ಕೊನೆ ಉಸಿರು ಇರುವವರೆಗೂ ಬಡವರಿಗಾಗಿ ಹೋರಾಡುತ್ತೇನೆ; ಅಧಿಕಾರಕ್ಕೆ ಬಂದ್ರೆ ನೀರಾವರಿ ಸೌಲಭ್ಯ, ಶಿಕ್ಷಣ, ಆರೋಗ್ಯಕ್ಕೆ ಒತ್ತು ಕೊಟ್ತೇನೆ -ಹೆಚ್.ಡಿ.ಕುಮಾರಸ್ವಾಮಿ

ಕೊನೆ ಉಸಿರು ಇರುವವರೆಗೂ ಬಡವರಿಗಾಗಿ ಹೋರಾಡುತ್ತೇನೆ; ಅಧಿಕಾರಕ್ಕೆ ಬಂದ್ರೆ ನೀರಾವರಿ ಸೌಲಭ್ಯ, ಶಿಕ್ಷಣ, ಆರೋಗ್ಯಕ್ಕೆ ಒತ್ತು ಕೊಟ್ತೇನೆ -ಹೆಚ್.ಡಿ.ಕುಮಾರಸ್ವಾಮಿ
ಹೆಚ್.ಡಿ.ಕುಮಾರಸ್ವಾಮಿ

ಸಮ್ಮಿಶ್ರ ಸರ್ಕಾರದಲ್ಲಿ ಸ್ವಂತವಾಗಿ ನಿರ್ಧಾರ ಕೈಗೊಳ್ಳಲು ಆಗಿರಲಿಲ್ಲ. ರೈತರ ಸಾಲಮನ್ನಾ ಮಾಡಲೂ ಸಾಕಷ್ಟು ಹರಸಾಹಸ ಪಟ್ಟಿದ್ದೆ. ಪಕ್ಷಕ್ಕೆ ದೇವರು, ಕಾರ್ಯಕರ್ತರ ಆಶೀರ್ವಾದವಿದೆ. ಕೊನೆ ಉಸಿರು ಇರುವವರೆಗೂ ಬಡವರಿಗಾಗಿ ಹೋರಾಡುತ್ತೇನೆ. ಅಧಿಕಾರಕ್ಕೆ ಬಂದ್ರೆ ನೀರಾವರಿ ಸೌಲಭ್ಯ, ಶಿಕ್ಷಣ, ಆರೋಗ್ಯಕ್ಕೆ ಒತ್ತು ಕೊಟ್ತೇನೆ.

TV9kannada Web Team

| Edited By: Ayesha Banu

May 13, 2022 | 10:08 PM

ಬೆಂಗಳೂರು ಗ್ರಾಮಾಂತರ: ನೆಲಮಂಗಲದ ಬಾವಿಕೆರೆಯಲ್ಲಿ JDSನ ಜನತಾ ಜಲಧಾರೆ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೆಸರು ಹೇಳದೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಸಿದ್ದರಾಮಯ್ಯರನ್ನು ಸೋಲಿಸಿ ಉತ್ತರ ಕೊಟ್ಟಿದ್ದೀರಿ. ಮೈಸೂರಿನಲ್ಲಿ ಜೆಡಿಎಸ್‌ ಒಂದೇ ಒಂದು ಸೀಟ್‌ ಗೆಲ್ಲಲ್ಲ ಎಂದಿದ್ದರು. ಜೆಡಿಎಸ್‌ನಿಂದಲೇ ಬೆಳೆದಿದ್ದ ಸಿದ್ದರಾಮಯ್ಯ ಪಕ್ಷದ ಬಗ್ಗೆ ಹೇಳಿದ್ರು. ಹೀಗೆ ಹೇಳಿದ್ದ ಸಿದ್ದರಾಮಯ್ಯರನ್ನ ಸೋಲಿಸಿ ಉತ್ತರ ಕೊಟ್ಟಿದ್ದೀರಿ ಎಂದರು.

ಜೆಡಿಎಸ್​ಗೆ ಭವಿಷ್ಯವೇ ಇಲ್ಲ ಅಂತಾ ಹೇಳುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ನಾನು ಹೊರಗೆ ಬಂದಿರಲಿಲ್ಲ. ಆಗ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿರಲಿಲ್ಲ. ಬಿಜೆಪಿ, ಕಾಂಗ್ರೆಸ್​ಗೆ ಇದ್ದಂತಹ ಆತುರ ನನಗೆ ಇರಲಿಲ್ಲ. ಮೈಸೂರು ಜಿಲ್ಲೆಯಲ್ಲಿ ಒಂದೂ ಸ್ಥಾನ ಬರೋದಿಲ್ಲ ಅಂದ್ರು. ಇಲ್ಲಿಂದಲೇ ಬೆಳೆದು ಹೋದವರು ಹೇಳಿದ್ದರು. ಇಲ್ಲಿಂದಲೇ ಅವರಿಗೆ ತಕ್ಕ ಉತ್ತರ ಕೊಟ್ಟಿದ್ದೀರಿ. ಬೆಳಗ್ಗೆ ಎದ್ರೆ ನನ್ನ ಮನೆಗೆ ಪ್ರತಿದಿನ 20 ಜನ ಬರುತ್ತಾರೆ. ಶಾಲೆಗೆ ಶುಲ್ಕ, ಆಸ್ಪತ್ರೆಗೆ ಹಣ ಕಟ್ಟಲು ಶಕ್ತಿ ಇಲ್ಲದ ಕಾರಣ ಕಷ್ಟವನ್ನ ಹೊತ್ತು ನಮ್ಮ ಬಳಿ ಬರುತ್ತಾರೆ. ನಾನು ಈಗಾಗಲೇ ಎರಡು ಭಾರಿ ಸಿಎಂ ಆಗಿದ್ದೇನೆ. ರಾಜಕೀಯದ ಕೆಲ ಬೆಳವಣಿಗೆಯಿಂದ ಎರಡು ಭಾರಿ ಸಿಎಂ ಆದೆ. ಆದರೆ, ಸ್ವತಂತ್ರವಾದ‌ ಸರ್ಕಾರ ಇರಲಿಲ್ಲ. ಅನುಕಂಪ ಗಿಟ್ಟಿಸಿ ಅಧಿಕಾರ ಪಡೆಯಬೇಕೆಂಬ ಉದ್ದೇಶ ಇಲ್ಲ. ಪಂಚರತ್ನ ಕಾರ್ಯಕ್ರಮದ ಬಗ್ಗೆ ಹುಡುಗಾಟಿಕೆಯಿಂದ ಹೇಳುತ್ತಿಲ್ಲ. ನಾಡಿನ ಪರ ಹೋರಾಟ ಮಾಡುವ ಯಾರಾದರೂ ಇದ್ದರೆ ಅದು ದೇವೇಗೌಡರು ಮಾತ್ರ. ಫೀನಿಕ್ಸ್‌ ನಂತೆ ಎದ್ದು ಬರುತ್ತೇನೆ. 2023 ನಾಡಿನ ಜನತೆಗೆ ಜೆಡಿಎಸ್ ಪರಿಹಾರವಾಗಲಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಅಧಿಕಾರಕ್ಕೆ ಬಂದ್ರೆ ನೀರಾವರಿ ಸೌಲಭ್ಯ, ಶಿಕ್ಷಣ, ಆರೋಗ್ಯಕ್ಕೆ ಒತ್ತು ಸಮ್ಮಿಶ್ರ ಸರ್ಕಾರದಲ್ಲಿ ಸ್ವಂತವಾಗಿ ನಿರ್ಧಾರ ಕೈಗೊಳ್ಳಲು ಆಗಿರಲಿಲ್ಲ. ರೈತರ ಸಾಲಮನ್ನಾ ಮಾಡಲೂ ಸಾಕಷ್ಟು ಹರಸಾಹಸ ಪಟ್ಟಿದ್ದೆ. ಪಕ್ಷಕ್ಕೆ ದೇವರು, ಕಾರ್ಯಕರ್ತರ ಆಶೀರ್ವಾದವಿದೆ. ಕೊನೆ ಉಸಿರು ಇರುವವರೆಗೂ ಬಡವರಿಗಾಗಿ ಹೋರಾಡುತ್ತೇನೆ. ಅಧಿಕಾರಕ್ಕೆ ಬಂದ್ರೆ ನೀರಾವರಿ ಸೌಲಭ್ಯ, ಶಿಕ್ಷಣ, ಆರೋಗ್ಯಕ್ಕೆ ಒತ್ತು ಕೊಟ್ತೇನೆ. 5 ವರ್ಷಗಳಲ್ಲಿ ಯೋಜನೆ ಜಾರಿಗೊಳಿಸದಿದ್ರೆ ಎಂದಿಗೂ ಜೆಡಿಎಸ್‌ಗೆ ಮತ ಹಾಕಬೇಡಿ. 2023ರಲ್ಲಿ ಪಕ್ಷ ಅಧಿಕಾರಕ್ಕೆ ತರಲು ನನಗೆ ಸಹಕಾರ ನೀಡಿ ಎಂದು ಜೆಡಿಎಸ್‌ ಪಕ್ಷದ ಕಾರ್ಯಕರ್ತರಿಗೆ ಹೆಚ್‌.ಡಿ.ಕುಮಾರಸ್ವಾಮಿ ಕರೆ ಕೊಟ್ಟಿದ್ದಾರೆ.

ಟಿಕೆಟ್ ನೀಡುವಾಗ ಹಣ ಪಡೆಯುತ್ತಾರೆಂದು ಆರೋಪಿಸುತ್ತಾರೆ. ನಾವು ಹಣ ಪಡೆದಿದ್ರೆ ಅನ್ನದಾನಿ ಅಂತಹವರು ಸ್ಪರ್ಧಿಸಲಾಗುತ್ತಾ? ಅನ್ನದಾನಿಯ ಚುನಾವಣಾ ವೆಚ್ಚವನ್ನೂ ಪಕ್ಷವೇ ಭರಿಸಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದೆ. ಸ್ವತಂತ್ರ ಸರ್ಕಾರವನ್ನು ತರಲು ನಾವು, ನೀವು ಪಣ ತೊಡೋಣ ಎಂದು ರಾಜ್ಯ ಸರ್ಕಾರದ ವಿರುದ್ಧ ಹೆಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ರು. 224 ಕ್ಷೇತ್ರಗಳಲ್ಲೂ ರಥ ಯಾತ್ರೆ ಹಮ್ಮಿಕೊಳ್ಳುತ್ತೇನೆ. ಮುಂದಿನ 3 ತಿಂಗಳ ಕಾಲ ರಾಜ್ಯದ ಪ್ರತಿ ಕ್ಷೇತ್ರಕ್ಕೂ ಬರುತ್ತೇನೆ ಎಂದರು.

Follow us on

Related Stories

Most Read Stories

Click on your DTH Provider to Add TV9 Kannada