ಆಸ್ಕರ್​ ಪ್ರಶಸ್ತಿ ಘೋಷಿಸಿದ ಉಕ್ರೇನ್ ರಕ್ಷಣಾ ಪಡೆ​; ಟ್ರ್ಯಾಕ್ಟರ್​​ಗೂ ಸಿಕ್ತು ಅವಾರ್ಡ್​​

ಆಸ್ಕರ್​ ಪ್ರಶಸ್ತಿ ಘೋಷಿಸಿದ ಉಕ್ರೇನ್ ರಕ್ಷಣಾ ಪಡೆ​; ಟ್ರ್ಯಾಕ್ಟರ್​​ಗೂ ಸಿಕ್ತು ಅವಾರ್ಡ್​​
ಆಸ್ಕರ್​ ಪ್ರಶಸ್ತಿ ಘೋಷಿಸಿದ ಉಕ್ರೇನ್

ರಷ್ಯಾದ ಟ್ಯಾಂಕರ್​ಗಳನ್ನು ಟ್ರ್ಯಾಕ್ಟರ್​ ಮೂಲಕ ಎಳೆದುಕೊಂಡು ಹೋಗಲಾಗಿತ್ತು. ಈ ಮೂಲಕ ರಷ್ಯಾ ಪಡೆಗೆ ಸವಾಲೊಡ್ಡುವ ಕೆಲಸ ನಡೆದಿತ್ತು. ಈ ಟ್ರ್ಯಾಕ್ಟರ್​ಗಳಿಗೆ ‘ಅತ್ಯುತ್ತಮ ಪೋಷಕ ಕಲಾವಿದರು’ ಪ್ರಶಸ್ತಿಯನ್ನು ನೀಡಲಾಗಿದೆ!

TV9kannada Web Team

| Edited By: Rajesh Duggumane

Apr 01, 2022 | 11:49 AM

ರಷ್ಯಾ (Russia) ಮತ್ತು ಉಕ್ರೇನ್​ (Ukraine) ನಡುವಿನ ಯುದ್ಧ ಮುಂದುವರಿದಿದೆ. ಈ ಯುದ್ಧದಲ್ಲಿ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಹಲವರು ಪ್ರಾಣ ಉಳಿಸಿಕೊಳ್ಳಲು ವಲಸೆ ಹೋಗಿದ್ದಾರೆ. ಆದರೆ, ಯುದ್ಧ ಮಾತ್ರ ನಿಲ್ಲುತ್ತಿಲ್ಲ. ಉಕ್ರೇನ್​ನ ಪರಿಸ್ಥಿತಿ ದಿನ ಕಳೆದಂತೆ ಹದಗೆಡುತ್ತಲೇ ಇದೆ. ಈ ಮಧ್ಯೆ ಉಕ್ರೇನ್ ರಕ್ಷಣಾ ಪಡೆ ‘ಮಿಲಿಟರಿ ಆಸ್ಕರ್ ಪ್ರಶಸ್ತಿ’ (Military Oscar Award) ನೀಡುವ ಬಗ್ಗೆ ಘೋಷಣೆ ಮಾಡಿದೆ. ಯುದ್ಧದ ಸನ್ನಿವೇಶವನ್ನು ವಿವರಿಸುವ ವಿಷಯವನ್ನು ಇಟ್ಟುಕೊಂಡು ಒಟ್ಟೂ ಏಳು ವಿಭಾಗಗಳಲ್ಲಿ ಪ್ರಶಸ್ತಿ ನೀಡಿದೆ.  ವಿಚಿತ್ರ ಎಂದರೆ ಟ್ರ್ಯಾಕ್ಟರ್​ಗೂ ಇಲ್ಲಿ ಅವಾರ್ಡ್​ ಸಿಕ್ಕಿದೆ!

ಕಪ್ಪು ಸಮುದ್ರದಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಯಿಂದ ರಷ್ಯಾದ ಯುದ್ಧನೌಕೆಯನ್ನು ಹೊಡೆದುರುಳಿಸಲಾಗಿತ್ತು. ಯುದ್ಧನೌಕೆ ಹೊತ್ತಿ ಉರಿಯುತ್ತಿರುವ ಫೋಟೋಗೆ ‘ಅತ್ಯುತ್ತಮ ಚಿತ್ರ’ ಪ್ರಶಸ್ತಿ ನೀಡಲಾಗಿದೆ. ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದ ದೃಶ್ಯವನ್ನು ಸೆರೆಹಿಡಿದಿದ್ದಕ್ಕೆ ಅತ್ಯುತ್ತಮ ಸಿನಿಮಾಟೋಗ್ರಾಫಿ ಅವಾರ್ಡ್ ನೀಡಲಾಗಿದೆ.

ರಷ್ಯಾ ಸೈನ್ಯದ ವಿರುದ್ಧ ಉಕ್ರೇನ್​​ನ ರೈತರು ತೊಡೆತಟ್ಟಿದ್ದರು. ರಷ್ಯಾದ ಟ್ಯಾಂಕರ್​ಗಳನ್ನು ಟ್ರ್ಯಾಕ್ಟರ್​ ಮೂಲಕ ಎಳೆದುಕೊಂಡು ಹೋಗಿದ್ದರು. ಈ ಮೂಲಕ ರಷ್ಯಾ ಪಡೆಗೆ ಸವಾಲೊಡ್ಡುವ ಕೆಲಸ ಮಾಡಿದ್ದರು. ಈ ಟ್ರ್ಯಾಕ್ಟರ್​ಗಳಿಗೆ ‘ಅತ್ಯುತ್ತಮ ಪೋಷಕ ಕಲಾವಿದರು’ ಪ್ರಶಸ್ತಿಯನ್ನು ನೀಡಲಾಗಿದೆ!

ರಷ್ಯಾ ಸೇನೆ ವಿರುದ್ಧ ಏರ್​ಸ್ಟ್ರೈಕ್ ಮಾಡಲು ಬೈರಕ್ತರ್ ಟಿಬಿ 2 ಡ್ರೋನ್​ಗಳನ್ನು ಬಳಸಿಕೊಳ್ಳಲಾಗಿತ್ತು. ಈ ಮಿಸೈಲ್​ಗೆ ‘ಇಂಟರ್​ನ್ಯಾಷನಲ್​ ಅವಾರ್ಡ್​’ ಕೊಡಲಾಗಿದೆ. ಈ ಮಿಸೈಲ್​ನಿಂದ ಯುದ್ಧ ವಾಹನ​, 9 ಹೆಲಿಕಾಪ್ಟರ್ ಮುಂತಾದವನ್ನು ಈ ಮಿಸೈಲ್​ಗಳ ಮೂಲಕ ಹೊಡೆದುರುಳಿಸಲಾಗಿದೆ.

ಸ್ಟಿಂಗರ್ ಮಿಸೈಲ್​ನಿಂದ ರಷ್ಯಾದ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ. ಇದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಈ ಫೋಟೋಗೆ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಸಿಕ್ಕಿದೆ! ಇದರ ಜತೆಗೆ ಹಲವು ಭಾವನಾತ್ಮಕ ವಿಚಾರಗಳಿಗೂ ಈ ಯುದ್ಧ ಸಾಕ್ಷಿ ಆಗಿದೆ. ಇಲ್ಲಿ ಖಾರ್ಕಿವ್ ಸಂತ್ರಸ್ತ ತಾಣದಲ್ಲಿ ಮಕ್ಕಳು ದೇಶದ ರಾಷ್ಟ್ರಗೀತೆಯನ್ನು ಹಾಡಿದ್ದರು. ಇವರಿಗೆ, ‘ಬೆಸ್ಟ್​ ಸಾಂಗ್​’ ಅವಾರ್ಡ್​ ಸಿಕ್ಕಿದೆ.  ಈ ಪ್ರಶಸ್ತಿಗಳು ವಿಡಂಬನಾತ್ಮಕವಾಗಿದೆ.

ಇದನ್ನೂ ಓದಿ: 33ನೇ ವಯಸ್ಸಿಗೆ ಕ್ಯಾನ್ಸರ್​ನಿಂದ ಖ್ಯಾತ ಸಿಂಗರ್​ ನಿಧನ; ಸಂತಾಪ ಸೂಚಿಸಿದ ಯುವರಾಜ್​ ಸಿಂಗ್  

ಪಡ್ಡೆಗಳ ಕಣ್ಣು ಕುಕ್ಕಿದ ಸಮಂತಾ ಹೊಸ ಅವತಾರ; ಇಲ್ಲಿದೆ ಫೋಟೋ ಗ್ಯಾಲರಿ

Follow us on

Related Stories

Most Read Stories

Click on your DTH Provider to Add TV9 Kannada