ಕಾಣೆಯಾದವರಿಗಾಗಿ ಒಂದಾದ ಚಂದನ್ ಶೆಟ್ಟಿ ಹಾಗೂ ಆಲ್​ ಓಕೆ

ಚಂದನ್ ಶೆಟ್ಟಿ ಹಾಗೂ ಆಲ್​ ಒಕೆ ಇಬ್ಬರೂ ರ‍್ಯಾಪ್​ ಹಾಡಿನ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡವರು. ಇವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.

TV9kannada Web Team

| Edited By: Rajesh Duggumane

May 14, 2022 | 9:50 PM

ಚಂದನ್ ಶೆಟ್ಟಿ (Chandan Shetty) ಹಾಗೂ ಆಲ್​ ಒಕೆ ಇಬ್ಬರೂ ರ‍್ಯಾಪ್​ ಹಾಡಿನ ಮೂಲಕ ಸ್ಯಾಂಡಲ್​ವುಡ್​ನಲ್ಲಿ (Sandalwood) ಗುರುತಿಸಿಕೊಂಡವರು. ಇವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಈಗ ಇಬ್ಬರೂ ಒಟ್ಟಾಗಿ ಹಾಡು ಹೇಳಿದ್ದಾರೆ. ಹೌದು, ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಸಿನಿಮಾದ ‘ಬ್ಯಾಂಗ್ ಬ್ಯಾಂಗ್ ಬ್ಯಾಂಕಾಕ್..’ ಹಾಡಿಗೆ ಇಬ್ಬರೂ ದನಿಯಾಗಿದ್ದಾರೆ. ಈ ವಿಚಾರ ಕೇಳಿ ಇಬ್ಬರ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಕಾರಣಕ್ಕೂ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಇದ್ದ ನಿರೀಕ್ಷೆ ಹೆಚ್ಚಿದೆ. ಪೋಷಕ ಕಲಾವಿದರಾದ ರಂಗಾಯಣ ರಘು, ರವಿಶಂಕರ್‌, ತಬಲಾ ನಾಣಿ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಆಶಿಕಾ ರಂಗನಾಥ್‌ (Ashika Ranganath) ಸೇರಿದಂತೆ ಇನ್ನೂ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada