ಹಿಂದೆ ಜಮೀರ್ ಮಾಡಿದಂತೆ ಇಬ್ರಾಹಿಂ ಸಹ ಕುಮಾರಸ್ವಾಮಿ ಕೆನ್ನೆಯನ್ನು ಮುದ್ದಿಸಿದರು!
ಈಗ ಕಾಂಗ್ರೆಸ್ ನಲ್ಲಿರುವ ಜಮೀರ್ ಅಹ್ಮದ್ ಖಾನ್ ಅವರು ತಾವು ಹಿಂದೆ ಜೆಡಿ(ಎಸ್) ನಲ್ಲಿದ್ದಾಗ ಯಾವುದೋ ಸಭೆಯಲ್ಲಿ ಕುಮಾರಣ್ಣನ ಕೆನ್ನೆಯನ್ನು ಮುದ್ದಿಸಿದ್ದರು!
Tumakuru: ಯಾರೇನೇ ಹೇಳಲಿ, ಮುಸ್ಲಿಂ ಸಮುದಾಯದ ನಾಯಕರಿಗೆ ಜೆಡಿ(ಎಸ್) ಪಕ್ಷದ ಧುರೀಣ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅಂದರೆ ಬಲು ಪ್ರೀತಿ. ಇದನ್ನು ನಾವು ಹೇಳುವುದಕ್ಕೆ ಕಾರಣಗಳಿವೆ ಮಾರಾಯ್ರೇ. ಇಲ್ಲಿರುವ ಮೊಬೈಲ್ ಫುಟೇಜ್ ನೋಡಿ. ತುಮಕೂರಿನಲ್ಲಿ ಜನತಾ ಜಲಧಾರೆ (Janatha Jaladhare) ಕಾರ್ಯಕ್ರಮ ಜಾರಿಯಲ್ಲಿದ್ದಾಗ ಪಕ್ಷದ ಒಬ್ಬ ಕಾರ್ಯಕರ್ತ ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಕುಮಾರಸ್ವಾಮಿ ಮತ್ತು ಮೊನ್ನೆಯಷ್ಟೇ ಕಾಂಗ್ರೆಸ್ ಪಕ್ಷ ತೊರೆದು ಜೆಡಿ(ಎಸ್) ಗೆ ರೀ-ಎಂಟ್ರಿ ಪಡೆದಿರುವ ಸಿ ಎಮ್ ಇಬ್ರಾಹಿಂ (CM Ibrahim) ಲೋಕಾಭಿರಾಮವಾಗಿ ಮಾತಾಡುತ್ತಾ ನಿಂತಿದ್ದಾರೆ. ಅವರಿಬ್ಬರನ್ನು ಕಾರ್ಯಕರ್ತರು ಸುತ್ತುವರಿದಿದ್ದಾರೆ. ಕುಮಾರಸ್ವಾಮಿಯೊಂದಿಗೆ ಮಾತಾಡುತ್ತಲೇ ಅವರ ಕೈಗೆ ಮುದ್ದಿಡುವ ಇಬ್ರಾಹಿಂ ಸಾಹೇಬರು ನಂತರ ಅವರ ಕೆನ್ನೆಯನ್ನೂ ಮುದ್ದಿಸುತ್ತಾರೆ!
ಈ ದೃಶ್ಯ ನೋಡಿದ ಬಳಿಕ ನಿಮಗೆ ಏನಾದರೂ ನೆನಪಾಯಿತೇ? ಹೌದು, ಈಗ ಕಾಂಗ್ರೆಸ್ ನಲ್ಲಿರುವ ಜಮೀರ್ ಅಹ್ಮದ್ ಖಾನ್ ಅವರು ತಾವು ಹಿಂದೆ ಜೆಡಿ(ಎಸ್) ನಲ್ಲಿದ್ದಾಗ ಯಾವುದೋ ಸಭೆಯಲ್ಲಿ ಕುಮಾರಣ್ಣನ ಕೆನ್ನೆಯನ್ನು ಮುದ್ದಿಸಿದ್ದರು!
ಹೆಚ್ ಡಿ ದೇವೇಗೌಡ, ಕುಮಾರಸ್ವಾಮಿ ಮತ್ತು ಪಕ್ಷದ ಎಲ್ಲ ಕಾರ್ಯಕರ್ತರು ಜನತಾ ಜಲಧಾರೆ ಕಾರ್ಯಕ್ರಮ ಭಾರಿ ಯಶ ಕಂಡಿದೆ ಮತ್ತು ಮುಂಬರುವ ಚುನಾವಣೆಯಲ್ಲಿ ಇದು ಪಕ್ಷಕ್ಕೆ ನಿರ್ಣಾಯಕವಾಗಿ ನೆರವಾಗಲಿದೆ ಎಂದು ಹೇಳುತ್ತಿದ್ದಾರೆ. 2023 ರ ವಿಧಾನ ಸಭಾ ಚುನಾವಣೆಯಲ್ಲಿ ನಮ್ಮ ಗುರಿ 123 ಸೀಟುಗಳನ್ನು ಗೆಲ್ಲುವುದಾಗಿದೆ ಎಂದು ದೇವೇಗೌಡ ಹೇಳಿದ್ದಾರೆ.