AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇ 9ರಿಂದ ಶ್ರೀರಾಮ ಸೇನೆಯಿಂದ ಬೃಹತ್ ಓಂಕಾರ ಅಭಿಯಾನ ನಡೆಯುತ್ತೆ -ಪ್ರಮೋದ್ ಮುತಾಲಿಕ್

ಸರ್ಕಾರ ಮಸೀದಿ ಮಂದಿರ ಚರ್ಚ್ ಗಳಿಗೆ ನೋಟಿಸ್ ಕೊಟ್ಟು ಕಣ್ಣೋರೆಸುವ ಒಂದು ನಾಟಕ ಮಾಡಿದೆ. ನೋಟಿಸ್ ಕೊಟ್ಟ ತಕ್ಷಣ ಎಲ್ಲಿಯೂ ಸುಪ್ರೀಂ ಕೋರ್ಟ್ ಆಜ್ಞೆ ಪಾಲಿಸಿಲ್ಲ. ಮೇ.9ರಿಂದ ರಾಜ್ಯಾದ್ಯಂತ ಒಂದು ಸಾವಿರಕ್ಕೂ ಅಧಿಕ ದೇವಸ್ಥಾನಗಳಲ್ಲಿ ಬೆಳಗ್ಗೆ ಐದು ಗಂಟೆಗೆ ಹನುಮಾನ್ ಚಾಲೀಸ್, ಓಂಕಾರ ನಾಮಸ್ಮರಣೆ ಆರಂಭ ಆಗುತ್ತೆ

ಮೇ 9ರಿಂದ ಶ್ರೀರಾಮ ಸೇನೆಯಿಂದ ಬೃಹತ್ ಓಂಕಾರ ಅಭಿಯಾನ ನಡೆಯುತ್ತೆ -ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್
Follow us
TV9 Web
| Updated By: ಆಯೇಷಾ ಬಾನು

Updated on:May 05, 2022 | 1:14 PM

ಬೆಳಗಾವಿ: ಮಸೀದಿಗಳಲ್ಲಿ ಆಜಾನ್ ನಿಲ್ಲಿಸಲು ನೀಡಿದ ಗಡುವು ಅಂತ್ಯ ಹಿನ್ನೆಲೆಯಲ್ಲಿ ಮೇ 9ರಿಂದ ಶ್ರೀರಾಮ ಸೇನೆಯಿಂದ ಬೃಹತ್ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ ಎಂದು ಬೆಳಗಾವಿ ನಗರದಲ್ಲಿ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. 1 ಸಾವಿರಕ್ಕೂ ಅಧಿಕ ದೇವಸ್ಥಾನಗಳಲ್ಲಿ ಓಂಕಾರ ನಾಮಸ್ಮರಣೆ ಮಾಡಲಾಗುವುದು. ಬೆಳಗ್ಗೆ 5 ಗಂಟೆಗೆ ಪೂಜೆ ಸಲ್ಲಿಸಿ ಸುಪ್ರಭಾತ ಭಜನೆ ಮಾಡುತ್ತೇವೆ ಎಂದಿದ್ದಾರೆ.

ಸರ್ಕಾರ ಮಸೀದಿ ಮಂದಿರ ಚರ್ಚ್ ಗಳಿಗೆ ನೋಟಿಸ್ ಕೊಟ್ಟು ಕಣ್ಣೋರೆಸುವ ಒಂದು ನಾಟಕ ಮಾಡಿದೆ. ನೋಟಿಸ್ ಕೊಟ್ಟ ತಕ್ಷಣ ಎಲ್ಲಿಯೂ ಸುಪ್ರೀಂ ಕೋರ್ಟ್ ಆಜ್ಞೆ ಪಾಲಿಸಿಲ್ಲ. ಮೇ.9ರಿಂದ ರಾಜ್ಯಾದ್ಯಂತ ಒಂದು ಸಾವಿರಕ್ಕೂ ಅಧಿಕ ದೇವಸ್ಥಾನಗಳಲ್ಲಿ ಬೆಳಗ್ಗೆ ಐದು ಗಂಟೆಗೆ ಹನುಮಾನ್ ಚಾಲೀಸ್, ಓಂಕಾರ ನಾಮಸ್ಮರಣೆ ಆರಂಭ ಆಗುತ್ತೆ. ಸರ್ಕಾರಕ್ಕೆ, ಮುಸ್ಲಿಂ ಸಮುದಾಯಕ್ಕೆ ಈ ಮೂಲಕ ಎಚ್ಚರಿಕೆ ಕೊಡ್ತೀವಿ. ದೇವಸ್ಥಾನ ಕಮೀಟಿಯವರಿಗೆ ಸಮಯ ಹೇಳಿ ಸಹಕಾರ ಕೊಡಿ ಅಂತಾ ವಿನಂತಿ ಮಾಡುತ್ತೇವೆ. ಐದು ಗಂಟೆಗೆ ಆಜಾನ್ ಆರಂಭಕ್ಕೂ ಮೊದಲೇ ಸುಪ್ರಭಾತ ಪ್ರಾರಂಭವಾಗಬೇಕು. ಸರ್ಕಾರ ಆಜಾನ್ ನಿಲ್ಲಿಸಲು ಹೆದರುತ್ತಿದೆ. ಬಿಜೆಪಿ ಸರ್ಕಾರದವರಿಗೆ ಒಂದೇ ಒಂದು ವೋಟ್ ಮುಸ್ಲಿಮರದ್ದು ಸಿಗುವುದಿಲ್ಲ.

ನೀವು ಬುರ್ಖಾ ಹಾಕಿಕೊಂಡು ಹೋದ್ರೂ ಮುಸ್ಲಿಮರು ನಿಮಗೆ ವೋಟ್ ಹಾಕಲ್ಲಾ. ಯೋಗಿ ಆದಿತ್ಯನಾಥ್‌ ಅರವತ್ತು ಸಾವಿರಕ್ಕೂ ಅಧಿಕ ಮೈಕ್ ಗಳನ್ನ ಸೀಜ್ ಮಾಡಿದರು. ಆ ಧೈರ್ಯ ನಿಮಗೆ ಯಾಕೆ ಬರ್ತಿಲ್ಲ, ನು ದಾಡಿಯಾಗಿದೆ ನಿಮಗೆ. ಯಾಕೆ ಹೆದರುತ್ತಿದ್ದೀರಿ ನೀವು, ಸುಪ್ರೀಂ ಕೋರ್ಟ್ ಆರ್ಡರ್ ಇದೆ ಪಾಲಿಸಬೇಕಷ್ಟೇ. ನಿಮ್ಮ ಹೆದರಿಕೆ ಪರಿಣಾಮದಿಂದ ಮುಸ್ಲಿಮರ ಸೊಕ್ಕಿನಿಂದ ವರ್ತನೆ ಮಾಡ್ತಿದ್ದಾರೆ. ಸರ್ಕಾರ ಮತ್ತು ಮುಸ್ಲಿಂರು ಇಬ್ಬರ ವಿರುದ್ಧವೂ ನಮ್ಮ ಹೋರಾಟವಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಬೆಳಗಾವಿ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಈ ಅಭಿಯಾನದಲ್ಲಿ ನಾನು ಒಬ್ಬನೇ ಇಲ್ಲ ಲಕ್ಷಾಂತರ ಶ್ರೀರಾಮಸೇನೆ ಕಾರ್ಯಕರ್ತರಿದ್ದಾರೆ. ಕೋಟ್ಯಾಂತರ ಹಿಂದೂ ಕಾರ್ಯಕರ್ತರು ಹೋರಾಟ ಮಾಡಲು ಆಗಲ್ಲ. ಅವರ ಆಕ್ರೋಶ ಧ್ವನಿಯಾಗಿ ನಾನು ಹೋರಾಟ ಮಾಡುತ್ತಿದ್ದೇನೆ. ಮೇ.9ರಂದು ಪ್ರತಿಯೊಂದು ದೇವಸ್ಥಾನದಲ್ಲಿ ನಮ್ಮ ಕಾರ್ಯಕರ್ತರು ಇರ್ತಾರೆ. ಐದು ಗಂಟೆಗೆ ಮೊದಲು ಎದ್ದು ಪೂಜೆ ಸಲ್ಲಿಸಿ ಸುಪ್ರಭಾತ ಭಜನೆಯಲ್ಲಿ ಪಾಲ್ಗೊಳ್ಳುತ್ತಾರೆ. ನಾನು ಕೂಡ ಅಂದು ಮೈಸೂರಿನ ಒಂದು ದೇವಸ್ಥಾನದಲ್ಲಿ ಭಾಗಿಯಾಗ್ತಿದ್ದೇನೆ. ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ಹೋರಾಟ ಮಾಡ್ತಿರುವುದಕ್ಕೆ ಶ್ರೀರಾಮಸೇನೆ ಬೆಂಬಲ ಇದೆ. ಬಾಳಾಠಾಕ್ರೆ ಅಂದು ಮುಸ್ಲಿಮರು ರಸ್ತೆ ಮೇಲೆ ನಮಾಜ್ ಮಾಡುವುದರ ವಿರುದ್ಧ ಧ್ವನಿ ಎತ್ತಿದ್ದರು. ಉದ್ಧವ್ ಠಾಕ್ರೆ ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ತಿಲ್ಲ. ಪ್ರತಿಭಟನಾಕಾರರ ಮೇಲೆ ಕ್ರಮ ಕೈಗೊಳ್ಳುತ್ತಿರುವುದಕ್ಕೆ ಉದ್ಧವ್ ಠಾಕ್ರೆಗೆ ಜನ ಪಾಠ ಕಲಿಸುತ್ತಾರೆ.

ಆಜಾನ್, ಪ್ರಾರ್ಥನೆಗೆ ನಮ್ಮ ವಿರೋಧವಿಲ್ಲ, ಶಬ್ದಕ್ಕೆ ನಮ್ಮ ವಿರೋಧ ಇದೆ. ಶಬ್ದ ಮಾಲಿನ್ಯದಿಂದ ರೋಗಿಗಳಿಗೆ, ವಿದ್ಯಾರ್ಥಿಗಳಿಗೆ, ಸರ್ಕಾರಿ ಕಚೇರಿಗಳಿಗೆ ತೊಂದರೆ ಆಗ್ತಿದೆ. ಇವೆಲ್ಲದರ ವಿರುದ್ಧ ನಮ್ಮ ಹೋರಾಟ ಇದೆ, ಆಜಾನ್ ವಿರುದ್ಧ ಇಲ್ಲಾ. ಇದರ ವಿರುದ್ಧ ಮನವಿ ಕೊಟ್ಟಾಗಿದೆ, ಧರಣಿ ಮಾಡಿಯೂ ಆಗಿದೆ. ಮುಸ್ಲಿಮರ ಮನಸ್ಥಿತಿಯನ್ನ ಬದಲಾವಣೆ ಮಾಡುವವರೆಗೂ ನಮ್ಮ ಹೋರಾಟ ಇರುತ್ತೆ. ಮೇ.9ರಿಂದ ನಮ್ಮ ಅಭಿಯಾನ ಪ್ರಾರಂಭವಾಗುತ್ತೆ. ಎಲ್ಲಿ ವರೆಗೂ ಬೆಳಗ್ಗೆ ಐದು ಗಂಟೆ ಮೈಕ್ ಶಬ್ದ ಹಾಕುವುದನ್ನ ನಿಲ್ಲಿಸುವುದಿಲ್ಲವೋ ಅಲ್ಲಿ ವರೆಗೂ ನಮ್ಮ ಹೋರಾಟ ಇರುತ್ತೆ ಎಂದು ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

Published On - 1:14 pm, Thu, 5 May 22