ಮದ್ಯ ಪ್ರಿಯರಿಗೆ ಮತ್ತೊಮ್ಮೆ ಬಿಗ್ ಶಾಕ್: ನಾಳೆಯಿಂದ ಮೂರು ದಿನ ಬೆಂಗಳೂರಲ್ಲಿ ಎಣ್ಣೆ ಸಿಗಲ್ಲ

ಬೆಂಗಳೂರು‌ ಗ್ರಾಮಾಂತರದಲ್ಲಿ 17-5-22 ಮಂಗಳವಾರ ಹಾಗೂ ಬೆಂಗಳೂರು ನಗರದಲ್ಲಿ 19-5-22- ಗುರುವಾರ ಮದ್ಯ ಖರೀದಿ ಮಾಡದಿರಲು ನಿರ್ಧರಿಸಲಾಗಿದೆ. 

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 16, 2022 | 12:43 PM

ಬೆಂಗಳೂರು: ಸರ್ಕಾರದ ಇ-ಇಂಡೆಂಟ್ ಪದ್ಧತಿಗೆ ಮದ್ಯದಂಗಡಿ ಮಾಲೀಕರು ವಿರೋಧಿಸಿದ್ದಾರೆ. ರಾಜ್ಯ ಪಾನೀಯ ನಿಗಮ ಆರಂಭಿಸಿರುವ ಹೊಸ ಇ-ಇಂಡೆಂಟ್ ವ್ಯವಸ್ಥೆ ಇದಾಗಿದ್ದು, ಬಾರ್​, ವೈನ್ಸ್​ ಮಾಲೀಕರು ಆನ್​ಲೈನ್ ಮೂಲಕ ಮದ್ಯ ಖರೀದಿಸಬೇಕಾಗಿದೆ. ನಾಳೆಯಿಂದ 3 ದಿನ ಬೆಂಗಳೂರು ನಗರ, ಗ್ರಾಮಾಂತರದಲ್ಲಿ KSBLನಿಂದ ಮದ್ಯ ಖರೀದಿಸದಿರಲು ಮದ್ಯದಂಗಡಿ ಮಾಲೀಕರು ನಿರ್ಧಾರ ಮಾಡಿದ್ದಾರೆ. ಹಾಗಾಗಿ ಮದ್ಯ ಪ್ರಿಯರಿಗೆ ಮತ್ತೊಮ್ಮೆ ಬಿಗ್ ಶಾಕ್ ನೀಡಿದ್ದು, ನಾಳೆಯಿಂದ ಮೂರು ದಿನಗಳ‌ ಕಾಲ ಬೆಂಗಳೂರಲ್ಲಿ ಖರೀದಿಸಲು ಎಣ್ಣೆ ಸಿಗಲ್ಲ. ಬೆಂಗಳೂರಿನಲ್ಲಿ ದಿಢೀರನೆ ಬಂದ್ ಆಗಲಿದೆ ಮದ್ಯ ಸರಬರಾಜು. ಸರ್ಕಾರದ ಇ-ಇಂಡೆಂಟ್‌ ವಿರುದ್ಧ ಮದ್ಯದಂಗಡಿ ಮಾಲೀಕರ ಆಕ್ರೋಶ ವ್ಯಕ್ತಪಡಿಸಿದ್ದು, ಇದರ ವಿರುದ್ಧ ವೈನ್ ಮರ್ಚೆಂಟ್ಸ್ ಅಸೋಸಿಯೇನ್​ಗಳ ಒಕ್ಕೂಟ ಅಸಮಧಾನ‌ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮೇ 6 ರಿಂದ‌ ವಿವಿಧ ಜಿಲ್ಲೆಗಳಲ್ಲಿ‌ ಒಂದೊಂದು‌ ದಿನದಂತೆ ಮಧ್ಯ ಖರೀದಿಗೆ ಬ್ರೇಕ್ ಹಾಕಲಾಗಿದ್ದು ಕೆಎಸ್ಬಿಎಲ್​ಗಳಿಂದ ಎಣ್ಣೆ ಖರೀದಿ ಮಾಡದಿರಲು ಎಣ್ಣೆ ಅಂಗಡಿ ಮಾಲೀಕರು ನಿರ್ಧಾರ ಮಾಡಿದ್ದಾರೆ. ಬೆಂಗಳೂರು‌ ಗ್ರಾಮಾಂತರದಲ್ಲಿ 17-5-22 ಮಂಗಳವಾರ ಹಾಗೂ ಬೆಂಗಳೂರು ನಗರದಲ್ಲಿ 19-5-22- ಗುರುವಾರ ಮದ್ಯ ಖರೀದಿ ಮಾಡದಿರಲು ನಿರ್ಧರಿಸಲಾಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on

Click on your DTH Provider to Add TV9 Kannada