‘ನಾನು ಪಾಪ್​ ಹಾಗೂ ಸಿನಿಮಾ ಹಾಡುಗಳನ್ನು ಮಾಡಲ್ಲ’; ರಿಕಿ ಕೇಜ್

‘ನಾನು ಪಾಪ್​ ಹಾಗೂ ಸಿನಿಮಾ ಹಾಡುಗಳನ್ನು ಮಾಡಲ್ಲ’; ರಿಕಿ ಕೇಜ್

TV9 Web
| Updated By: ರಾಜೇಶ್ ದುಗ್ಗುಮನೆ

Updated on:May 02, 2022 | 2:44 PM

ಈ ವರ್ಷ ‘ಡಿವೈನ್​ ಟೈಡ್ಸ್​’ ಆಲ್ಬಂಗೆ ಸ್ಟೀವರ್ಟ್ ಕೋಪ್​​ಲ್ಯಾಂಡ್​ ಹಾಗೂ ರಿಕಿ ಕೇಜ್​ಗೆ ಒಟ್ಟಾಗಿ ಗ್ರ್ಯಾಮಿ ಪ್ರಶಸ್ತಿ ದೊರೆತಿತ್ತು. ರಿಕಿ ಕೇಜ್ ಸಾಧನೆಯನ್ನು ಗುರುತಿಸಿ ಅವರಿ​ಗೆ ಬೆಂಗಳೂರಲ್ಲಿ ವಿಶೇಷ ಸನ್ಮಾನ ಏರ್ಪಡಿಸಲಾಗಿತ್ತು.

ಭಾರತದ ಮ್ಯೂಸಿಕ್​ ಕಂಪೋಸರ್​ ರಿಕಿ ಕೇಜ್​ (Ricky Kej) ಅವರಿಗೆ 64ನೇ ಗ್ರ್ಯಾಮಿ ಅವಾರ್ಡ್ (Grammy Awards
)​ ಕಾರ್ಯಕ್ರಮದಲ್ಲಿ ಪ್ರಶಸ್ತಿ ದೊರೆತಿತ್ತು. ರಿಕಿ ಕೇಜ್​ ಹುಟ್ಟಿದ್ದು ಅಮೆರಿಕದಲ್ಲಿ. ಸದ್ಯ, ಅವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ರಿಕಿ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. 2015ರಲ್ಲಿ ‘ವಿಂಡ್ಸ್​ ಆಫ್​ ಸಂಸಾರ’ ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ ದೊರೆತಿತ್ತು. ಈ ವರ್ಷ ‘ಡಿವೈನ್​ ಟೈಡ್ಸ್​’ ಆಲ್ಬಂಗೆ ಸ್ಟೀವರ್ಟ್ ಕೋಪ್​​ಲ್ಯಾಂಡ್​ ಹಾಗೂ ರಿಕಿ ಕೇಜ್​ಗೆ ಒಟ್ಟಾಗಿ ಗ್ರ್ಯಾಮಿ ಪ್ರಶಸ್ತಿ ದೊರೆತಿತ್ತು. ರಿಕಿ ಕೇಜ್ ಸಾಧನೆಯನ್ನು ಗುರುತಿಸಿ ಅವರಿ​ಗೆ ಬೆಂಗಳೂರಲ್ಲಿ ವಿಶೇಷ ಸನ್ಮಾನ ಏರ್ಪಡಿಸಲಾಗಿತ್ತು. ಈ ವೇಳೆ ರಿಕಿ ಅವರು ಮಾತನಾಡಿದ್ದಾರೆ. ಸಿನಿಮಾಗಳಿಗೆ ಎಂದಿಗೂ ಸಂಗೀತ ಸಂಯೋಜನೆ ಮಾಡುವುದಿಲ್ಲ ಎಂದಿದ್ದಾರೆ. ಗ್ರ್ಯಾಮಿ ಅವಾರ್ಡ್ ವೇದಿಕೆ ಏರಿದ ರಿಕ್ಕಿ ಕೇಜ್​ ಅವರು ‘ನಮಸ್ತೆ’ ಎಂದು ಹೇಳುವ ಮೂಲಕ ಭಾರತದ ಸಂಸ್ಕೃತಿಯನ್ನು ಅಲ್ಲಿಯೂ ಪಸರಿಸಿದ್ದರು.

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

ಇದನ್ನೂ ಓದಿ: 64ನೇ ಗ್ರ್ಯಾಮಿ ಅವಾರ್ಡ್​ ಕಾರ್ಯಕ್ರಮದಲ್ಲಿ ಭಾರತದ ರಿಕ್ಕಿ ಕೇಜ್​ಗೆ ಪ್ರಶಸ್ತಿ; ಇಲ್ಲಿದೆ ವಿಜೇತರ ಪೂರ್ತಿ ಪಟ್ಟಿ 

‘‘ವಾಟ್ಸಪ್​ ಯೂನಿವರ್ಸಿಟಿಯಲ್ಲಿ ಏನು ಮಾಡಿದ್ರೂ ತಪ್ಪು’: ಮುಖ್ಯಮಂತ್ರಿ ಬೊಮ್ಮಾಯಿ ಹೀಗೆ ಹೇಳಿದ್ದೇಕೆ? 

 

Published on: May 02, 2022 02:42 PM