‘ವಾಟ್ಸಪ್ ಯೂನಿವರ್ಸಿಟಿಯಲ್ಲಿ ಏನು ಮಾಡಿದ್ರೂ ತಪ್ಪು’: ಮುಖ್ಯಮಂತ್ರಿ ಬೊಮ್ಮಾಯಿ ಹೀಗೆ ಹೇಳಿದ್ದೇಕೆ?
CM Basavaraj Bommai: ಸಿನಿಮಾ ಮತ್ತು ಕಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸದಾ ಪ್ರೋತ್ಸಾಹ ನೀಡುತ್ತಾರೆ. ಗ್ರ್ಯಾಮಿ ಅವಾರ್ಡ್ ಪುರಸ್ಕೃತ ರಿಕಿ ಕೇಜ್ ಅವರನ್ನು ಸಿಎಂ ಸನ್ಮಾನಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಮನ್ನಣೆ ಹೊಂದಿರುವ ಗ್ರ್ಯಾಮಿ ಪ್ರಶಸ್ತಿಯನ್ನು ಕನ್ನಡಿಗ ರಿಕಿ ಕೇಜ್ (Ricky Kej) ಅವರು ಪಡೆದುಕೊಂಡಿದ್ದು ಹೆಮ್ಮೆಯ ವಿಷಯ. ಗ್ರ್ಯಾಮಿ ಅವಾರ್ಡ್ (Grammy Awards 2022) ಪಡೆದ ಬಳಿಕ ಅವರಿಗೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಈಗ ರಿಕಿ ಕೇಜ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಸನ್ಮಾನಿಸಿದ್ದಾರೆ. ಈ ಸನ್ಮಾನ ಕಾರ್ಯಕ್ರಮ ಭಾನುವಾರ (ಮಾ.1) ರಾತ್ರಿ ಬೆಂಗಳೂರಿನಲ್ಲಿ ನಡೆಯಿತು. ವೇದಿಕೆಯಲ್ಲಿ ಅವರು ಕೆಲವು ಮಾತುಗಳನ್ನು ಹಂಚಿಕೊಂಡರು. ‘ಗ್ರ್ಯಾಮಿ ಅವಾರ್ಡ್ ಅಂದರೆ ಜಿಂಗ್ಜಾಂಗ್ ಜಿಂಗ್ ಜಾಂಗ್ ಥರ ಇರುತ್ತೆ ಎಂದುಕೊಂಡಿದ್ದೆ. ಇದಕ್ಕೆ ಹೇಗಪ್ಪ ಹೋಗೋದು ಅಂತ ಯೋಚಿಸುತ್ತಿದ್ದೆ. ಯಾಕೆಂದರೆ, ಈಗಿನ ವಾಟ್ಸಪ್ ಕಾಲದಲ್ಲಿ, ವಾಟ್ಸಪ್ ಯೂನಿವರ್ಸಿಟಿಯಲ್ಲಿ ಏನು ಮಾಡಿದರೂ ತಪ್ಪು ಅಲ್ಲವೇ? ಆದರೆ ಇಲ್ಲಿಗೆ ಬಂದಮೇಲೆ, ‘ಡಿವೈನ್ ಟೈಡ್ಸ್’ ವಿಡಿಯೋ ನೋಡಿದ ಮೇಲೆ, ಇವರ ಮಾತು ಕೇಳಿದ ಮೇಲೆ ನನಗೆ ಸಾರ್ಥಕ ಎನಿಸಿದೆ’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ:
‘ಕೆಜಿಎಫ್ ರೀತಿಯ ಕ್ವಾಲಿಟಿ ಸಿನಿಮಾಗಳ ಸಂಖ್ಯೆ ಹೆಚ್ಚಿಸಿ’: ಕನ್ನಡ ಚಿತ್ರರಂಗಕ್ಕೆ ಸಿಎಂ ಬೊಮ್ಮಾಯಿ ಸಲಹೆ
ತೆಲುಗಿನ ‘RRR’ ಸಿನಿಮಾ ಪ್ರಚಾರದ ವೇದಿಕೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ; ಇಲ್ಲಿವೆ ಫೋಟೋಗಳು