Ramadan Eid 2022 Mubarak: ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯ ತಿಳಿಸಲು ಇಲ್ಲಿವೆ ಪವಿತ್ರ ರಂಜಾನ್ ಹಬ್ಬದ ಶುಭಾಶಯದ ಸಂದೇಶಗಳು
Happy Eid-Ul-Fitr 2022: ಇಸ್ಲಾಂ ಧರ್ಮೀಯರ ಪವಿತ್ರ ರಂಜಾನ್ ಹಬ್ಬ ಮೇ 2ರಂದು ಆಚರಿಸಲಾಗುತ್ತಿದೆ. ಈ ಪವಿತ್ರ ಹಬ್ಬದ ಶುಭ ಸಂದರ್ಭದಲ್ಲಿ ನಿಮ್ಮ ಇಷ್ಟಪಾತ್ರರಿಗೆ ಶುಭಾಶಯ ತಿಳಿಸಲು ಇಲ್ಲಿವೆ ಪವಿತ್ರ ರಂಜಾನ್ ಹಬ್ಬದ ಶುಭಾಶಯದ ಸಂದೇಶಗಳು
ಇಸ್ಲಾಮಿಕ್ ತಿಂಗಳ 9ನೇ ಮಾಸ ರಂಜಾನ್ ಕೊನೆಯ ದಿನದಂದು ಈದ್-ಉಲ್-ಫಿತರ್ ಆಚರಿಸಲು ದೇಶಾದ್ಯಂತ ಮುಸ್ಲಿಮರು ಸಿದ್ಧರಾಗಿದ್ದಾರೆ. ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ಹತ್ತನೇ ತಿಂಗಳು ಶವ್ವಾಲ್ ಮತ್ತು ಈ ತಿಂಗಳ ಮೊದಲ ದಿನವನ್ನು ಪ್ರಪಂಚದಾದ್ಯಂತ ಈದ್-ಉಲ್-ಫಿತರ್ ಎಂದು ಆಚರಿಸಲಾಗುತ್ತದೆ. ಚಂದ್ರನ ಗೋಚರತೆಯು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬದಲಾಗುತ್ತದೆ. ಏಕೆಂದರೆ ಇಸ್ಲಾಮಿಕ್ ಕ್ಯಾಲೆಂಡರ್ ಚಂದ್ರನ ಗೋಚರಿಕೆಯನ್ನು ಅವಲಂಬಿಸಿದೆ. ಭಾರತದಲ್ಲಿ, ಸೌದಿ ಅರೇಬಿಯಾದಲ್ಲಿ ಚಂದ್ರನನ್ನು ನೋಡಿದ ಒಂದು ದಿನದ ನಂತರ ಈದ್ ಅನ್ನು ಸಾಮಾನ್ಯವಾಗಿ ಆಚರಿಸಲಾಗುತ್ತದೆ.
ಈ ಪವಿತ್ರ ದಿನದಂದು, ಮುಸ್ಲಿಮರು ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಭರ್ಜರಿ ಜೌತಣ ಕೂಟವನ್ನು ಏರ್ಪಡಿಸಿ ಸಂಭ್ರಮಿಸುತ್ತಾರೆ. ಚಂದ್ರನನ್ನು ನೋಡಿದ ಬಳಿಕ ಮುಸ್ಲಿಮರು ಪರಸ್ಪರ ಈದ್ ಮುಬಾರಕ್ ಶುಭಾಶಯ ಕೋರುತ್ತಾರೆ. ಹೀಗಾಗಿ ನಾವಿಂದು ನಿಮ್ಮ ಪ್ರೀತಿಪಾತ್ರರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಲು ಕೆಲವು ಸಂದೇಶಗಳನ್ನು ಇಲ್ಲಿ ನೀಡಿದ್ದೇವೆ.
ರಂಜಾನ್ ಹಬ್ಬದ ಶುಭ ಸಂದೇಶಗಳನ್ನು ಇಂಗ್ಲಿಷ್ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ
ಈದ್-ಉಲ್-ಫಿತರ್ ಶುಭಾಶಯಗಳು
- ಕರುಣಾಮಯಿ ಅಲ್ಲಾಹ್ ನಿಮ್ಮನ್ನು ಆಶೀರ್ವದಿಸಲಿ, ನಿಮ್ಮೆಲ್ಲಾ ಕಷ್ಟಗಳನ್ನು ಪರಿಹರಿಸಲಿ, ಸದಾ ಸುಖಮಯ ಜೀವನ ನಿಮ್ಮದಾಗಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ರಂಜಾನ್ ಹಬ್ಬದ ಶುಭಾಶಯಗಳು
- ನಾನು ಇಂದು ನಿಮ್ಮೊಂದಿಗೆ ಇಲ್ಲದಿರಬಹುದು, ಆದರೆ ನನ್ನ ಪ್ರಾರ್ಥನೆಯಲ್ಲಿ ನೀವು ಯಾವಾಗಲೂ ಇರುತ್ತೀರಿ. ಅಲ್ಲಾಹನು ನಿಮಗೆ ಶಾಂತಿ ಮತ್ತು ಸಂತೋಷವನ್ನು ನೀಡಲಿ. ನಿಮಗೆ ಈದ್ ಮುಬಾರಕ್!
- ಪ್ರಾರ್ಥನೆ, ಕಾಳಜಿ, ಪ್ರೀತಿ, ಕಿರುನಗೆ ಮತ್ತು ಪರಸ್ಪರ ಆಚರಿಸಲು ಈ ಅದ್ಭುತ ದಿನಕ್ಕಾಗಿ ಅಲ್ಲಾಹನಿಗೆ ಧನ್ಯವಾದ ಹೇಳಲು ಎಲ್ಲರೂ ನಮ್ಮ ಕೈಗಳನ್ನು ಸೇರಿಸೋಣ. ಈದ್ ಮುಬಾರಕ್!
- ಚಂದ್ರನ ಬೆಳಕು ನೇರವಾಗಿ ನಿಮ್ಮ ಮೇಲೆ ಬೀಳಲಿ ಮತ್ತು ಅಲ್ಲಾ ಇಂದು ನೀವು ಬಯಸುವ ಎಲ್ಲವನ್ನೂ ನಿಮಗೆ ಅನುಗ್ರಹಿಸಲಿ. ಈದ್ ಶುಭಾಶಯಗಳು!
- ಈ ಸಂದರ್ಭದಲ್ಲಿ ಅಲ್ಲಾಹನು ನಿಮ್ಮ ಜೀವನವನ್ನು ಪ್ರೀತಿ ಮತ್ತು ಸಂತೋಷದಿಂದ, ನಿಮ್ಮ ಹೃದಯವನ್ನು ಕಾಳಜಿಯಿಂದ ಮತ್ತು ನಿಮ್ಮ ಮನಸ್ಸನ್ನು ಬುದ್ಧಿವಂತಿಕೆಯಿಂದ ತುಂಬಿಸಲಿ, ನಿಮಗೆ ಈದ್ ಮುಬಾರಕ್ ಶುಭಾಶಯಗಳು.
- ದೇವರು ನಿಮಗೆ ಶಾಂತಿ, ನೆಮ್ಮದಿ, ಸಂತೋಷ ಮತ್ತು ಸಮೃದ್ಧಿಯ ಆಶೀರ್ವಾದ ನೀಡಿ ಹರಸಲಿ. ಪವಿತ್ರ ರಂಜಾನ್ ಮಾಸ ನಿಮ್ಮ ಮನ ಮನೆಗಳಲ್ಲಿ ಖುಷಿ ನೆಲೆಗೊಳ್ಳುವಂತೆ ಮಾಡಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ರಂಜಾನ್ ಹಬ್ಬದ ಶುಭಾಶಯಗಳು
- ನಿಮ್ಮೆಲ್ಲಾ ಕಷ್ಟಗಳನ್ನು ಕರುಣಾಳು ಅಲ್ಲಾಹ್ ದೂರ ಮಾಡಲಿ, ನಿಮ್ಮೆಲ್ಲಾ ಪ್ರಾರ್ಥನೆಯನ್ನು ದೇವರು ಅಲಿಸಲಿ. ಸದಾ ಕಾಲ ನಿಮ್ಮ ಮನ ಮನೆಗಳಲ್ಲಿ ಇನ್ನಷ್ಟು ಖುಷಿಯನ್ನು ತುಂಬುವ, ಸಮಾಧಾನ ನೆಲೆಗೊಳ್ಳುವ ದಾರಿಯನ್ನು ದೇವರು ನಿಮಗೆ ಕರುಣಿಸಲಿ. ರಂಜಾನ್ ಹಬ್ಬದ ಶುಭಾಶಯಗಳು
- ನೀವು ನಗುತ್ತಿರುವುದನ್ನು ನೋಡುವುದು ನನಗೆ ಅತ್ಯಂತ ಸುಂದರವಾದ ಕ್ಷಣ. ನೀವು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದವರು ನಿಮ್ಮನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ. ಈ ಈದ್ ಅನ್ನು ಪೂರ್ಣವಾಗಿ ಆನಂದಿಸಿ. ಈದ್ ಮುಬಾರಕ್!
- ನಿನ್ನನ್ನು ನಿರುತ್ಸಾಹಗೊಳಿಸಲು ನೆರಳುಗಳಿಲ್ಲ, ನಿನ್ನನ್ನು ಸುತ್ತುವರೆದಿರುವ ಸಂತೋಷಗಳು ಮಾತ್ರ, ದೇವರು ನಿಮ್ಮನ್ನು ಆಶೀರ್ವದಿಸಲಿ. ಇವು ನಿನಗಾಗಿ, ಇಂದು, ನಾಳೆ, ಮತ್ತು ಪ್ರತಿದಿನವೂ ನನ್ನ ಹಾರೈಕೆಗಳು. ಈದ್ ಶುಭಾಶಯಗಳು!
- ನಿಮ್ಮ ಜೀವನವು ಬಿರಿಯಾನಿಯಂತೆ ಮಸಾಲೆಯುಕ್ತ ಮತ್ತು ಖೀರ್‌ನಂತೆ ಸಿಹಿಯಾಗಿರಲಿ ಎಂದು ನಾನು ಆಶಿಸುತ್ತೇನೆ. ಈದ್‌ನ ಸಂತೋಷವನ್ನು ಸವಿಯಿರಿ. ಈದ್ ಮುಬಾರಕ್.
- ಅಲ್ಲಾಹ್ ನಿಮಗೆ ಆರೋಗ್ಯ, ಸಮೃದ್ಧಿ, ಆಯುಷ್ಯ, ಸಂಪತ್ಭರಿತ ಜೀವನ ಕೊಟ್ಟು ಸದಾ ಕಾಲ ಕಾಪಾಡಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ರಂಜಾನ್ ಹಬ್ಬದ ಶುಭಾಶಯಗಳು
ರಂಜಾನ್ ಹಬ್ಬದ ಮತ್ತಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡುವ ಮೂಲಕ ಓದಿ