ನಟ ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ (Rakshit Shetty) ಅವರು ಅಭಿನಯಿಸಿರುವ ‘777 ಚಾರ್ಲಿ’ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡುವ ರೀತಿಯಲ್ಲಿ ಈಗ ಟ್ರೇಲರ್ ರಿಲೀಸ್ ಆಗಿದೆ. ಪರಭಾಷೆಯ ಹಲವು ಸ್ಟಾರ್ ನಟ-ನಟಿಯರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ‘777 ಚಾರ್ಲಿ’ ಸಿನಿಮಾದ ಟ್ರೇಲರ್ (777 Charlie Movie Trailer) ಶೇರ್ ಮಾಡಿಕೊಳ್ಳುವ ಮೂಲಕ ರಕ್ಷಿತ್ ಶೆಟ್ಟಿ ಮತ್ತು ಅವರ ತಂಡಕ್ಕೆ ಬೆಂಬಲ ನೀಡಿದ್ದಾರೆ. ಈ ಚಿತ್ರಕ್ಕೆ ಕಿರಣ್ ರಾಜ್ ನಿರ್ದೇಶನ ಮಾಡಿದ್ದು, ಟ್ರೇಲರ್ ಗಮನ ಸೆಳೆಯುತ್ತಿದೆ. ಶ್ವಾನ ಮತ್ತು ಮನುಷ್ಯನ ನಡುವಿನ ಬಾಂಧವ್ಯದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ ಎಂಬುದು ಈಗಾಗಲೇ ತಿಳಿದಿರುವ ವಿಚಾರ. ಆದರೆ ಈ ಕಥೆ ಸಖತ್ ಎಮೋಷನಲ್ ಆಗಿರಲಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸುಳಿವು ಸಿಕ್ಕಿದೆ. ರಕ್ಷಿತ್ ಶೆಟ್ಟಿ ಜೊತೆ ಸಂಗೀತಾ ಶೃಂಗೇರಿ, ರಾಜ್ ಬಿ. ಶೆಟ್ಟಿ, ದಾನಿಶ್ ಸೇಠ್ ಮುಂತಾದವರು ‘777 ಚಾರ್ಲಿ’ (777 Charlie) ಚಿತ್ರದಲ್ಲಿ ನಟಿಸಿದ್ದಾರೆ.
Our years of journey is pieced into a short snippet for you. This is a prelude to all that June 10th is going to bring, we hope you receive it with love ❤️#777CharlieTrailer
ಇದನ್ನೂ ಓದಿ
‘777 ಚಾರ್ಲಿ’ ಟ್ರೇಲರ್ಗಾಗಿ ರಕ್ಷಿತ್ ಶೆಟ್ಟಿಗೆ ಸಾಯಿ ಪಲ್ಲವಿ ಸಾಥ್; ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾದ ‘ಪ್ರೇಮಂ’ ಬ್ಯೂಟಿ
ಹಿಂದಿಯಲ್ಲಿ ‘777 ಚಾರ್ಲಿ’ ಚಿತ್ರಕ್ಕೆ ಸಿಕ್ತು ದೊಡ್ಡ ಬೆಂಬಲ; ರಕ್ಷಿತ್ ಫ್ಯಾನ್ಸ್ಗೆ ಗುಡ್ ನ್ಯೂಸ್
‘777 ಚಾರ್ಲಿ’ ಚಿತ್ರ ನೋಡಿ ಮೊದಲ ವಿಮರ್ಶೆ ತಿಳಿಸಿದ ರಾಣಾ ದಗ್ಗುಬಾಟಿ; ಹೇಗಿದೆ ರಕ್ಷಿತ್ ಶೆಟ್ಟಿ ಸಿನಿಮಾ?
ಜೂ.10ರಂದು ರಿಲೀಸ್ ಆಗಲಿದೆ ‘777 ಚಾರ್ಲಿ’; ಸಿಹಿ ಸುದ್ದಿ ನೀಡಿದ ರಕ್ಷಿತ್ ಶೆಟ್ಟಿ ಆ್ಯಂಡ್ ಟೀಮ್
ನಾಯಿ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದೆ. ಆ ಶ್ವಾನದ ಮೂಡ್ಗೆ ತಕ್ಕಂತೆ ಚಿತ್ರೀಕರಣವನ್ನು ಮಾಡಬೇಕಿತ್ತು. ಆದ್ದರಿಂದ ಈ ಚಿತ್ರದ ಶೂಟಿಂಗ್ಗೆ ಹೆಚ್ಚು ಸಮಯ ಹಿಡಿದಿದೆ. ಅದರ ನಡುವೆ ಕೊರೊನಾ ಲಾಕ್ಡೌನ್ ಕೂಡ ಬಂದಿದ್ದರಿಂದ ಇನ್ನಷ್ಟ ತಡವಾಗಿತ್ತು. ಈಗ ಅಂತೂ ಈ ಸಿನಿಮಾ ರಿಲೀಸ್ಗೆ ಸಿದ್ಧವಾಗಿದೆ. ಜೂನ್ 10ರಂದು ‘777 ಚಾರ್ಲಿ’ ಬಿಡುಗಡೆ ಆಗಲಿದೆ.
‘777 ಚಾರ್ಲಿ’ ಚಿತ್ರದ ಟ್ರೇಲರ್ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಅಭಿಮಾನಿಗಳು ಪಾಸಿಟಿವ್ ಕಮೆಂಟ್ ಮಾಡುತ್ತಿದ್ದಾರೆ. ಫ್ಯಾನ್ಸ್ ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ತೆಲುಗಿನಲ್ಲಿ ಈ ಟ್ರೇಲರ್ ಅನ್ನು ಖ್ಯಾತ ನಟಿ ಸಾಯಿ ಪಲ್ಲವಿ ಅವರು ರಿಲೀಸ್ ಮಾಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಟ್ರೇಲರ್ ಶೇರ್ ಮಾಡಿಕೊಂಡು, ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
This is so heart warming ❤️ My heartfelt wishes to @Kiranraj61 , @rakshitshetty and the one tugging on my heartstrings, Charlie❤️
Pet lovers, you’ll need tissues?
‘ಇದು ತುಂಬ ಹೃದಯಸ್ಪರ್ಶಿ ಆಗಿದೆ. ನಿರ್ದೇಶಕ ಕಿರಣ್ ರಾಜ್, ನಟ ರಕ್ಷಿತ್ ಶೆಟ್ಟಿ ಮತ್ತು ನನ್ನ ಹೃದಯದ ತಂತಿ ಮೀಟುತ್ತಿರುವ ಚಾರ್ಲಿಗೆ ಶುಭ ಹಾರೈಕೆಗಳು. ಪ್ರಾಣಿ ಪ್ರಿಯೆರೇ, ನಿಮಗೆಲ್ಲ ಟಿಶ್ಯೂ ಅಗತ್ಯವಿದೆ’ ಎಂದು ಸಾಯಿ ಪಲ್ಲವಿ ಟ್ವೀಟ್ ಮಾಡಿದ್ದಾರೆ. ಆ ಮೂಲಕ ‘777 ಚಾರ್ಲಿ’ ಚಿತ್ರ ಸಖತ್ ಎಮೋಷನಲ್ ಆಗಿರಲಿದೆ ಎಂದು ಅವರು ಕೂಡ ಒತ್ತಿ ಹೇಳಿದ್ದಾರೆ.