‘777 ಚಾರ್ಲಿ’ ಚಿತ್ರ ನೋಡಿ ಮೊದಲ ವಿಮರ್ಶೆ ತಿಳಿಸಿದ ರಾಣಾ ದಗ್ಗುಬಾಟಿ; ಹೇಗಿದೆ ರಕ್ಷಿತ್​ ಶೆಟ್ಟಿ ಸಿನಿಮಾ?

Rana Daggubati 777 Charlie: ರಕ್ಷಿತ್​ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾವನ್ನು ನೋಡಿ ರಾಣಾ ದಗ್ಗುಬಾಟಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಹೇಗಿದೆ ಎಂದು ಅವರು ತಿಳಿಸಿದ್ದಾರೆ.

‘777 ಚಾರ್ಲಿ’ ಚಿತ್ರ ನೋಡಿ ಮೊದಲ ವಿಮರ್ಶೆ ತಿಳಿಸಿದ ರಾಣಾ ದಗ್ಗುಬಾಟಿ; ಹೇಗಿದೆ ರಕ್ಷಿತ್​ ಶೆಟ್ಟಿ ಸಿನಿಮಾ?
ರಾಣಾ ದಗ್ಗುಬಾಟಿ, 777 ಚಾರ್ಲಿ
Follow us
TV9 Web
| Updated By: ಮದನ್​ ಕುಮಾರ್​

Updated on: May 01, 2022 | 2:01 PM

ದಕ್ಷಿಣ ಭಾರತದ ಸಿನಿಮಾಗಳು ಈಗ ಸಖತ್​ ಸೌಂಡು ಮಾಡುತ್ತಿವೆ. ಹಾಗಂತ ಎಲ್ಲವೂ ಆ್ಯಕ್ಷನ್​ ಸಿನಿಮಾಗಳೇ ಆಗಿರಬೇಕು ಎಂದೇನಿಲ್ಲ. ಭಿನ್ನ ಕಾನ್ಸೆಪ್ಟ್​ ಇರುವ ಅನೇಕ ಚಿತ್ರಗಳು ಕೂಡ ಪ್ರೇಕ್ಷಕರು ಮನ ಗೆಲ್ಲುತ್ತವೆ. ನಟ ರಕ್ಷಿತ್​ ಶೆಟ್ಟಿ (Rakshit Shetty) ಅವರು ಪ್ರತಿ ಸಿನಿಮಾದಲ್ಲಿಯೂ ಒಂದಿಲ್ಲೊಂದು ಹೊಸ ಪ್ರಯತ್ನ ಮಾಡುತ್ತಾರೆ. ಅವರು ನಟಿಸಿರುವ ‘777 ಚಾರ್ಲಿ’ ಚಿತ್ರ ಅನೇಕ ಕಾರಣಗಳಿಂದ ಹೈಪ್​ ಸೃಷ್ಟಿ ಮಾಡಿದೆ. ಕಿರಣ್​ ರಾಜ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ನೋಬಿನ್​ ಪೌಲ್​ ಅವರ ಸಂಗೀತ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ಜೂನ್​ 10ರಂದು ‘777 ಚಾರ್ಲಿ’  (777 Charlie)ಸಿನಿಮಾ ಬಿಡುಗಡೆ ಆಗಲಿದೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ಬಿಡುಗಡೆ ಮಾಡಲಾಗುತ್ತಿದೆ. ವಿಶೇಷ ಏನೆಂದರೆ ತೆಲುಗಿನಲ್ಲಿ ಈ ಸಿನಿಮಾವನ್ನು ಖ್ಯಾತ ನಟ ರಾಣಾ ದಗ್ಗುಬಾಟಿ (Rana Daggubati) ಅವರು ಬಿಡುಗಡೆ ಮಾಡಲಿದ್ದಾರೆ. ‘777 ಚಾರ್ಲಿ’ ಸಿನಿಮಾದ ತೆಲುಗು ವರ್ಷನ್​ ವಿತರಣೆಯ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದಾರೆ. ಆ ಮೂಲಕ ರಕ್ಷಿತ್​ ಶೆಟ್ಟಿ ಮತ್ತು ತಂಡಕ್ಕೆ ಇನ್ನಷ್ಟು ಬಲ ಬಂದಂತಾಗಿದೆ.

ಈಗಾಗಲೇ ಬಿಡುಗಡೆ ಆಗಿರುವ ಟೀಸರ್​, ಪೋಸ್ಟರ್​ ಮತ್ತು ಸಾಂಗ್​ ಮೂಲಕ ‘777 ಚಾರ್ಲಿ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ರಕ್ಷಿತ್​ ಶೆಟ್ಟಿ ಅವರ ವೃತ್ತಿ ಜೀವನದಲ್ಲಿ ಇದು ಭಿನ್ನ ಸಿನಿಮಾ ಆಗಿರಲಿದೆ ಎಂಬ ಭರವಸೆ ಮೂಡಿದೆ. ನಾಯಿ ಮತ್ತು ಮನುಷ್ಯನ ನಡುವಿನ ಸಂಬಂಧದ ಕಥೆಯನ್ನು ಈ ಚಿತ್ರ ಹೇಳಲಿದೆ. ಸಿನಿಮಾವನ್ನು ಕಣ್ತುಂಬಿಕೊಳ್ಳಲು ರಕ್ಷಿತ್​ ಶೆಟ್ಟಿ ಫ್ಯಾನ್ಸ್​ ಕಾಯುತ್ತಿದ್ದಾರೆ. ಅಷ್ಟರಲ್ಲಾಗಲೇ ರಾಣಾ ದಗ್ಗುಬಾಟಿ ಅವರಿಂದ ಈ ಸಿನಿಮಾಗೆ ಉತ್ತಮ ವಿಮರ್ಶೆ ಸಿಕ್ಕಿದೆ.

ಹೌದು, ರಾಣಾ ದಗ್ಗುಬಾಟಿ ಅವರು ‘777 ಚಾರ್ಲಿ’ ಸಿನಿಮಾವನ್ನು ನೋಡಿದ್ದಾರೆ. ಅವರಿಗೆ ಈ ಚಿತ್ರ ಸಖತ್​ ಇಷ್ಟ ಆಗಿದೆ. ಹಾಗಾಗಿ ವಿತರಣೆ ಮಾಡಲು ಮುಂದೆ ಬಂದಿದ್ದಾರೆ. ಈ ವಿಷಯವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವುದರ ಜೊತೆಗೆ ಸಿನಿಮಾ ಹೇಗಿದೆ ಎಂಬುದನ್ನು ಕೂಡ ಅವರು ತಿಳಿಸಿದ್ದಾರೆ. ‘777 ಚಾರ್ಲಿ ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು. ಎಂಥ ಅದ್ಭುತ ಟ್ರೀಟ್​ ಇದು. ಒಟ್ಟಾರೆ ಹೊಸತನದಿಂದ ಕೂಡಿದೆ. ಈ ಸಿನಿಮಾವನ್ನು ಪ್ರಸ್ತುತ ಪಡಿಸುತ್ತಿದ್ದೇನೆ’ ಎಂದು ರಾಣಾ ದಗ್ಗುಬಾಟಿ ಟ್ವೀಟ್​ ಮಾಡಿದ್ದಾರೆ.

ರಾಣಾ ದಗ್ಗುಬಾಟಿ ಜೊತೆ ಕೈ ಜೋಡಿಸುತ್ತಿರುವುದಕ್ಕೆ ರಕ್ಷಿತ್​ ಶೆಟ್ಟಿ ಖುಷಿ ಆಗಿದ್ದಾರೆ. ‘ಈ ಪಯಣದಲ್ಲಿ ನಾವು ಮುಂದುವರಿಯುತ್ತಿರುವಾಗ ಒಂದು ಸ್ಪಷ್ಟ ಉದ್ದೇಶವೇ ನಮ್ಮನ್ನು ಒಂದಾಗಿಸಿದೆ. 777 ಚಾರ್ಲಿ ಸಿನಿಮಾದ ತೆಲುಗು ವಿತರಣೆಗಾಗಿ ರಾಣಾ ದಗ್ಗುಬಾಟಿ ಮತ್ತು ಸುರೇಶ್​ ಪ್ರೊಡಕ್ಷನ್ಸ್​ ಜೊತೆ ಕೈ ಜೋಡಿಸುತ್ತಿರುವುದು ಖುಷಿಯ ವಿಚಾರ’ ಎಂದು ರಕ್ಷಿತ್​ ಶೆಟ್ಟಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಈ ಸಿನಿಮಾ ಬಿಡುಗಡೆಗೂ ಮನ್ನವೇ ಉತ್ತಮ ಬಿಸ್ನೆಸ್​ ಮಾಡಿದೆ. ಚಿತ್ರದ ಕಿರುತೆರೆ ಮತ್ತು ಒಟಿಟಿ ಪ್ರಸಾರ ಹಕ್ಕುಗಳು ‘ಕಲರ್ಸ್​ ಕನ್ನಡ’ ಹಾಗೂ ‘ವೂಟ್​’ ಪಾಲಾಗಿದೆ. ಈ ಸಿನಿಮಾದಲ್ಲಿ ಸಂಗೀತಾ ಶೃಂಗೇರಿ, ದಾನಿಶ್​ ಸೇಠ್​, ರಾಜ್​ ಬಿ. ಶೆಟ್ಟಿ ಮುಂತಾದವರು ಕೂಡ ಅಭಿನಯಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ:

ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ಶ್ರುತಿ ಹರಿಹರನ್​; ಸ್ಟ್ರಾಬೆರಿ ಸಿನಿಮಾಗೆ ರಕ್ಷಿತ್​ ಶೆಟ್ಟಿ ನಿರ್ಮಾಣ

ಉಡುಪಿಯಲ್ಲಿ ರಕ್ಷಿತ್​ ಶೆಟ್ಟಿ ಹುಲಿಕುಣಿತ; ಲೋಬಾನ ಹಾಕುವ ಸಂಪ್ರದಾಯದಲ್ಲಿ ‘ಸಿಂಪಲ್ ಸ್ಟಾರ್’ ಭಾಗಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ