‘ಚಿಕ್ಕ ವಯಸ್ಸಿನಲ್ಲೇ ಅಪ್ಪು ಸೂಪರ್​ ಸ್ಟಾರ್​’: ತಮ್ಮನ ನೆನಪುಗಳನ್ನು ಮತ್ತೆ ಮೆಲುಕು ಹಾಕಿದ ಶಿವಣ್ಣ

ಪುನೀತ್​ ರಾಜ್​ಕುಮಾರ್​ ಅವರ ನೆನಪು ಸದಾ ಅಮರ. ಪ್ರತಿ ಸಂದರ್ಭದಲ್ಲಿಯೂ ಅವರನ್ನು ಶಿವರಾಜ್​ಕುಮಾರ್​ ಸ್ಮರಿಸಿಕೊಳ್ಳುತ್ತಾರೆ.

TV9kannada Web Team

| Edited By: Madan Kumar

May 01, 2022 | 3:37 PM

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಕನ್ನಡ ಚಿತ್ರರಂಗ ಎಂದಿಗೂ ಮರೆಯಲು ಸಾಧ್ಯವಿಲ್ಲ. ಬಾಲನಟ ಆಗಿದ್ದಾಗಲೇ ಅವರು ಜನಮನ ಗೆದ್ದಿದ್ದರು. ಡಾ. ರಾಜ್​ಕುಮಾರ್​ ಪುತ್ರ ಎಂಬ ಹಣೆಪಟ್ಟಿಯನ್ನೂ ಮೀರಿ ಅವರು ತಮ್ಮ ಸ್ವಂತ ಪ್ರತಿಭೆಯಿಂದ ಗುರುತಿಸಿಕೊಂಡಿದ್ದರು. ಇಂದು ಅಪ್ಪು ಇಲ್ಲ ಎಂಬುದು ನೋವಿನ ಸಂಗತಿ. ಕನ್ನಡ ಚಿತ್ರರಂಗದ ಪ್ರತಿ ಕಾರ್ಯಕ್ರಮದಲ್ಲೂ ಅವರನ್ನು ನೆನಪಿಸಿಕೊಳ್ಳಲಾಗುತ್ತದೆ. ಇತ್ತೀಚೆಗೆ ಶಿವರಾಜ್​ಕುಮಾರ್​ (Shivarajkumar) ಅವರು ಕನ್ನಡದ ಹೊಸ ಒಟಿಟಿ ‘ಟಾಕೀಸ್​’ (OTT platform) ಲಾಂಚ್​ ಮಾಡಿದರು. ಆ ಕಾರ್ಯಕ್ರಮದಲ್ಲೂ ಅವರು ಪುನೀತ್​ ರಾಜ್​ಕುಮಾರ್​ ಬಗ್ಗೆ ಮಾತನಾಡಿದರು. ‘ನನ್ನ ತಮ್ಮ ಅಪ್ಪು ವಿಷಯ ಪ್ರಸ್ತಾಪ ಮಾಡದೇ ಚಿತ್ರರಂಗದ ವಿಷಯವನ್ನು ಮಾತನಾಡಲು ಸಾಧ್ಯವಿಲ್ಲ. ಅವನು ಚಿಕ್ಕ ವಯಸ್ಸಿನಲ್ಲೇ ಸೂಪರ್​ ಸ್ಟಾರ್​. ಅವನು ಇದ್ದಿದ್ದರೆ ಇನ್ನೂ ಸಾಕಷ್ಟು ಕೆಲಸ ಮಾಡುತ್ತಿದ್ದ’ ಎಂದರು ಶಿವಣ್ಣ. ಪುನೀತ್​ ಅಗಲಿಕೆಯಿಂದ ಅವರ ಕುಟುಂಬದವರಿಗೆ ಆದ ನೋವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಆದರೂ ಆ ನೋವಿನ ನಡುವೆ ಜೀವನ ಸಾಗಲೇ ಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ:

‘ಹುಡುಗರು’ ಚಿತ್ರದ ಶೂಟಿಂಗ್​ ವೇಳೆ ಪುನೀತ್​ ಹೇಗೆ ಇರ್ತಿದ್ರು? ಆ ದಿನಗಳ ಮೆಲುಕು ಹಾಕಿದ ಶ್ರೀನಗರ ಕಿಟ್ಟಿ

ಪುನೀತ್​ ರಾಜ್​ಕುಮಾರ್​ ಬ್ಯಾನರ್​ ಸಲುವಾಗಿ ಫ್ಯಾನ್ಸ್​ ಮತ್ತು ಗ್ರಾಮಸ್ಥರ ನಡುವೆ ಮಾರಾಮಾರಿ; ಏನಿದು ಕಿರಿಕ್​?

Follow us on

Click on your DTH Provider to Add TV9 Kannada