ಖುಷ್ಬೂನ ತುಂಬಾನೇ ಕಾಡಿಸಿದ್ರು ಕನ್ನಡದ ಈ ಬಾಲ ನಟ

ಮಾಸ್ಟರ್​ ಮಂಜುನಾಥ್ ‘ರಣಧೀರ’ ಸಿನಿಮಾದಲ್ಲಿ ನಟಿಸುವಾಗ ಅವರಿಗೆ 11 ವರ್ಷ ವಯಸ್ಸು. ಖುಷ್ಬೂಗೆ 18 ವರ್ಷ ವಯಸ್ಸು. ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಅವರಿಗೆ ಮಾಸ್ಟರ್ ಮಂಜುನಾಥ್ ತುಂಬಾನೇ ಕಾಟ ಕೊಟ್ಟಿದ್ದರಂತೆ.

TV9kannada Web Team

| Edited By: Rajesh Duggumane

May 15, 2022 | 2:07 PM

ನಟಿ ಖುಷ್ಬೂ ಅವರು (Kushboo) ಕನ್ನಡದ ‘ರಣಧೀರ’ ಸಿನಿಮಾದಲ್ಲಿ ನಟಿಸಿದ್ದರು. ರವಿಚಂದ್ರನ್​ಗೆ ಜತೆಯಾಗಿ ಅವರು ಕಾಣಿಸಿಕೊಂಡಿದ್ದರು. ಈ ಸಿನಿಮಾ ತುಂಬಾನೇ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ಮಾಸ್ಟರ್​ ಮಂಜುನಾಥ್ (Master Manjunath) ಕೂಡ ನಟಿಸಿದ್ದರು. ಅವರು ಈ ಸಿನಿಮಾದಲ್ಲಿ ನಟಿಸುವಾಗ ಅವರಿಗೆ 11 ವರ್ಷ ವಯಸ್ಸು. ಖುಷ್ಬೂಗೆ 18 ವರ್ಷ ವಯಸ್ಸು. ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಅವರಿಗೆ ಮಾಸ್ಟರ್ ಮಂಜುನಾಥ್ ತುಂಬಾನೇ ಕಾಟ ಕೊಟ್ಟಿದ್ದರಂತೆ. ಈ ಬಗ್ಗೆ ಮಾಸ್ಟರ್ ಮಂಜುನಾಥ್ ಮಾತನಾಡಿದ್ದಾರೆ. ‘ನನ್ನ ಜತೆ ನಟಿಸುತ್ತಿರುವ ಎಲ್ಲರೂ ನನಗಿಂತ 8-10 ವರ್ಷ ದೊಡ್ಡವರಾಗಿದ್ದರು. ನಾನು ತುಂಬಾ ತೊಂದರೆ ಕೊಟ್ಟಿದ್ದು ಖುಷ್ಬೂ ಅವರಿಗೆ. ಹೇಗೆ ತೊಂದರೆ ಕೊಡಬೇಕು ಅಂತ ರವಿಚಂದ್ರನ್ ಅವರು ಹೇಳಿಕೊಡ್ತಿದ್ರು’ ಎಂದು ಮಾಹಿತಿ ನೀಡಿದ್ದಾರೆ ಮಾಸ್ಟರ್ ಮಂಜುನಾಥ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Follow us on

Click on your DTH Provider to Add TV9 Kannada