ಮತ್ತೆ ಸಿನಿಮಾ ಮಾಡ್ತಾರೆ ಮಾಸ್ಟರ್​ ಮಂಜುನಾಥ್​; ಆದ್ರೆ ಇಲ್ಲಿದೆ ಒಂದು ದೊಡ್ಡ ಟ್ವಿಸ್ಟ್​

Master Manjunath: ಮಾಸ್ಟರ್​ ಮಂಜುನಾಥ್​ ಅವರು ಮತ್ತೆ ಚಿತ್ರರಂಗದಲ್ಲಿ ತೊಡಗಿಕೊಳ್ಳುವ ಬಗ್ಗೆ ಆಲೋಚನೆ ಮಾಡಿದ್ದಾರೆ. ಅದು ಹೇಗೆ ಎಂಬ ಬಗ್ಗೆಯೂ ಅವರು ವಿವರಿಸಿದ್ದಾರೆ.

TV9kannada Web Team

| Edited By: Madan Kumar

May 14, 2022 | 4:12 PM

ಹಲವು ವರ್ಷಗಳಿಂದ ಖ್ಯಾತ ನಟ ಮಾಸ್ಟರ್​ ಮಂಜುನಾಥ್​ (Master Manjunath) ಅವರು ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಬಾಲ ನಟನಾಗಿ ಅನೇಕ ಸಿನಿಮಾಗಳಲ್ಲಿ (Master Manjunath Movies) ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದ್ದ ಅವರು ನಂತರದ ದಿನಗಳಲ್ಲಿ ನಟನೆಯಲ್ಲಿ ಮುಂದುವರಿಯಲಿಲ್ಲ. ಆ ಬಗ್ಗೆ ಅವರ ಅಭಿಮಾನಿಗಳಿಗೆ ಬೇಸರ ಇದೆ. ಶಂಕರ್​ ನಾಗ್ (Shankar Nag)​ ಅವರಂತಹ ಲೆಜೆಂಡರಿ ನಟರ ಜೊತೆ ಕೆಲಸ ಮಾಡಿದ ಅನುಭವವನ್ನು ಇಟ್ಟುಕೊಂಡಿರುವ ಮಾಸ್ಟರ್​ ಮಂಜುನಾಥ್​ ಅವರು ಮತ್ತೆ ಚಿತ್ರರಂಗಕ್ಕೆ ಕಮ್​ಬ್ಯಾಕ್​ ಮಾಡುತ್ತಾರೆ. ಆದರೆ ಇಲ್ಲೊಂದು ಟ್ವಿಸ್ಟ್​ ಇದೆ. ಅವರು ನಟನಾಗಿ ಮತ್ತೆ ಕ್ಯಾಮೆರಾ ಮುಂದೆ ನಿಲ್ಲುವ ಬಗ್ಗೆ ಯಾವುದೇ ಆಲೋಚನೆ ಇಲ್ಲ. ಬದಲಿಗೆ, ನಿರ್ದೇಶಕನಾಗಿ ಒಂದು ಪ್ರಯತ್ನ ಮಾಡಲು ಅವರು ಸಜ್ಜಾಗುತ್ತಿದ್ದಾರೆ. ಈ ಕುರಿತು ‘ಟಿವಿ9 ಕನ್ನಡ’ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ. ಅಲ್ಲದೇ ಅನೇಕ ವಿಚಾರಗಳ ಕುರಿತಾಗಿಯೂ ಮಾಸ್ಟರ್​ ಮಂಜುನಾಥ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada