ಫೇಸ್​ಬುಕ್​ನಲ್ಲಿ ವಿವಾದಾತ್ಮಕ ನಕ್ಷೆ, ವಿಡಿಯೋ ಪೋಸ್ಟ್ ಮಾಡಿದ ಹಿನ್ನೆಲೆ MES ಮುಖಂಡ ಶುಭಂ ಶೆಳಕೆ ವಿರುದ್ಧ ಎಫ್ಐಆರ್ ದಾಖಲು

ಕರ್ನಾಟಕದ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಿಸಿದ ರೀತಿಯ‌ ಗ್ರಾಫಿಕ್ ವಿಡಿಯೋ, ಫೋಟೋಗಳನ್ನು ಎಂಇಎಸ್ ಮುಖಂಡ ಶುಭಂ ಶೆಳಕೆ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಸಂಪೂರ್ಣ ಸಂಯುಕ್ತ ಮಹಾರಾಷ್ಟ್ರ ಶೀರ್ಷಿಕೆಯಡಿ ವಿವಾದಿತ ನಕ್ಷೆಯ ಪೋಸ್ಟ್ ಮಾಡಲಾಗಿದೆ.

ಫೇಸ್​ಬುಕ್​ನಲ್ಲಿ ವಿವಾದಾತ್ಮಕ ನಕ್ಷೆ, ವಿಡಿಯೋ ಪೋಸ್ಟ್ ಮಾಡಿದ ಹಿನ್ನೆಲೆ MES ಮುಖಂಡ ಶುಭಂ ಶೆಳಕೆ ವಿರುದ್ಧ ಎಫ್ಐಆರ್ ದಾಖಲು
MES ಮುಖಂಡ ಶುಭಂ ಶೆಳಕೆ
Follow us
TV9 Web
| Updated By: ಆಯೇಷಾ ಬಾನು

Updated on: May 06, 2022 | 10:24 AM

ಬೆಳಗಾವಿ: ಕರ್ನಾಟಕ ಗಡಿ ಭಾಗ ಮಹಾರಾಷ್ಟ್ರಕ್ಕೆ ಸೇರಿಸಿ ವಿವಾದಿತ ನಕ್ಷೆ ಪೋಸ್ಟ್ ಹಿನ್ನೆಲೆ MES ಮುಖಂಡ ಶುಭಂ ಶೆಳಕೆ ವಿರುದ್ಧ ಎಫ್ಐಆರ್ ದಾಖಲಾಗಿದೆ. MES ಮುಖಂಡ ಶುಭಂ ಶೆಳಕೆ ಫೇಸ್ಬುಕ್ನಲ್ಲಿ ವಿವಾದಾತ್ಮಕ ನಕ್ಷೆ ಮತ್ತು ವಿವಾದಾತ್ಮಕ ವಿಡಿಯೋ ಪೋಸ್ಟ್ ಮಾಡಿ ಶೇರ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತ ವಿನಾಯಕ ಬೋವಿ ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ದೂರು ನೀಡಿದ್ದು ದೂರಿನ ಮೇರೆಗೆ FIR ದಾಖಲಾಗಿದೆ. ಪೋಸ್ಟ್ ಡಿಲೀಟ್ ಮಾಡುವಂತೆ ಠಾಣೆಗೆ ಕರೆಸಿ ವಾರ್ನಿಂಗ್ ಮಾಡಲಾಗಿದೆ. ಆದ್ರೆ ಪೊಲೀಸರು ಎಚ್ಚರಿಕೆ ನೀಡಿದ್ದರೂ ಶುಭಂ ಶೆಳಕೆ ಉದ್ಧಟತನ ಮೆರೆದಿದ್ದಾರೆ.

ಐಟಿ ಆ್ಯಕ್ಟ್ 2000(U/s-66), ಐಪಿಸಿ ಸೆಕ್ಷನ್ 1860(U/s-153B)ರಡಿ ಕೇಸ್ ದಾಖಲಿಸಲಾಗಿದೆ. ಶುಭಂ ಶೆಳಕೆ ವಿವಾದಿತ ಪೋಸ್ಟ್ ಹಾಕುವ ಮೂಲಕ ಗಡಿ ಖ್ಯಾತೆ ತೆಗೆದಿದ್ದಾರೆ. ಕರ್ನಾಟಕದ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಿಸಿದ ರೀತಿಯ‌ ಗ್ರಾಫಿಕ್ ವಿಡಿಯೋ, ಫೋಟೋಗಳನ್ನು ಎಂಇಎಸ್ ಮುಖಂಡ ಶುಭಂ ಶೆಳಕೆ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಸಂಪೂರ್ಣ ಸಂಯುಕ್ತ ಮಹಾರಾಷ್ಟ್ರ ಶೀರ್ಷಿಕೆಯಡಿ ವಿವಾದಿತ ನಕ್ಷೆಯ ಪೋಸ್ಟ್ ಮಾಡಲಾಗಿದೆ. ಸಂಯುಕ್ತ ಮಹಾರಾಷ್ಟ್ರಕ್ಕೆ ಬೆಳಗಾವಿ ರಕ್ತ ಹೋರಾಟದ ಮುನ್ನುಡಿ ಬರೆದಿದೆ. ಬೆಳಗಾವಿ ಸೇರಿ ಗಡಿ ಭಾಗದ ಮರಾಠಿಗರು ನ್ಯಾಯಕ್ಕಾಗಿ ಕಾಯುತ್ತಿದ್ದೇವೆ ಎಂದು ವಿಡಿಯೋ ಜೊತೆಗೆ ಪೋಸ್ಟ್ ಹಾಕಲಾಗಿದೆ. ಹೀಗಾಗಿ ಎಫ್ಐಆರ್ ದಾಖಲಾಗಿದ್ದು ಪೋಸ್ಟ್ ಡಿಲೀಟ್ ಮಾಡುವಂತೆ ಠಾಣೆಗೆ ಕರೆಸಿ ಪೊಲೀಸರು ಶುಭಂ ಶೆಳಕೆಗೆ ವಾರ್ನಿಂಗ್ ಮಾಡಿದ್ದಾರೆ. ಆದ್ರೆ ಪೊಲೀಸರು ಎಚ್ಚರಿಕೆ ನೀಡಿದ್ದರೂ ಪೋಸ್ಟ್ ಡಿಲೀಟ್ ಮಾಡದೇ ಉದ್ಧಟತನ ಮೆರೆದಿದ್ದಾರೆ.

ಬೆಳಗಾವಿ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ