Video: ರಷ್ಯಾ ಸೈನಿಕರ ಆಕ್ರಮಣದಿಂದ ಕಾಲು-ಕೈಬೆರಳುಗಳನ್ನು ಕಳೆದುಕೊಂಡ ನರ್ಸ್​ ಮದುವೆ; ಮನಕಲಕುವ ಸನ್ನಿವೇಶಕ್ಕೆ ಸಾಕ್ಷಿಯಾದ ಆಸ್ಪತ್ರೆ ಸಿಬ್ಬಂದಿ

ಮದುವೆಗಾಗಿ ಆಸ್ಪತ್ರೆಯಲ್ಲಿ ಸಕಲ ವ್ಯವಸ್ಥೆಯನ್ನೂ ಮಾಡಲಾಗಿತ್ತು. ವೆಡ್ಡಿಂಗ್ ಕೇಕ್​ ಕೂಡ ತಯಾರಾಗಿತ್ತು. ಎಲ್ಲವನ್ನೂ ಆಸ್ಪತ್ರೆಯ ಸಿಬ್ಬಂದಿಯೇ ಖುದ್ದಾಗಿ ನಿಂತು ಮಾಡಿದ್ದರು.

Video: ರಷ್ಯಾ ಸೈನಿಕರ ಆಕ್ರಮಣದಿಂದ ಕಾಲು-ಕೈಬೆರಳುಗಳನ್ನು ಕಳೆದುಕೊಂಡ ನರ್ಸ್​ ಮದುವೆ; ಮನಕಲಕುವ ಸನ್ನಿವೇಶಕ್ಕೆ ಸಾಕ್ಷಿಯಾದ ಆಸ್ಪತ್ರೆ ಸಿಬ್ಬಂದಿ
ನರ್ಸ್​ ತನ್ನ ಪ್ರಿಯಕರನೊಂದಿಗೆ ವಿವಾಹವಾದ ಸಂದರ್ಭ
Follow us
TV9 Web
| Updated By: Lakshmi Hegde

Updated on:May 05, 2022 | 1:48 PM

ಉಕ್ರೇನ್​ನಲ್ಲಿ ರಷ್ಯಾ ಯುದ್ಧ ಸಾರಿ ತಿಂಗಳುಗಳೇ ಕಳೆದುಹೋಗಿದೆ. ಇಷ್ಟು ದಿನಗಳಲ್ಲಿ ಪ್ರಾಣಕಳೆದುಕೊಂಡವರು, ಗಾಯಗೊಂಡವರು, ಅನಾಥರಾದವರು, ದೇಶಬಿಟ್ಟು ಹೋದವರು, ನಿರ್ಗತಿಕರಾದವರು ಅದೆಷ್ಟೋ ಜನ. ಇದೆಲ್ಲದರ ಮಧ್ಯೆ ಉಕ್ರೇನ್​​ನಲ್ಲಿ ಮನಮಿಡಿಯುವ ಘಟನೆಗಳು ನಡೆಯುತ್ತಿವೆ. ಅದರ ವಿಡಿಯೋಗಳು ವೈರಲ್ ಆಗುವ ಜತೆಗೆ, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಸುದ್ದಿಯಾಗುತ್ತಿದೆ. ಅದೇ ರೀತಿ ರಷ್ಯಾ ಸೇನೆ ಮಾರ್ಚ್​​ನಲ್ಲಿ ನಡೆಸಿದ್ದ ನೆಲಬಾಂಬ್​ ಸ್ಫೋಟದಿಂದಾಗಿ ಕಾಲುಗಳನ್ನು ಮತ್ತು ಕೈಯಿಯ ನಾಲ್ಕು ಬೆರಳುಗಳನ್ನು ಕಳೆದುಕೊಂಡಿದ್ದ ನರ್ಸ್​ವೊಬ್ಬರು ಈಗ ತನ್ನ ಪ್ರಿಯಕರನೊಂದಿಗೆ ಮದುವೆಯಾದ ವಿಡಿಯೋ ವೈರಲ್ ಆಗುತ್ತಿದ್ದು, ಇದು ಮನಕಲಕುವಂತಿದೆ. ಕಾಲಿಲ್ಲದ ಯುವತಿಯನ್ನು, ಆಕೆಯ ಪತಿ, ಪುಟ್ಟ ಮಗುವಿನಂತೆ ಎತ್ತಿಕೊಂಡು, ಮುದ್ದಾಡುತ್ತ ನೃತ್ಯ ಮಾಡಿದ ಭಾವನಾತ್ಮಕವಾದ ವಿಡಿಯೋ ಇದು.

ಈ ಜೋಡಿಯ ವಿಡಿಯೋವನ್ನು ಕಾರ್ಯತಂತ್ರದ ಸಂವಹನ ಮತ್ತು ಮಾಹಿತಿ ಭದ್ರತಾ ಕೇಂದ್ರ ಶೇರ್ ಮಾಡಿಕೊಂಡಿದೆ. ಈ ಕೇಂದ್ರ ಉಕ್ರೇನ್​​ನ ಸಂಸ್ಕೃತಿ ಮತ್ತು ಮಾಹಿತಿ ನೀತಿ ಸಚಿವಾಲಯಕ್ಕೆ ಸೇರಿದ ಸಂಸ್ಥೆಯೇ ಆಗಿದ್ದು, ಯುದ್ಧಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಆಗಾಗ ಹಂಚಿಕೊಳ್ಳುತ್ತಲೇ ಇರುತ್ತದೆ. ನರ್ಸ್ ಹೆಸರು ಒಕ್ಸಾನಾ ಎಂದಾಗಿದ್ದು, ಆಕೆಯ ಪತಿ ವಿಕ್ಟರ್​. ಇವರಿಬ್ಬರದ್ದೂ ಆರು ವರ್ಷಗಳ ಪ್ರೀತಿ. ಮದುವೆಯಾಗದೆ ಇದ್ದರೂ ಇಬ್ಬರು ಮಕ್ಕಳಿದ್ದಾರೆ. ಎಲ್​​ವಿವ್​ನ ಆಸ್ಪತ್ರೆಯಲ್ಲಿ ಇಬ್ಬರೂ ವಿವಾಹವಾಗಿದ್ದು, ಮಕ್ಕಳೂ ಇದ್ದರು.

ಇವರ ಮದುವೆಗಾಗಿ ಆಸ್ಪತ್ರೆಯಲ್ಲಿ ಸಕಲ ವ್ಯವಸ್ಥೆಯನ್ನೂ ಮಾಡಲಾಗಿತ್ತು. ವೆಡ್ಡಿಂಗ್ ಕೇಕ್​ ಕೂಡ ತಯಾರಾಗಿತ್ತು. ಎಲ್ಲವನ್ನೂ ಆಸ್ಪತ್ರೆಯ ಸಿಬ್ಬಂದಿಯೇ ಖುದ್ದಾಗಿ ನಿಂತು ಮಾಡಿದ್ದರು. ಮದುಮಗಳು ಬಿಳಿಬಣ್ಣದ ಉಡುಪು ತೊಟ್ಟು, ಉಕ್ರೇನಿಯನ್​​ ಸಂಪ್ರದಾಯದ ಹೂವಿನ ಕಿರೀಟ ತೊಟ್ಟಿದ್ದಳು.  ಮುಂದಿನ ದಿನಗಳಲ್ಲಿ ಒಕ್ಸಾನಾ ಪ್ರೊಸ್ಥೆಟಿಕ್​ ಮೂಲಕ ಕೃತಕ ಕಾಲುಗಳನ್ನು ಪಡೆಯಬಹುದು. ಆದರೆ ಅವರ ಗಾಯ ಸಂಪೂರ್ಣವಾಗಿ ಒಣಗಿದ ಬಳಿಕವಷ್ಟೇ ಈ ಕೃತಕ ಕಾಲುಗಳ ಜೋಡಣೆ ಸಾಧ್ಯ ಎಂದು ಆಸ್ಪತ್ರೆಯಲ್ಲಿ ಹೇಳಲಾಗಿದೆ. ಹೀಗಾಗಿ ಇವರಿಬ್ಬರೂ ಜರ್ಮನಿಗೆ ಹೋಗಲಿದ್ದಾರೆ  ಎಂದೂ ಹೇಳಲಾಗಿದೆ.  ವಿಡಿಯೋ ನೋಡಿದ ನೆಟ್ಟಿಗರು ಈ ಜೋಡಿಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ಮೇ 9ರಿಂದ ಶ್ರೀರಾಮ ಸೇನೆಯಿಂದ ಬೃಹತ್ ಓಂಕಾರ ಅಭಿಯಾನ ನಡೆಯುತ್ತೆ -ಪ್ರಮೋದ್ ಮುತಾಲಿಕ್

Published On - 1:48 pm, Thu, 5 May 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್