AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramadan Eid 2022 Moon Sighting: ಭಾರತ, ಸೌದಿ ಅರೇಬಿಯಾದಲ್ಲಿ ರಂಜಾನ್ ಹಬ್ಬ ಆಚರಣೆ ಯಾವಾಗ?

Eid-ul-Fitr 2022: ಈ ವರ್ಷ ಭಾರತ, ಸೌದಿ ಅರೇಬಿಯಾ, ಯುಎಇಯಲ್ಲಿ ಈದ್ ಉಲ್-ಫಿತರ್ ದಿನಾಂಕಗಳು ಅಮಾವಾಸ್ಯೆಯ ಆಧಾರದ ಮೇಲೆ ಮೇ 2 ರಂದು ನಡೆಯುತ್ತದೆ. ಹಬ್ಬದ ದಿನದಂದು ಮುಸ್ಲಿಮರು ಈದ್ ಅಲ್-ಫಿತರ್ ಗಾಗಿ ಪ್ರಾರ್ಥಿಸುತ್ತಾರೆ,

Ramadan Eid 2022 Moon Sighting: ಭಾರತ, ಸೌದಿ ಅರೇಬಿಯಾದಲ್ಲಿ ರಂಜಾನ್ ಹಬ್ಬ ಆಚರಣೆ ಯಾವಾಗ?
ಸಾಂದರ್ಭಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on:May 01, 2022 | 7:57 AM

Share

ಇಸ್ಲಾಮಿಕ್ ಲೂನಾರ್ ಕ್ಯಾಲೆಂಡರ್‌ನಲ್ಲಿ ಒಂಬತ್ತನೇ ತಿಂಗಳು ರಂಜಾನ್ ಮತ್ತು ಹತ್ತನೆಯದು ಶವ್ವಾಲ್, ಈದ್ ಅಲ್-ಫಿತರ್ ಅಥವಾ ಈದ್-ಉಲ್-ಫಿತರ್ ವಿಶ್ವದಾದ್ಯಂತ ಮುಸ್ಲಿಮರು ಆಚರಿಸುವ ಪ್ರಮುಖ ಧಾರ್ಮಿಕ ಹಬ್ಬವಾಗಿದೆ. ಇದು ಇಸ್ಲಾಂ ಧರ್ಮದ ಪವಿತ್ರ ಉಪವಾಸದ ತಿಂಗಳಾದ ರಂಜಾನ್‌ನ ಮುಕ್ತಾಯವನ್ನು ಸೂಚಿಸುತ್ತದೆ. ಒಂದು ತಿಂಗಳ ಉಪವಾಸದ ಆಚರಣೆಯ ನಂತರ ಈದ್-ಉಲ್-ಫಿತರ್ ಅನ್ನು ರಂಜಾನ್ ತಿಂಗಳ ಉಪವಾಸದ ಕೊನೆಯ ದಿನದಂದು ಆಚರಿಸಲಾಗುತ್ತೆ.

ಈದ್ ದಿನವನ್ನು ಚಂದ್ರನ ದರ್ಶನದಿಂದ ನಿರ್ಧರಿಸಲಾಗುತ್ತದೆ. ಪ್ರಪಂಚದಾದ್ಯಂತ ಗಮನಿಸಲಾದ ನಿಖರವಾದ ದಿನಾಂಕದಲ್ಲಿ ಸ್ವಲ್ಪ ವ್ಯತ್ಯಾಸಗಳಿರಬಹುದು. ಈದ್ ಉಲ್-ಫಿತರ್‌ನ ದಿನವನ್ನು ರಂಜಾನ್ ಆರಂಭದವರೆಗೆ ಘೋಷಿಸಲಾಗುವುದಿಲ್ಲ. ಈ ವರ್ಷ ಮೇ 2-3 ರಂದು ಆಚರಿಸುವ ನಿರೀಕ್ಷೆಯಿದೆ. ಸದ್ಯ ಸೋಮವಾರವೇ ರಂಜಾನ್ ಹಬ್ಬ ಆಚರಣೆಗೆ ನಿರ್ಧರಿಸಿದ್ದು ರಾಜ್ಯ ಸರ್ಕಾರ ರಜೆ ಘೋಷಿಸಿದೆ.

ಭಾರತ, ಸೌದಿ ಅರೇಬಿಯಾ, ಯುಎಇಯಲ್ಲಿ ಈದ್-ಉಲ್-ಫಿತರ್ ಯಾವಾಗ ಇಸ್ಲಾಮಿಕ್ ಕ್ಯಾಲೆಂಡರ್ ಚಂದ್ರನ ಚಕ್ರವನ್ನು ಆಧರಿಸಿರುವುದರಿಂದ ಕೆಲವೊಮ್ಮೆ ರಂಜಾನ್ ಹಬ್ಬದ ಆಚರಣೆಯಲ್ಲಿ ಬದಲಾವಣೆ ಇರುತ್ತದೆ. 30 ದಿನಗಳಿಗಿಂತ ಹೆಚ್ಚು ದಿನಗಳು ರಂಜಾನ್ ಆಚರಣೆಯಲ್ಲಿ ಬರುತ್ತವೆ. ಮತ್ತು ಈ ವರ್ಷ ಭಾರತ, ಸೌದಿ ಅರೇಬಿಯಾ, ಯುಎಇಯಲ್ಲಿ ಈದ್ ಉಲ್-ಫಿತರ್ ದಿನಾಂಕಗಳು ಅಮಾವಾಸ್ಯೆಯ ಆಧಾರದ ಮೇಲೆ ಮೇ 2 ರಂದು ನಡೆಯುತ್ತದೆ. ಹಬ್ಬದ ದಿನದಂದು ಮುಸ್ಲಿಮರು ಈದ್ ಅಲ್-ಫಿತರ್ ಗಾಗಿ ಪ್ರಾರ್ಥಿಸುತ್ತಾರೆ, ಇದನ್ನು ಅರೇಬಿಕ್ ಭಾಷೆಯಲ್ಲಿ “ಸಲಾತ್ ಅಲ್ ಈದ್” ಎಂದು ಕರೆಯಲಾಗುತ್ತದೆ. ಮುಸ್ಲಿಮರು ಮಸೀದಿಗಳಲ್ಲಿ ಅಥವಾ ತೆರೆದ ಸ್ಥಳಗಳಲ್ಲಿ ಎರಡು “ರಕಾತ್” ಪ್ರಾರ್ಥನೆಯನ್ನು ಸಲ್ಲಿಸಲು ಸೇರುತ್ತಾರೆ. ಪ್ರಾರ್ಥನೆಯ ನಂತರ, ಇಮಾಮ್ ಭಾಷಣವನ್ನು ಮಾಡುತ್ತಾರೆ, ಇದರಲ್ಲಿ ಅವರು ಎಲ್ಲೆಡೆ ಕ್ಷಮೆ, ಕರುಣೆ ಮತ್ತು ಶಾಂತಿಗಾಗಿ ಪ್ರಾರ್ಥಿಸುತ್ತಾರೆ. ಹೊಸ, ಶುದ್ಧ ಬಟ್ಟೆಗಳನ್ನು ಧರಿಸಿ ಮತ್ತು ಖರ್ಜೂರ, ಸಿಹಿತಿಂಡಿಗಳನ್ನು ಹಂಚಿ ಹಬ್ಬದ ಸೊಬಗನ್ನು ಹೆಚ್ಚಿಸುತ್ತಾರೆ.

ರಂಜಾನ್​ ಹಬ್ಬದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಿರ್ಗತಿಕರಿಗೆ ಹಣವನ್ನು ನೀಡುವುದು (‘ಝಕಾತ್ ಅಲ್-ಫಿತರ್’(ಜೀವನದ ಮೇಲಿನ ತೆರಿಗೆ) ಎಂದು ಕರೆಯಲಾಗುತ್ತದೆ, ದಾನ ಮಾಡಬೇಕಾದ ಮೊತ್ತವು ಒಬ್ಬರ ಹಿಡುವಳಿಯ ಮೇಲೆ ಅವಲಂಬಿತವಾಗಿರುತ್ತದೆ), ಈದ್ ಶುಭಾಶಯಗಳನ್ನು ಕಳುಹಿಸುವುದು ಮತ್ತು ಕುಟುಂಬದೊಂದಿಗೆ ಔತಣ ಮಾಡುವುದು ಕೂಡ ಈದ್ ಆಚರಣೆಯ ಪ್ರಮುಖ ಭಾಗಗಳಾಗಿವೆ. ಅನೇಕ ಮುಸ್ಲಿಮರಿಗೆ, ಈದ್ ಉಲ್-ಫಿತರ್ ಅವರು ಸ್ವಯಂ ನಿಯಂತ್ರಣವನ್ನು ಅಭ್ಯಾಸ ಮಾಡಲು ಸಹಾಯ ಮಾಡಲು ರಂಜಾನ್ ಸಮಯದಲ್ಲಿ ಮಾರ್ಗದರ್ಶನ ಮತ್ತು ಶಕ್ತಿಯನ್ನು ಒದಗಿಸುವುದಕ್ಕಾಗಿ ಅಲ್ಲಾಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಮಯವಾಗಿದೆ.

ಈದ್ ಹಿಂದಿನ ರಾತ್ರಿಯನ್ನು ಚಾಂದ್ ಕಿ ರಾತ್ ಅಥವಾ “ಚಂದ್ರನ ರಾತ್ರಿ” ಎಂದು ಕರೆಯಲಾಗುತ್ತದೆ. ಅನೇಕ ವ್ಯಕ್ತಿಗಳು ತಮ್ಮ ರಜಾದಿನದ ಶಾಪಿಂಗ್ ಮುಗಿಸಲು ಮತ್ತು ಮರುದಿನದ ತಯಾರಿಗಾಗಿ ಈ ರಾತ್ರಿಯನ್ನು ಬಳಸುತ್ತಾರೆ. ಆಚರಣೆಯ ಸಂಪೂರ್ಣ ಅಂಶವೆಂದರೆ ಸಂತೋಷ, ಕೃತಜ್ಞತೆ, ಕ್ಷಮೆ, ದೇವರಿಗೆ ಕೃತಜ್ಞತೆ ಮತ್ತು ದೇವರ ಸ್ಮರಣೆಯನ್ನು ತೋರಿಸುವುದು.

ಈದ್-ಉಲ್-ಫಿತರ್ 2021 ಮಹತ್ವ ಈದ್-ಉಲ್-ಫಿತರ್ ಶವ್ವಾಲ್ ತಿಂಗಳ ಮೊದಲ ದಿನ. ಅಂದರೆ ಇಸ್ಲಾಮಿಕ್ ಕ್ಯಾಲೆಂಡರ್ನ 9ನೇ ತಿಂಗಳಾದ ರಂಜಾನ್ ತಿಂಗಳು ಮುಗಿದು ಶವ್ವಾಲ್ ತಿಂಗಳ ಆರಂಭವಾದ ಮೊದಲ ದಿನವೇ ಈದ್-ಉಲ್-ಫಿತರ್ ಅಂದರೆ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತೆ. ರಂಜಾನ್ ತಿಂಗಳ 30 ದಿನ ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸ ಮಾಡಿ ತಮ್ಮ ಹಿಂದಿನ ಪಾಪಗಳಿಗಾಗಿ ಸರ್ವಶಕ್ತನಾದ ಅಲ್ಲಹ್ನಿಗೆ ಕ್ಷಮೆ ಕೋರುತ್ತಾರೆ. ಮತ್ತು ರಂಜಾನ್‌ನ ಕೊನೆಯ ದಿನವಾದ ಚಾಂದ್ ರಾತ್‌ನಂದು ಅರ್ಧಚಂದ್ರನನ್ನು ನೋಡುವ ಮೂಲಕ ತಿಂಗಳ ಉಪವಾಸ ಮುಕ್ತಾಯವಾಗುತ್ತದೆ. ಬಳಿಕ ಚಾಂದ್ ರಾತ್ನ ಮರುದಿನ ಈದ್-ಉಲ್-ಫಿತರ್(‘ಉಪವಾಸವನ್ನು ಮುರಿಯುವ ಹಬ್ಬ’) ದಿನವನ್ನು ಆಚರಿಸಿ ರಂಜಾನ್ ಹಬ್ಬವನ್ನು ಸಂತೋಷ ಸಡಗರದಿಂದ ಆಚರಿಸಲಾಗುತ್ತದೆ.

ಈದ್ ನಮಾಜ್ ಹಬ್ಬದ ದಿನವು ಮಸೀದಿಯಲ್ಲಿ ಈದ್ ಪ್ರಾರ್ಥನೆ ಸಲ್ಲಿಸುವ ಮೂಲಕ ಪ್ರಾರಂಭವಾಗುತ್ತದೆ, 6 ತಕ್ಬೀರ್ ಜೊತೆಗೆ 2 ರಕಾತ್ ವಜೀಬ್ ನಮಾಜ್ ಮಾಡುವ ಮೂಲಕ ಪ್ರಾರ್ಥನೆಯನ್ನು ಮಾಡಲಾಗುತ್ತೆ. ಈದ್ ಪ್ರಾರ್ಥನೆಯ ನಂತರ ಧರ್ಮೋಪದೇಶದ ನಡೆಯುತ್ತೆ. ಬಳಿಕ ಮುಸ್ಲಿಮರು ಅಲ್ಲಾಹನನ್ನು ಕ್ಷಮೆ, ಕರುಣೆ, ಶಾಂತಿ ಮತ್ತು ಪ್ರಪಂಚದಾದ್ಯಂತದ ಎಲ್ಲಾ ಜೀವಿಗಳಿಗೆ ಆಶೀರ್ವಾದವನ್ನು ಕೇಳುತ್ತಾರೆ.

ಇದನ್ನೂ ಓದಿ: Horoscope Today- ದಿನ ಭವಿಷ್ಯ; ಭಾನುವಾರ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

ಸೋಮವಾರವೇ ರಂಜಾನ್ ಹಬ್ಬ ಆಚರಣೆಗೆ ನಿರ್ಧಾರ: ಸಾರ್ವತ್ರಿಕ ರಜೆ ಘೋಷಿಸಿ, ಆದೇಶ ಹೊರಡಿಸಿದ ರಾಜ್ಯ ಸರ್ಕಾರ

Published On - 7:50 am, Sun, 1 May 22

ಅಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು, ಇಲ್ಲಂದ್ರೆ ನಾನೇ ಕೊಲೆ ಮಾಡ್ತೀನಿ ಮಗ
ಅಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು, ಇಲ್ಲಂದ್ರೆ ನಾನೇ ಕೊಲೆ ಮಾಡ್ತೀನಿ ಮಗ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ವರ್ಷಕ್ಕೊಮ್ಮೆ ಮಾತ್ರ ಏಕೆ ಭಕ್ತರಿಗೆ ಹಾಸನಾಂಬೆ ದರ್ಶನ? ಇಲ್ಲಿದೆ ನೋಡಿ ಕಾರಣ
ವರ್ಷಕ್ಕೊಮ್ಮೆ ಮಾತ್ರ ಏಕೆ ಭಕ್ತರಿಗೆ ಹಾಸನಾಂಬೆ ದರ್ಶನ? ಇಲ್ಲಿದೆ ನೋಡಿ ಕಾರಣ
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್