ನಂದಿ ಹಿಲ್ಸ್​ಗೆ ಆಗಮಿಸಿದ ಪ್ರವಾಸಿಗರ ಪರದಾಟ; 6 ಕಿಲೋಮೀಟರ್ ಟ್ರಾಫಿಕ್ ಜಾಮ್

ಬೆಳಿಗ್ಗೆ 4 ಗಂಟೆಗೆ ಪ್ರವಾಸಿಗರು ನಂದಿಗಿರಿಧಾಮದ ಬಳಿ ಆಗಮಿಸಿದ್ದಾರೆ. ಆದರೆ ಮೇಲೆ ಹೋಗಲು ಸಾಧ್ಯವಾಗದ ಕಾರಣ ಚಿಕ್ಕಬಳ್ಳಾಪುರ ಜಿಲ್ಲಾಢಳಿತದ ಅವೈಜ್ಞಾನಿಕ ನಿರ್ಧಾರಕ್ಕೆ ಪ್ರವಾಸಿಗರು ಹಿಡಿಶಾಪ ಹಾಕುತ್ತಿದ್ದಾರೆ.

TV9kannada Web Team

| Edited By: sandhya thejappa

May 01, 2022 | 9:34 AM

ಚಿಕ್ಕಬಳ್ಳಾಪುರ: ಇಂದು (ಮೇ 1) ಭಾನುವಾರ. ವೀಕೆಂಡ್ ಕಾರಣ ಹೆಚ್ಚು ಜನರು ನಂದಿ ಹಿಲ್ಸ್ (Nandi Hills) ಕಡೆಗೆ ಆಗಮಿಸುತ್ತಿದ್ದಾರೆ. ಆದರೆ ಪ್ರವಾಸಿಗರು (Tourists) ನಂದಿಗಿರಿಧಾಮದ ಬುಡದಲ್ಲಿ ಪರದಾಡುತ್ತಿದ್ದಾರೆ. ಗಿರಿಧಾಮದ ಮೇಲೆ ಪಾರ್ಕಿಂಗ್ ಹೌಸ್ ಫುಲ್ ಆಗಿರುವ ಹಿನ್ನೆಲೆ ಪ್ರವಾಸಿಗರು ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಗಿರಿಧಾಮದ ಬುಡದಲ್ಲೇ ವಾಹನಗಳನ್ನು ತಡೆದು ನಿಲ್ಲಿಸಿದ್ದಾರೆ. ಕಿಲೋಮೀಟರ್ ಗಟ್ಟಲೇ ಪ್ರವಾಸಿಗರು ರಸ್ತೆಯಲ್ಲೇ ಪರದಾಡುತ್ತಿದ್ದಾರೆ. ಗಿರಿಧಾಮದಲ್ಲಿ ಕೇವಲ 300 ಕಾರು 1,000 ಬೈಕ್ಗಳಿಗೆ ಮಾತ್ರ ಅವಕಾಶ ಇದೆ. ಮೇಲೆ ಹೋಗಿರುವ ಕಾರುಗಳು ವಾಪಸ್ ಬರುವವರೆಗೂ ಪೊಲೀಸರು ಕಾಯುತ್ತಿದ್ದಾರೆ.

ಬೆಳಿಗ್ಗೆ 4 ಗಂಟೆಗೆ ಪ್ರವಾಸಿಗರು ನಂದಿಗಿರಿಧಾಮದ ಬಳಿ ಆಗಮಿಸಿದ್ದಾರೆ. ಆದರೆ ಮೇಲೆ ಹೋಗಲು ಸಾಧ್ಯವಾಗದ ಕಾರಣ ಚಿಕ್ಕಬಳ್ಳಾಪುರ ಜಿಲ್ಲಾಢಳಿತದ ಅವೈಜ್ಞಾನಿಕ ನಿರ್ಧಾರಕ್ಕೆ ಪ್ರವಾಸಿಗರು ಹಿಡಿಶಾಪ ಹಾಕುತ್ತಿದ್ದಾರೆ. ಮೇಲೆ ಇರೋರು ಕೆಳಗೆ ಬರುತ್ತಿಲ್ಲ. ಕೆಳಗೆ ಇರೋರು ಮೇಲೆ ಹೋಗಕ್ಕೆ ಆಗ್ತಾಯಿಲ್ಲ ಅಂತ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ

Literature: ಅನುಸಂಧಾನ; ಕಲಾತ್ಮಕ ಅಭಿವ್ಯಕ್ತಿಯಲ್ಲಿ ಸತ್ಯಕ್ಕೆ ಮುಸುಕು ತೊಡಿಸಿ ಹೇಳಿ ಪರವಾಗಿಲ್ಲ

Ramadan Eid 2022 Mubarak: ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯ ತಿಳಿಸಲು ಇಲ್ಲಿವೆ ಪವಿತ್ರ ರಂಜಾನ್ ಹಬ್ಬದ ಶುಭಾಶಯದ ಸಂದೇಶಗಳು

Follow us on

Click on your DTH Provider to Add TV9 Kannada