿ
ರೂ. 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಸಾಲಗಳಿಗೆ ಪಿ2ಪಿ ವೇದಿಕೆ ನೀಡಲಾಗುವುದಿಲ್ಲ. ಇನ್ನಷ್ಟು ಮಾಹಿತಿಯನ್ನು ತಿಳಿಯಲು ವಿಡಿಯೋವನ್ನು ನೋಡಿ.
2021ರಿಂದ 2026ರ ಅವಧಿಯಲ್ಲಿ ಶೇಕಡ 21ರಿಂದ 25ರ ದರದಲ್ಲಿ ಭಾರತದಲ್ಲಿ ಪಿ2ಪಿ ಸಾಲ ಗಾತ್ರ ಬೆಳವಣಿಗೆಯಾಗಿದೆ, 2026ರ ವೇಳೆಗೆ 10.5 ಶತಕೋಟಿ ಡಾಲರ್ ಮೌಲ್ಯವಾಗಿದೆ. ಹಾಗಾದರೆ ಈ ಪಿ2ಪಿ ಲೆಂಡಿಂಗ್ ಎಂದರೇನು? ಸುಮಾರು 20 ಫಿನ್ ಟೆಕ್ ಕಂಪೆನಿಗಳಿಂದ ಪಿ2ಪಿ ವೇದಿಕೆ ಸೌಲಭ್ಯ. ಈ ವೇದಿಕೆ ಸಾಲ ಪಡೆಯುವವರನ್ನು ಮತ್ತು ಸಾಲ ನೀಡುವವರನ್ನು ಸಂಪರ್ಕಿಸುತ್ತದೆ. ಈ ವೇದಿಕೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಶೇಕಡ 10 ರಿಂದ 18ರಷ್ಟು ಗಳಿಕೆ ಮಾಡಬಹುದಾಗಿದೆ. ಸಣ್ಣ ಉಳಿತಾಯ ಯೋಜನೆಗಳಿಗಿಂತ ಹೆಚ್ಚಿನ ಗಳಿಕೆ ಮಾಡಬಹುದಾಗಿದೆ. ಮಾಸಿಕ ಸುಮಾರು 12 ಸಾವಿರ ರೂ. ಆದಾಯವಿರುವ 23 ರಿಂದ 45ವರ್ಷ ವಯೋಮಾನದವರೇ ಈ ವೇದಿಕೆಗಳೂ ಹೆಚ್ಚಾಗಿ ಸಾಲ ಪಡೆಯುತ್ತಾರೆ. ಇಂತಹ ಸಾಲಗಾರರು 5 ಸಾವಿರದಿಂದ 25 ಸಾವಿರ ರೂ. ಸಾಲಕ್ಕಾಗಿ ಅರ್ಜಿ ಹಾಕುತ್ತಾರೆ. ಪಿ2ಪಿ ನಿಯಮಾವಳಿಗಳೇನು? ನೋಂದಣಿ ಪ್ರಮಾಣಪತ್ರ ಕಡ್ಡಾಯ ಆರ್ಬಿಐ ನಿಯಂತ್ರಿತ ಕಾರ್ಯವಿಧಾನವಾಗಿದೆ. ಒಂದು ಕಂಪನಿಯಲ್ಲಿ 50 ಲಕ್ಷ ರೂ. ಗಿಂತ ಹೆಚ್ಚಿನ ಹೂಡಿಕೆಗೆ ಅವಕಾಶವಿಲ್ಲ. ರೂ. 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಸಾಲ ಪಡೆಯಲು ಸಾಧ್ಯವಿಲ್ಲ. ರೂ. 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಸಾಲಗಳಿಗೆ ಪಿ2ಪಿ ವೇದಿಕೆ ನೀಡಲಾಗುವುದಿಲ್ಲ. ಇನ್ನಷ್ಟು ಮಾಹಿತಿಯನ್ನು ತಿಳಿಯಲು ವಿಡಿಯೋವನ್ನು ನೋಡಿ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.