AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dattapeeta Fighter: ಅಂದು-ಇಂದು ಎಂದೆಂದಿಗೂ ನಾನು ದತ್ತಪೀಠ ಹೋರಾಟಗಾರನೇ, ಹಿಂದೆ ಸರಿಯುವ ಮಾತೇ ಇಲ್ಲ-ಸಚಿವ ಸುನಿಲ್ ಕುಮಾರ್

ದತ್ತಪೀಠದ ವಿಚಾರದಲ್ಲಿ ಸರ್ಕಾರದ ಮಟ್ಟದಲ್ಲಿ ಕಾನೂನಿನನ್ವಯ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನ ಬಿಜೆಪಿ ಸರ್ಕಾರ ಕೈಗೊಂಡಿದೆ. ದತ್ತಪೀಠ ಹಿಂದೂಗಳದ್ದಾಗಬೇಕು ಎಂದು ಅನೇಕ ವರ್ಷಗಳಿಂದ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ. ಶೀಘ್ರವೇ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಹಾಗೂ ಪೂಜೆ ನಡೆಯಲಿದೆ ಎಂದು ಇಂಧನ ಸಚಿವ ಹಾಗೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ

Dattapeeta Fighter: ಅಂದು-ಇಂದು ಎಂದೆಂದಿಗೂ ನಾನು ದತ್ತಪೀಠ ಹೋರಾಟಗಾರನೇ, ಹಿಂದೆ ಸರಿಯುವ ಮಾತೇ ಇಲ್ಲ-ಸಚಿವ ಸುನಿಲ್ ಕುಮಾರ್
ಅಂದು-ಇಂದು ಎಂದೆಂದಿಗೂ ನಾನು ದತ್ತಪೀಠ ಹೋರಾಟಗಾರನೇ, ಹಿಂದೆ ಸರಿಯುವ ಮಾತೇ ಇಲ್ಲ-ಸಚಿವ ಸುನಿಲ್ ಕುಮಾರ್
TV9 Web
| Updated By: ಸಾಧು ಶ್ರೀನಾಥ್​|

Updated on: May 05, 2022 | 7:25 PM

Share

ಚಿಕ್ಕಮಗಳೂರು: ದತ್ತಪೀಠ ಹೋರಾಟದ ವಿಚಾರದಲ್ಲಿ ಅಂದಿನಿಂದ ಇಂದಿನವರೆಗೂ ಕೂಡ ನಾನೊಬ್ಬ ಹೋರಾಟಗಾರ (Dattapeeta Fighter). ದತ್ತಪೀಠ ಹಿಂದೂಗಳ ಪೀಠವಾಗಬೇಕೆಂಬ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಇಂಧನ ಸಚಿವ ಹಾಗೂ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದ್ದಾರೆ (V Sunil Kumar). ಅವರಿಂದು ಖಾಸಗಿ ಹಾಗೂ ಸರ್ಕಾರಿ ಕಾರ್ಯಕ್ರಮದ ನಿಮಿತ್ತ ಜಿಲ್ಲೆಗೆ ಭೇಟಿ ನೀಡಿದ್ದರು. ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿರುವ ಶಾರದಾಂಬೆ ದೇಗುಲಕ್ಕೆ ಕುಟುಂಬ ಸಮೇತರವಾಗಿ ಭೇಟಿ ನೀಡಿದ ಅವರು, ಶೃಂಗೇರಿ ಶಾರದಾಂಬೆ ದರ್ಶನ ಪಡೆದು, ಗುರವತ್ರಯರ ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ವೇಳೆ, ಪತ್ರಕರ್ತರ ಜೊತೆ ಮಾತನಾಡಿದ ಅವರು, ಅಂದು-ಇಂದು ನಾನೊಬ್ಬ ದತ್ತಪೀಠದ ಹೋರಾಟಗಾರ. ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಕಾನೂನು ತಜ್ಞರ ಸಲಹೆಯಂತೆ ಅಗತ್ಯ ಕ್ರಮಗಳನ್ನ ಕೈಗೊಂಡು, ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಹಾಗೂ ನಮ್ಮ ಪರಂಪರೆಯಂತೆ ಪೂಜೆ-ಪುನಸ್ಕಾರಗಳು ನಡೆಯುವ ರೀತಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ದತ್ತಪೀಠದ ವಿಚಾರದಲ್ಲಿ ಸರ್ಕಾರದ ಮಟ್ಟದಲ್ಲಿ ಕಾನೂನಿನನ್ವಯ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನ ಬಿಜೆಪಿ ಸರ್ಕಾರ ಕೈಗೊಂಡಿದೆ. ದತ್ತಪೀಠ ಹಿಂದೂಗಳದ್ದಾಗಬೇಕು ಎಂದು ಅನೇಕ ವರ್ಷಗಳಿಂದ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ. ಶೀಘ್ರವೇ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಹಾಗೂ ಪೂಜೆ ನಡೆಯಲಿದೆ ಎಂದರು. ಶೃಂಗೇರಿ ಶಾರದಾಂಬೆ ದರ್ಶನ ಬಳಿಕ ಮಳೆ ದೇವರು ಎಂದೇ ಖ್ಯಾತಿಯಾಗಿರುವ ಕಿಗ್ಗಾದ ಋಷ್ಯಶೃಂಗೇಶ್ವರ ದೇಗುಲಕ್ಕೆ ಭೇಟಿ ನೀಡಿ ಋಷ್ಯಶೃಂಗೇಶ್ವರನ ದರ್ಶನವನ್ನೂ ಪಡೆದಿದ್ದಾರೆ.

ಶೃಂಗೇರಿ ಬಳಿಕ ಕೊಪ್ಪಕ್ಕೆ ಭೇಟಿ ನೀಡಿದ ಸಚಿವ ಸುನಿಲ್ ಕುಮಾರ್, ಕೊಪ್ಪದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮೆಸ್ಕಾಂ ವಿಭಾಗೀಯ ಕಚೇರಿ ಕಟ್ಟಡ ಹಾಗೂ ವಿಭಾಗೀಯ ಉಗ್ರಾಣ ಕಟ್ಟಡವನ್ನ ಉದ್ಘಾಟನೆ ಮಾಡಿದರು. ಮಲೆನಾಡು ಭಾಗದ ಮನೆಗಳಿಗೆ ಅರಣ್ಯ ಇಲಾಖೆಯ ಕಾನೂನುಗಳಿಂದ ವಿದ್ಯುತ್ ಸಂಪರ್ಕ ನೀಡಲು ತೊಂದರೆಯಾಗಿದ್ದಲ್ಲಿ ಅಂತಹ ಮನೆಗಳಿಗೆ ಸೋಲಾರ್ ಲೈಟ್ ಅಳವಡಿಕೆಯ ಮೂಲಕ ವಿದ್ಯುತ್ ಸಂಪರ್ಕ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮಲೆನಾಡಿನ ಅನೇಕ ಮನೆಗಳಿಗೆ ವಿದ್ಯುತ್ ನೀಡುವಲ್ಲಿ ಅಡೆತಡೆಗಳು ಎದುರಾಗಿವೆ. ಸೆಕ್ಷನ್ 4, ಡೀಮ್ಡ್ ಫಾರೆಸ್ಟ್, ಮೀಸಲು ಅರಣ್ಯ ಸೇರಿದಂತೆ ಅನೇಕ ಸಮಸ್ಯೆಗಳು ಈ ಭಾಗದಲ್ಲಿ ಎದುರಾಗಿವೆ. ಈ ಕಾರಣದಿಂದ ವಿದ್ಯುತ್ ಸೌಲಭ್ಯ ನೀಡಲು ಸಾಧ್ಯವಾಗದ ಮನೆಗಳಿಗೆ ಪರ್ಯಾಯವಾಗಿ ಸೋಲಾರ್ ದೀಪಗಳನ್ನು ನೀಡುವ ಭರವಸೆ ನೀಡಿದರು. ಕೃಷಿ ಸಂಬಂಧಿತ ಮೋಟಾರ್ ಹಾಗೂ ಪಂಪ್ ಸೆಟ್‍ಗಳ ಚಾಲನೆಗೆ ವಿದ್ಯುತ್ ಅತ್ಯಾವಶ್ಯಕ. ಈ ನಿಟ್ಟಿನಲ್ಲಿ ಅಗತ್ಯವಾಗಿ ದೊರೆಯಬೇಕಿರುವ 110 ಕೆ.ವಿ ವಿದ್ಯುತ್ ಸ್ಥಾವರಕ್ಕೆ ಈಗಾಗಲೇ ಅನುಮೋದನೆ ದೊರೆತಿದ್ದು, ಮೂರು ತಿಂಗಳ ಒಳಗಾಗಿ ತಲೆದೋರಿರುವ ಜಾಗದ ಸಮಸ್ಯೆಯನ್ನು ಬಗೆಹರಿಸಿ ತ್ವರಿತಗತಿಯಲ್ಲಿ ಈ ಕಾರ್ಯ ನಡೆಸಲಾಗುವುದು ಎಂದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್, ಶೃಂಗೇರಿ ಶಾಸಕ ರಾಜೇಗೌಡ ಉಪಸ್ಥಿತರಿದ್ದರು.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  

Also Read: Video: ರಷ್ಯಾ ಸೈನಿಕರ ಆಕ್ರಮಣದಿಂದ ಕಾಲು-ಕೈಬೆರಳುಗಳನ್ನು ಕಳೆದುಕೊಂಡ ನರ್ಸ್​ ಮದುವೆ; ಮನಕಲಕುವ ಸನ್ನಿವೇಶಕ್ಕೆ ಸಾಕ್ಷಿಯಾದ ಆಸ್ಪತ್ರೆ ಸಿಬ್ಬಂದಿ

Also Read: ಸಮಂತಾ ನಟನೆಯ ‘ಯಶೋದ’ ಸಿನಿಮಾ ಹೇಗಿರಲಿದೆ?; ಇಲ್ಲಿದೆ ಝಲಕ್