64ನೇ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಭಾರತದ ರಿಕ್ಕಿ ಕೇಜ್ಗೆ ಪ್ರಶಸ್ತಿ; ಇಲ್ಲಿದೆ ವಿಜೇತರ ಪೂರ್ತಿ ಪಟ್ಟಿ
ರಿಕ್ಕಿ ಕೇಜ್ ಹುಟ್ಟಿದ್ದು ಅಮೆರಿಕದಲ್ಲಿ. ಸದ್ಯ, ಅವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ರಿಕ್ಕಿ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಅವರು 100ಕ್ಕೂ ಅಧಿಕ ಪಶಸ್ತಿಗಳನ್ನು ಗೆದ್ದಿದ್ದಾರೆ.
64ನೇ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮ (Grammy Awards 2022) ಲಾಸ್ ವೇಗಸ್ನಲ್ಲಿ ಅದ್ದೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಭಾರತದ ಮ್ಯೂಸಿಕ್ ಕಂಪೋಸರ್ ರಿಕ್ಕಿ ಕೇಜ್ (Ricky Kej) ಅವರಿಗೆ ಪ್ರಶಸ್ತಿ ದೊರೆತಿದೆ. ಇದರ ಜತೆಗೆ ನಾನಾ ವಿಭಾಗದಲ್ಲಿ ಬೇರೆಬೇರೆ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸುವ ಕೆಲಸ ಆಗಿದೆ. ವೇದಿಕೆ ಏರಿದ ರಿಕ್ಕಿ ಕೇಜ್ ಅವರು ‘ನಮಸ್ತೆ’ ಎಂದು ಹೇಳುವ ಮೂಲಕ ಭಾರತದ ಸಂಸ್ಕೃತಿಯನ್ನು ಅಲ್ಲಿಯೂ ಪಸರಿಸಿದರು.
ರಿಕ್ಕಿ ಕೇಜ್ ಹುಟ್ಟಿದ್ದು ಅಮೆರಿಕದಲ್ಲಿ. ಸದ್ಯ, ಅವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ರಿಕ್ಕಿ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಅವರು 100ಕ್ಕೂ ಅಧಿಕ ಪಶಸ್ತಿಗಳನ್ನು ಗೆದ್ದಿದ್ದಾರೆ. 2015ರಲ್ಲಿ ‘ವಿಂಡ್ಸ್ ಆಫ್ ಸಂಸಾರ’ ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ ದೊರೆತಿತ್ತು. ಈ ಬಾರಿ ‘ಡಿವೈನ್ ಟೈಡ್ಸ್’ ಆಲ್ಬಂಗೆ ಸ್ಟೀವರ್ಟ್ ಕೋಪ್ಲ್ಯಾಂಡ್ ಹಾಗೂ ರಿಕ್ಕಿ ಕೇಜ್ಗೆ ಒಟ್ಟಾಗಿ ಗ್ರ್ಯಾಮಿ ಪ್ರಶಸ್ತಿ ದೊರೆತಿದೆ. ಈ ಮೂಲಕ ಅವರು ಭಾರತದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಅಮೆರಿಕದ ಸಿಂಗರ್ ಒಲಿವಿಯಾ ರೋಡ್ರಿಗೊ ಅವರಿಗೆ ಈ ಬಾರಿಯ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಮೂರು ವಿಭಾಗಗಳಲ್ಲಿ ಪ್ರಶಸ್ತಿ ದೊರೆತಿದ್ದು ವಿಶೇಷವಾಗಿತ್ತು.
ಇಲ್ಲಿದೆ ಪ್ರಶಸ್ತಿ ಪಡೆದವರ ಪಟ್ಟಿ ಆಲ್ಬಂ ಆಫ್ ದಿ ಇಯರ್ ‘ವಿ ಆರ್’- ಜಾನ್ ಬಾಟಿಸ್ಟ್
ಸಾಂಗ್ ಆಫ್ ದಿ ಇಯರ್ ಸಿಲ್ಕ್ ಸೋನಿಕ್- ಲೀವ್ ದಿ ಡೋರ್ ಓಪನ್
ಬೆಸ್ಟ್ ನ್ಯೂ ಆರ್ಟಿಸ್ಟ್ ಒಲಿವಿಯಾ ರೋಡ್ರಿಗೊ
ಅತ್ಯುತ್ತಮ ಪಾಪ್ ಸೋಲೋ ಪರ್ಫಾರ್ಮೆನ್ಸ್ ಒಲಿವಿಯಾ ರೋಡ್ರಿಗೊ -‘ಡ್ರೈವರ್ ಲೈಸೆನ್ಸ್’
ಅತ್ಯುತ್ತಮ ಪಾಪ್ ವೋಕಲ್ ಆಲ್ಬಂ ಒಲಿವಿಯಾ ರೋಡ್ರಿಗೊ- ಸಾವರ್
ಅತ್ಯುತ್ತಮ ರಾಕ್ ಪರ್ಫಾರ್ಮೆನ್ಸ್ ಫೂ ಫೈಟರ್ಸ್- ಮೇಕಿಂಗ್ ಎ ಫೈರ್
ಅತ್ಯುತ್ತಮ ರಾಕ್ ಸಾಂಗ್ ಫೂ ಫೈಟರ್ಸ್-ವೇಟಿಂಗ್ ಆನ್ ಎ ವಾರ್
ಅತ್ಯುತ್ತಮ ರ‍್ಯಾಪ್ ಆಲ್ಬಂ ಟೈಲರ್, ದಿ ಕ್ರಿಯೇಟರ್ ಕಾಲ್ ಮಿ ಇಫ್ ಯು ಗೆಟ್ ಲಾಸ್ಟ್
ಬೆಸ್ಟ್ ನ್ಯೂ ಏಜ್ ಆಲ್ಬಂ ಸ್ಟೀವರ್ಟ್ ಕೋಪ್ಲ್ಯಾಂಡ್, ರಿಕ್ಕಿ ಕೇಜ್, ಡಿವೈನ್ ಟೈಡ್ಸ್
ಇದನ್ನೂ ಓದಿ: ಕೆನ್ನೆಗೆ ಹೊಡೆದು ವಿಲ್ ಸ್ಮಿತ್ ರಂಪಾಟ ಮಾಡಿದ ಪ್ರಕರಣ; ಆಸ್ಕರ್ ಪ್ರಶಸ್ತಿ ಹಿಂಪಡೆಯಲಿದೆ ಅಕಾಡೆಮಿ?
ಆಸ್ಕರ್ ಪ್ರಶಸ್ತಿ ಘೋಷಿಸಿದ ಉಕ್ರೇನ್ ರಕ್ಷಣಾ ಪಡೆ; ಟ್ರ್ಯಾಕ್ಟರ್ಗೂ ಸಿಕ್ತು ಅವಾರ್ಡ್
Published On - 1:24 pm, Mon, 4 April 22