ಶಂಕರ್ ​ನಾಗ್​ ನಿಧನರಾದಾಗ ಅಂತ್ಯಸಂಸ್ಕಾರಕ್ಕೆ ಬರಲು ಮಾಸ್ಟರ್​ ಮಂಜುನಾಥ್​ಗೆ ಸಾಧ್ಯವಾಗಲಿಲ್ಲ; ಕಾರಣ ಏನು?

ಶಂಕರ್ ​ನಾಗ್​ ಮತ್ತು ಮಾಸ್ಟರ್​ ಮಂಜುನಾಥ್​ ನಡುವೆ ಆಪ್ತತೆ ಇತ್ತು. ಚಿತ್ರರಂಗದಲ್ಲಿ ಮಾಸ್ಟರ್​ ಮಂಜುನಾಥ್​ಗೆ ಶಂಕರ್​ ನಾಗ್​ ಮಾರ್ಗದರ್ಶಕರಾಗಿದ್ದರು.

TV9kannada Web Team

| Edited By: Madan Kumar

May 15, 2022 | 9:43 AM

ಖ್ಯಾತ ನಟ-ನಿರ್ದೇಶಕ ಶಂಕರ್​ ನಾಗ್ (Shankar Nag) ಅವರ ಜೊತೆ ಕೆಲಸ ಮಾಡಲು ಅವಕಾಶ ಪಡೆದಿದ್ದ ಅದೃಷ್ಟಶಾಲಿಗಳಲ್ಲಿ ಮಾಸ್ಟರ್​ ಮಂಜುನಾಥ್​ ಕೂಡ ಪ್ರಮುಖರು. ಶಂಕರ್​ ನಾಗ್​ ನಿರ್ದೇಶನದ ‘ಮಾಲ್ಗುಡಿ ಡೇಸ್​’ (Malgudi Days) ಧಾರಾವಾಹಿಯಲ್ಲಿ ನಟಿಸುವ ಮೂಲಕ ಮಾಸ್ಟರ್​ ಮಂಜುನಾಥ್​ ಫೇಮಸ್​ ಆಗಿದ್ದರು. ಆಗ ಬಾಲಕನಾಗಿದ್ದ ಅವರಿಗೆ ಹಲವು ಆಫರ್​ಗಳು ಬರುತ್ತಿದ್ದವು. ಮಾಸ್ಟರ್​ ಮಂಜುನಾಥ್​ ಪಾಲಿಗೆ ಶಂಕರ್​ನಾಗ್​ ಅವರು ಮಾರ್ಗದರ್ಶಕರೂ ಆಗಿದ್ದರು. ಆದರೆ ಶಂಕ್ರಣ್ಣ ನಿಧನರಾದಾಗ ಅವರ ಅಂತ್ಯಸಂಸ್ಕಾರಕ್ಕೆ ಬರಲು ಮಾಸ್ಟರ್​ ಮಂಜುನಾಥ್​ ಅವರಿಗೆ ಸಾಧ್ಯವಾಗಿರಲಿಲ್ಲ. ಕಾರಣ ಇಷ್ಟೇ; ಆ ಸಂದರ್ಭದಲ್ಲಿ ನಾಗಾಭರಣ ಅವರ ಜೊತೆ ಮಾಸ್ಟರ್​ ಮಂಜುನಾಥ್ (Master Manjunath)​ ಅವರು ಸಿನಿಮಾ ಶೂಟಿಂಗ್​ ಸಲುವಾಗಿ ವಿದೇಶಕ್ಕೆ ತೆರಳಿದ್ದರು. ಈಗಿನಂತೆ ಆಗಿನ ಕಾಲದಲ್ಲಿ ವಿಮಾನದ ಸೌಲಭ್ಯ ಚೆನ್ನಾಗಿ ಇರಲಿಲ್ಲ. ‘ಶಂಕರ್​ನಾಗ್​ ಬದುಕಿದ್ದರೆ ನೀವು ಕೆಲಸ ಅರ್ಧಕ್ಕೆ ನಿಲ್ಲಿಸಿ ಬರುವುದನ್ನು ಅವರು ಇಷ್ಟಪಡುತ್ತಿರಲಿಲ್ಲ’ ಎಂದು ಆಪ್ತರು ಕಳಿಸಿದ ಸಂದೇಶ ನೋಡಿ ಮಾಸ್ಟರ್​ ಮಂಜುನಾಥ್​ ಮತ್ತು ಅವರ ತಂಡವರು ವಿದೇಶದಲ್ಲಿ ಶೂಟಿಂಗ್​ ಮುಂದುವರಿಸಿದರು. ಆ ಸಂದರ್ಭವನ್ನು ಅವರು ಈಗ ನೆನಪು ಮಾಡಿಕೊಂಡಿದ್ದಾರೆ. ‘ಟಿವಿ9 ಕನ್ನಡ’ಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಆ ಕುರಿತು ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Follow us on

Click on your DTH Provider to Add TV9 Kannada