ಚಲಿಸುತ್ತಿದ್ದ ಕಾರೊಂದು ನಡುರಸ್ತೆಯಲ್ಲಿ ಹೊತ್ತಿ ಉರಿದ ಮತ್ತೊಂದು ಘಟನೆ ಬೆಂಗಳೂರಲ್ಲಿ ಸಂಭವಿಸಿದೆ

ಚಲಿಸುತ್ತಿದ್ದ ಕಾರೊಂದು ನಡುರಸ್ತೆಯಲ್ಲಿ ಹೊತ್ತಿ ಉರಿದ ಮತ್ತೊಂದು ಘಟನೆ ಬೆಂಗಳೂರಲ್ಲಿ ಸಂಭವಿಸಿದೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 14, 2022 | 5:33 PM

ಗೊರಗುಂಟೆಪಾಳ್ಯ ಸರ್ಕಲ್ ಬಹಳ ಬ್ಯೂಸಿ ಪ್ರದೇಶವಾಗಿರುವುದರಿಂದ ಸ್ವಲ್ಪ ಸಮಯದವರೆಗೆ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ರಸ್ತೆಯ ನಡುಭಾಗದಲ್ಲಿ ಉರಿಯುತ್ತಿರುವ ಕಾರನ್ನು ಮೊಬೈಲ್ ಫುಟೇಜ್ ನಲ್ಲಿ ನೋಡಬಹುದು.

Bengaluru: ಚಲಿಸುವ ಕಾರು (moving car) ಹೊತ್ತಿ ಉರಿದ ಮತ್ತೊಂದು ಪ್ರಕರಣ ಬೆಂಗಳೂರಲ್ಲಿ ಸಂಭವಿಸಿದೆ. ನಗರದ ಗೊರುಗುಂಟೆಪಾಳ್ಯದ (Gorguntepalya) ಸಿಗ್ನಲ್ ಬಳಿ ಈ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಅದರಲ್ಲಿ ವಾಹನದ ಮಾಲೀಕ ಅನಿಲ ಕುಮಾರ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದರು. ಪೊಲೀಸ್ ಮೂಲಗಳ ಪ್ರಕಾರ ಅನಿಲ ಕುಮಾರ (Anil Kumar) ತುಮಕೂರಿನವರು ಮತ್ತು ಯಾವುದೋ ಕಾರ್ಯನಿಮಿತ್ತ ಬೆಂಗಳೂರಿಗೆ ಬಂದಿದ್ದರು. ಕೆಲಸ ತೀರಿಸಿಕೊಂಡು ವಾಪಸ್ಸು ಊರಿಗೆ ತೆರಳುವಾಗ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ನಾಲ್ವರಲ್ಲಿ ಯಾರಿಗೂ ಗಾಯವಾಗಿಲ್ಲ. ವಿಷಯ ಗೊತ್ತಾದ ಕೂಡಲೇ ಯಶವಂತಪಪುರ ಅಗ್ನಿಶಾಮಕ ದಳ ಕಚೇರಿಯಿಂದ ಫೈರ್ ಎಂಜಿನ್ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದೆ.

ಗೊರಗುಂಟೆಪಾಳ್ಯ ಸರ್ಕಲ್ ಬಹಳ ಬ್ಯೂಸಿ ಪ್ರದೇಶವಾಗಿರುವುದರಿಂದ ಸ್ವಲ್ಪ ಸಮಯದವರೆಗೆ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ರಸ್ತೆಯ ನಡುಭಾಗದಲ್ಲಿ ಉರಿಯುತ್ತಿರುವ ಕಾರನ್ನು ಮೊಬೈಲ್ ಫುಟೇಜ್ ನಲ್ಲಿ ನೋಡಬಹುದು.

ಚಲಿಸುತ್ತಿರುವ ಕಾರುಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಉರಿಯುವ ದೃಶ್ಯ ಸಾಮಾನ್ಯವಾಗಿ ಬಿಡುತ್ತಿದೆ. ಇತ್ತೀಚಿಗೆ ರಸ್ತೆಗಿಳಿದಿರುವ ಎಲೆಕ್ಟ್ರಿಕ್ ವಾಹನಗಳಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಯಾಕೆ ಆಗುತ್ತಿದೆ ಅಂತ ವಾಹನಗಳನ್ನು ತಯಾರಿಸುವ ಕಂಪನಿಗಳಿಗೆ ಅಲ್ಲಿನ ಇಂಜಿನೀಯರ್ ಗಳಿಗೆ ಗೊತ್ತಾಗುತ್ತಿಲ್ಲವೇ ಅಂತ ಜನರು ಪ್ರಶ್ನಿಸುತ್ತಿದ್ದಾರೆ. ಸಮಸ್ಯೆ ಯಾವುದೋ ಒಂದು ಬ್ರ್ಯಾಂಡ್ ಕಾರುಗಳಲ್ಲಿ ಕಾಣುತ್ತಿಲ್ಲ, ಹಲವಾರು ಕಂಪನಿಗಳ ವಾಹನಗಳು ನಡುರಸ್ತೆಯಲ್ಲಿ ಹೊತ್ತಿ ಉರಿದಿವೆ.

ಇದನ್ನೂ ಓದಿ:   Gyanvapi masjid controversy: ಕೋರ್ಟ್ ನೇಮಿಸಿದ ಕಮೀಷನರುಗಳಿಂದ ವಿಡಿಯೋ ಸರ್ವೇ ನಾಳೆ ಆರಂಭ, ಪ್ರಕ್ರಿಯೆ ಹೇಗೆ ನಡೆಯಲಿದೆ ಗೊತ್ತಾ?