17ನೇ ದಿನವೂ ಮುಂದುವರಿದ ‘ಕೆಜಿಎಫ್ 2’ ಅಬ್ಬರ; ಯಶ್ ಎದುರು ಮಂಕಾದ ಅಜಯ್ ದೇವಗನ್, ಟೈಗರ್ ಸಿನಿಮಾ
‘ಕೆಜಿಎಫ್ 2’ ಚಿತ್ರದ 17ನೇ ದಿನದ ಕಲೆಕ್ಷನ್ ರಿಪೋರ್ಟ್ ಹೊರಬಿದ್ದಿದೆ. ಅಜಯ್ ದೇವಗನ್ ನಟನೆಯ ‘ರನ್ವೇ 34’ ಹಾಗೂ ‘ಹೀರೋಪಂತಿ 2’ ಚಿತ್ರವನ್ನು ‘ಕೆಜಿಎಫ್ 2’ ಕಲೆಕ್ಷನ್ ಹಿಂದಿಕ್ಕಿದೆ.
‘ಕೆಜಿಎಫ್: ಚಾಪ್ಟರ್ 2’ ಸಿನಿಮಾ (KGF Chapter 2) ಬಾಲಿವುಡ್ನಲ್ಲಿ ಸೃಷ್ಟಿಸಿರುವ ಅಲೆ ತುಂಬಾನೇ ದೊಡ್ಡದು. ಈ ಸಿನಿಮಾದ ಕಲೆಕ್ಷನ್ಗೆ ಸರಿಸಾಟಿಯಾಗಿ ನಿಲ್ಲೋಕೆ ಹೊಸ ಸಿನಿಮಾಗಳಿಂದ ಸಾಧ್ಯವಾಗುತ್ತಿಲ್ಲ. ಈಗಾಗಲೇ ಹಿಂದಿ ಬಾಕ್ಸ್ ಆಫೀಸ್ನಲ್ಲಿ 360 ಕೋಟಿ ರೂಪಾಯಿ ಗಳಿಸಿರುವ ಈ ಸಿನಿಮಾ 400 ಕೋಟಿ ರೂಪಾಯಿಯತ್ತ ಧಾಪುಗಾಲು ಹಾಕುತ್ತಿದೆ. ಶೀಘ್ರವೇ ಈ ಚಿತ್ರ ‘ದಂಗಲ್’ ಕಲೆಕ್ಷನ್ (Dangal Movie Collection) ಹಿಂದಿಕ್ಕುವ ಸಾಧ್ಯತೆ ಇದೆ. ಈ ಮಧ್ಯೆ, ಈ ವಾರ ತೆರೆಗೆ ಬಂದ ಹೊಸ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ದುಡ್ಡು ಮಾಡಲು ಒದ್ದಾಡುತ್ತಿರುವ ಈ ಸಂದರ್ಭದಲ್ಲಿ ‘ಕೆಜಿಎಫ್: 2’ ಒಳ್ಳೆಯ ಗಳಿಕೆ ಮಾಡುತ್ತಿದೆ.
‘ಕೆಜಿಎಫ್ 2’ ತೆರೆಗೆ ಬಂದು ಇಂದಿಗೆ (ಮೇ 1) 18 ದಿನ ಕಳೆದಿದೆ. ಯಶ್ ಸಿನಿಮಾ ಅಬ್ಬರ 18ನೇ ದಿನವೂ ಜೋರಾಗಿಯೇ ಇದೆ. ಸದ್ಯ, 17ನೇ ದಿನದ ಕಲೆಕ್ಷನ್ ರಿಪೋರ್ಟ್ ಹೊರಬಿದ್ದಿದೆ. ಅಜಯ್ ದೇವಗನ್ ನಟನೆಯ ‘ರನ್ವೇ 34’ ಹಾಗೂ ‘ಹೀರೋಪಂತಿ 2’ ಚಿತ್ರವನ್ನು ‘ಕೆಜಿಎಫ್ 2’ ಕಲೆಕ್ಷನ್ ಹಿಂದಿಕ್ಕಿದೆ. ಈ ಮೂಲಕ ಯಶ್ ಸಿನಿಮಾ ಮೇಲುಗೈ ಸಾಧಿಸಿದೆ.
‘ರನ್ವೇ 34’ ಹಾಗೂ ‘ಹೀರೋಪಂತಿ 2’ ಚಿತ್ರಕ್ಕೆ ಏಪ್ರಿಲ್ 30 ಎರಡನೇ ದಿನ. ಆದರೆ, ಯಶ್ ಚಿತ್ರಕ್ಕೆ ಇದು 17ನೇ ದಿನ. ಹಾಗಿದ್ದರೂ ಎರಡೂ ಚಿತ್ರಗಳ ಕಲೆಕ್ಷನ್ಅನ್ನು ಕನ್ನಡದ ಸಿನಿಮಾ ಹಿಂದಿಕ್ಕಿದೆ. ‘ಕೆಜಿಎಫ್ 2’ ಸಿನಿಮಾ ಹಿಂದಿ ವರ್ಷನ್ನಿಂದ ಶನಿವಾರ 7.25 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರದ ಗಳಿಕೆ 360.31 ಕೋಟಿ ರೂಪಾಯಿ ಆಗಿದೆ.
‘ರನ್ವೇ 34’ ಸಿನಿಮಾ 5 ಕೋಟಿ ರೂಪಾಯಿ ಬಾಚಿಕೊಂಡಿದೆ ಎನ್ನಲಾಗುತ್ತಿದೆ. ‘ಹೀರೋಪಂತಿ 2’ ಸಿನಿಮಾ ಗಳಿಕೆ 5.50 ಕೋಟಿ ರೂಪಾಯಿ ಆಗಿದೆ. ಈ ಮೂಲಕ ಚಿತ್ರದ ಕಲೆಕ್ಷನ್ ಅನುಕ್ರಮವಾಗಿ 8 ಕೋಟಿ ರೂಪಾಯಿ ಹಾಗೂ 12.50 ಕೋಟಿ ರೂಪಾಯಿ ಆಗಿದೆ.
#KGF2 continues its dominance… Metros and mass circuits fly high on [third] Sat, a trend that will reflect today [third Sun] as well as during #Eid holidays… Target ₹ 400 cr is within reach… [Week 3] Fri 4.25 cr, Sat 7.25 cr. Total: ₹ 360.31 cr. #India biz. #Hindi pic.twitter.com/beA0SUoCQw
— taran adarsh (@taran_adarsh) May 1, 2022
ಬಾಲಿವುಡ್ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿ ‘ಬಾಹುಬಲಿ 2’ ಚಿತ್ರಕ್ಕೆ ಇದೆ. ಈ ಸಿನಿಮಾ 500+ ಕೋಟಿ ರೂಪಾಯಿ ಗಳಿಸಿತ್ತು. ಇನ್ನು, ದಂಗಲ್ ಸಿನಿಮಾ 387 ಕೋಟಿ ರೂಪಾಯಿ ಗಳಿಸಿ, ಎರಡನೇ ಸ್ಥಾನದಲ್ಲಿದೆ. ಈ ಸ್ಥಾನವನ್ನು ‘ಕೆಜಿಎಫ್ 2’ ಕಿತ್ತುಕೊಳ್ಳುವ ಸಾಧ್ಯತೆ ಇದೆ.
ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: 1,000 ಕೋಟಿ ರೂಪಾಯಿ ದಾಟಿದ ‘ಕೆಜಿಎಫ್ 2’ ಕಲೆಕ್ಷನ್; ಹೊಸ ದಾಖಲೆ ಬರೆದ ಕನ್ನಡ ಸಿನಿಮಾ
‘ಕೆಜಿಎಫ್ 2’ ಚಿತ್ರದ 16ನೇ ದಿನದ ಕಲೆಕ್ಷನ್ ಹಿಂದಿಕ್ಕಲು ಒದ್ದಾಡಿದ ಅಜಯ್ ದೇವಗನ್ ಹೊಸ ಸಿನಿಮಾ