Nandi Hills: ಇಂದಿನಿಂದ ವೀಕೆಂಡ್‌ನಲ್ಲೂ ನಂದಿ ಗಿರಿಧಾಮ ಓಪನ್; ಪಾಸ್ ಇದ್ದರಷ್ಟೇ ಪ್ರವೇಶಕ್ಕೆ ಅವಕಾಶ

ನಂದಿ ಗಿರಿಧಾಮದ ಎಂಟ್ರಿಯಲ್ಲಿರುವ ಪಾಸ್ ಕೌಂಟರ್​ನಲ್ಲಿ 1,000 ಬೈಕ್, 300 ಫೋರ್​ ವ್ಹೀಲರ್ ವಾಹನಕ್ಕೆ ಮಾತ್ರ ಅವಕಾಶ ಇದೆ. ಜನಜಂಗುಳಿಯನ್ನು ತಡೆಯುವುದಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಈ ರೀತಿಯ ಕ್ರಮ ತೆಗೆದುಕೊಂಡಿದೆ.

Nandi Hills: ಇಂದಿನಿಂದ ವೀಕೆಂಡ್‌ನಲ್ಲೂ ನಂದಿ ಗಿರಿಧಾಮ ಓಪನ್; ಪಾಸ್ ಇದ್ದರಷ್ಟೇ ಪ್ರವೇಶಕ್ಕೆ ಅವಕಾಶ
ನಂದಿ ಗಿರಿಧಾಮ
Follow us
TV9 Web
| Updated By: preethi shettigar

Updated on:Mar 26, 2022 | 8:48 AM

ಚಿಕ್ಕಬಳ್ಳಾಪುರ: ಇಂದಿನಿಂದ ವೀಕೆಂಡ್‌ನಲ್ಲೂ ನಂದಿ ಗಿರಿಧಾಮ ಪ್ರವೇಶಕ್ಕೆ ಮುಕ್ತ ಅವಕಾಶ ಇರಲಿದೆ. ಹೀಗಾಗಿ ಇಂದು ಮುಂಜಾನೆಯೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು (Tourists) ನಂದಿ ಗಿರಿಧಾಮಕ್ಕೆ((Nandi Hills) ಆಗಮಿಸುತ್ತಿದ್ದಾರೆ. ಪಾಸ್ ಇದ್ದರೆ ಮಾತ್ರ ಪ್ರವೇಶ ನಂದಿ ಗಿರಿಧಾಮಕ್ಕೆ ಅವಕಾಶ ಇರಲಿದೆ. ಆನ್‌ಲೈನ್‌ನಲ್ಲಿ(Online) ಶೇ.50ರಷ್ಟು ಪಾಸ್‌ಗಳು ಲಭ್ಯವಿರಲಿದೆ. ಇನ್ನೂ ಶೇಕಡಾ 50ರಷ್ಟು ಪಾಸ್‌ಗಳು ಕೌಂಟರ್‌ನಲ್ಲಿ ವಿತರಣೆ ಮಾಡಲಾಗುತ್ತದೆ. ನಂದಿ ಗಿರಿಧಾಮದ ಎಂಟ್ರಿಯಲ್ಲಿರುವ ಪಾಸ್ ಕೌಂಟರ್​ನಲ್ಲಿ 1,000 ಬೈಕ್, 300 ಫೋರ್​ ವ್ಹೀಲರ್ ವಾಹನಕ್ಕೆ ಮಾತ್ರ ಅವಕಾಶ ಇದೆ. ಜನಜಂಗುಳಿಯನ್ನು ತಡೆಯುವುದಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಈ ರೀತಿಯ ಕ್ರಮ ತೆಗೆದುಕೊಂಡಿದೆ.

ಟಿಕೆಟ್ ಬುಕ್ಕಿಂಗ್ ಹೇಗೆ? ವಾರಾಂತ್ಯದ ದಿನಗಳಾದ ಶನಿವಾರ ಪ್ರವಾಸ ಮಾಡಲಿಚ್ಚಿಸುವ ಪ್ರವಾಸಿಗರು ಹಿಂದಿನ ದಿನವಾದ ಶುಕ್ರವಾರ ಸಂಜೆ 6:00 ಗಂಟೆಯೊಳಗೆ ಆನ್ ಲೈನ್ ನಲ್ಲಿ ಟಿಕೆಟ್ ಗಳನ್ನು ಪಡೆಯತಕ್ಕದ್ದು, ಭಾನುವಾರ ಪ್ರವಾಸ ಮಾಡಲಿಚ್ಚಿಸುವ ಪ್ರವಾಸಿಗರು ಹಿಂದಿನ ದಿನವಾದ ಶನಿವಾರ ಸಂಜೆ 6:00 ಗಂಟೆಯೊಳಗೆ ಆನ್ ಲೈನ್ ನಲ್ಲಿ ಟಿಕೆಟ್​ಗಳನ್ನು ಪಡೆಯತಕ್ಕದ್ದು, ಆನ್ ಲೈನ್ ನಲ್ಲಿ ಪ್ರವೇಶ ಪತ್ರ ದೊರಕದವರು ನಂದಿಬೆಟ್ಟದ ಕೆಳಗಿನ ಪ್ರವೇಶ ದ್ವಾರದ ಬಳಿ ಸಕ್ಷಮ ಪ್ರಾಧಿಕಾರ ತೆರದಿರುವ ಜಿಲ್ಲಾಡಳಿತದ ಕೌಂಟರ್ ನಲ್ಲಿ ಆಫ್ ಲೈನ್ ಟಿಕೆಟ್ ಪಡೆದು ಪ್ರವಾಸ ಕೈಗೊಳ್ಳಬಹುದು. ಶೇ.50% ಆನ್ ಲೈನ್ ಮತ್ತು ಶೇ.50% ಆಫ್ ಲೈನ್ ಟಿಕೆಟ್ ಗಾಗಿ ನಿಗದಿಗೊಳಿಸಲಾಗಿದ್ದು, ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಮಾಡುವವರು ನಂದಿಬೆಟ್ಟಕ್ಕೆ ಭೇಟಿ ನೀಡಲು KSTDC ವೆಬ್ ಸೈಟ್ ವಿಳಾಸ ಇಲ್ಲಿದೆ: 

ಆನ್ ಲೈನ್/ಆಫ್ ಲೈನ್ ಟಿಕೆಟ್ ಸಿಗದವರಿಗೆ ನಂದಿಬೆಟ್ಟ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಆದ್ದರಿಂದ ಪ್ರವಾಸಿಗರು ಆನ್ ಲೈನ್ ಟಿಕೆಟ್ ಖಾತರಿಪಡಿಸಿಕೊಂಡು ಪ್ರವಾಸ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. * ನಂದಿಗಿರಿಧಾಮದಲ್ಲಿ ವೀಕೆಂಡ್‌ನಲ್ಲಿ ವಿಧಿಸಿದ್ದ ನಿರ್ಬಂಧ ತೆರವು * ಕಳೆದ 1 ವರ್ಷದಿಂದ ವೀಕೆಂಡ್‌ನಲ್ಲಿ ನಿರ್ಬಂಧ ವಿಧಿಸಲಾಗಿತ್ತು * ಪ್ರವಾಸಿಗರು ವಾರದ 7 ದಿನವೂ ನಂದಿ ಹಿಲ್ಸ್‌ಗೆ ಬರಬಹುದು * ವೀಕೆಂಡ್‌ನಲ್ಲಿ ನಂದಿ ಹಿಲ್ಸ್‌ ಪ್ರವೇಶಕ್ಕೆ ಪಾಸ್ ಕಡ್ಡಾಯ * ಆನ್‌ಲೈನ್‌ನಲ್ಲಿ ಶೇ. 50, ಆಫ್‌ಲೈನ್‌ನಲ್ಲಿ ಶೇ. 50ರಷ್ಟು ಪಾಸ್

ನಿಲುಗಡೆಯನುಸಾರ ವಾಹನಗಳ ಪ್ರವೇಶಕ್ಕೆ ಅವಕಾಶ ನಂದಿ ಗಿರಿಧಾಮದ ಮೇಲ್ಭಾಗದಲ್ಲಿ 1000 ದ್ವಿಚಕ್ರ ವಾಹನಗಳು ಹಾಗೂ ಕಾರು, ಮಿನಿ ಬಸ್ಸು ಸೇರಿದಂತೆ 300 ಲಘು (ಪೋರ್ ವೀಲರ್) ವಾಹನಗಳಿಗೆ ವಾಹನ ನಿಲುಗಡೆ ಮಾಡಲು ಸ್ಥಳಾವಕಾಶವಿದ್ದು, ಅಷ್ಟು ವಾಹನಗಳಿಗೆ ಮಾತ್ರ ಗಿರಿಧಾಮದ ಮೇಲ್ಭಾಗಕ್ಕೆ ಅನುಮತಿ ನೀಡಲಾಗುವುದು. ಮೇಲ್ಭಾಗಕ್ಕೆ ಚಲಿಸಿದ ವಾಹನಗಳು ನಿರ್ಗಮಿಸಿದಂತೆ ಇತರ ಪ್ರವಾಸಿಗರ ವಾಹನಗಳಿಗೆ ಟಿಕೆಟ್ ಗಳನ್ನು ವಿತರಿಸಿ, ನಂದಿ ಗಿರಿಧಾಮ ಪ್ರವಾಸಕ್ಕೆ ಅವಕಾಶ ಮಾಡಿಕೊಡಲಾಗಿರುತ್ತದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ. ದ್ವಿಚಕ್ರ ವಾಹನದಲ್ಲಿ ಬರುವ ಒಬ್ಬ ಸವಾರನಿಗೆ 50 ರೂ. ಇಬ್ಬರು ಸವಾರರ ವಾಹನಕ್ಕೆ 70 ರೂ, ನಾಲ್ಕು ಚಕ್ರದ ಎಲ್.ಎಂ.ವಿ ಲಘು ವಾಹನಗಳಿಗೆ 125 ರೂ.ಗಳು, ನಾಲ್ಕು ಚಕ್ರದ ಎಚ್.ಜಿ.ವಿ ವಾಹನಗಳಿಗೆ 150 ರೂ.ಗಳ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: Nandi Hills: ಕೋವಿಡ್​ಗೆ ಬೈ ಬೈ, ಪ್ರವಾಸಿಗರ ಭೇಟಿಗೆ ನಂದಿ ಬೆಟ್ಟ ಇನ್ಮುಂದೆ ಸದಾ ಮುಕ್ತ ಮುಕ್ತ ಮುಕ್ತಾ! ಟಿಕೆಟ್ ಬುಕ್ಕಿಂಗ್ ಹೇಗೆ?

ರಾಜ್ಯಾದ್ಯಂತ ಸಬ್ ರಿಜಿಸ್ಟ್ರಾರ್ ಕಚೇರಿಗಳ ದೈನಂದಿನ ಕೆಲಸದ ಅವಧಿ ವಿಸ್ತರಣೆ, ಮಾರ್ಗಸೂಚಿ ದರ ಶೇ. 10 ರಷ್ಟು ಕಡಿತ

Published On - 8:10 am, Sat, 26 March 22

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ