AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Russia Ukraine: ಉಕ್ರೇನ್​ಗೆ ಇನ್ನಷ್ಟು ಯುದ್ಧೋಪಕರಣ ಒದಗಿಸಲು ಮುಂದಾದ ಅಮೆರಿಕ

ಉಕ್ರೇನ್ ಸೇನೆಯು ತನ್ನ ದೇಶವನ್ನು ರಕ್ಷಿಸಿಕೊಳ್ಳಲು ಮತ್ತು ರಷ್ಯನ್ ಸೇನೆಯೊಂದಿಗೆ ಹೋರಾಟ ಮುಂದುವರಿಸಲು ಅದರ ಸೇನಾಬಲವನ್ನು ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ತನ್ನ ಮಿತ್ರ ರಾಷ್ಟ್ರಗಳು ಮತ್ತು ಬೇರೆ ಸಮಾನಮನಸ್ಕ ರಾಷ್ಟ್ರಗಳ ನೆರವಿನೊಂದಿಗೆ ಯುಎಸ್ ಮುಂದಾಗಿದೆ ಎಂದು ಶ್ವೇತ ಭವನದ ಹೇಳಿಕೆ ತಿಳಿಸುತ್ತದೆ.

Russia Ukraine: ಉಕ್ರೇನ್​ಗೆ ಇನ್ನಷ್ಟು ಯುದ್ಧೋಪಕರಣ ಒದಗಿಸಲು ಮುಂದಾದ ಅಮೆರಿಕ
ಜೋ ಬೈಡೆನ್ ಮತ್ತು ವೊಲೊದಿಮಿರ್ ಜೆಲೆನ್ಸ್ಕಿ
TV9 Web
| Edited By: |

Updated on: Mar 31, 2022 | 6:39 AM

Share

ವಾಷಿಂಗ್ಟನ್: ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಮುಂದುವರಿದಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಯುದ್ಧ ವಿರಾಮ ಘೋಷಿಸಿಲ್ಲ, ಆದರೆ ಕೀವ್ (Kyiv) ಮೇಲಿನ ಸೇನಾ ಕಾರ್ಯಾಚರಣೆಯ ತೀವ್ರತೆಯನ್ನು ಕಡಿಮೆ ಮಾಡಲಾಗಿದೆಯೇ ಅದನ್ನು ಯುದ್ಧ ವಿರಾಮ ಅಂತ ಭಾವಿಸುವ ಅಗತ್ಯವಿಲ್ಲ ಎಂದಿರುವುದು ಮುಂಬರುವ ದಿನಗಳು ಕರಾಳವಾಗಿರಲಿವೆ ಅನ್ನೋದನ್ನು ಸೂಚಿಸುತ್ತದೆ ಎಂದು ಪಾಶ್ಚಿಮಾತ್ಯ ಮಾಧ್ಯಮಗಳು ಹೇಳುತ್ತಿವೆ. ಏತನ್ಮಧ್ಯೆ, ಯುಎಸ್ ಅಧ್ಯಕ್ಷ ಜೋ ಬೈಡೆನ್ (Joe Biden) ಮತ್ತು ಯುದ್ಧಗ್ರಸ್ತ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ (Volodymyr Zelensky) ನಡುವೆ ಬುಧವಾರದಂದು ದೂರವಾಣಿ ಮೂಲಕ ಮಾತುಕತೆ ನಡೆದಿದ್ದು ಉಕ್ರೇನಿನ ಮಿಲಿಟರಿ ಸಾಮರ್ಥ್ಯವನ್ನು ಬಲಿಪಡಿಸುವ ಕುರಿತು ಉಭಯ ರಾಷ್ಟ್ರಗಳ ನಾಯಕರು ಚರ್ಚಿಸಿದರು ಎಂದು ಶ್ವೇತ ಭವನ ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ರಷ್ಯನ್ ಸೇನೆಯಿಂದ ಕೀವ್ ನಗರದ ಅತಿಕ್ರಮಣ ಮುಂದುವರೆಯುತ್ತಿರುವಂತೆಯೇ ಉಕ್ರೇನ್ ಸರ್ಕಾರಕ್ಕೆ 500 ಮಿಲಿಯನ್ ಡಾಲರ್ ಗಳ ನೇರ ಹಣಕಾಸಿನ ನೆರವು ಒದಗಿಸುವುದಾಗಿ ಬೈಡೆನ್ ಅವರು ಜೆಲೆನ್ಸ್ಕಿ ಗೆ ತಿಳಿಸಿದರು ಎಂದು ಶ್ವೇತ ಭವನದ ಪ್ರಕಟಣೆ ಹೇಳಿದೆ.

ಉಕ್ರೇನ್ ಸೇನೆಯು ತನ್ನ ದೇಶವನ್ನು ರಕ್ಷಿಸಿಕೊಳ್ಳಲು ಮತ್ತು ರಷ್ಯನ್ ಸೇನೆಯೊಂದಿಗೆ ಹೋರಾಟ ಮುಂದುವರಿಸಲು ಅದರ ಸೇನಾಬಲವನ್ನು ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ತನ್ನ ಮಿತ್ರ ರಾಷ್ಟ್ರಗಳು ಮತ್ತು ಬೇರೆ ಸಮಾನಮನಸ್ಕ ರಾಷ್ಟ್ರಗಳ ನೆರವಿನೊಂದಿಗೆ ಯುಎಸ್ ಮುಂದಾಗಿದೆ ಎಂದು ಶ್ವೇತ ಭವನದ ಹೇಳಿಕೆ ತಿಳಿಸುತ್ತದೆ.

ಜೆಲೆನ್ಸ್ಕಿ ಅವರು ಬೈಡೆನ್ ಗೆ ತಿಳಿಸಿರುವ ಪ್ರಕಾರ ರಷ್ಯನ್ ಸೇನೆ ಫೆಬ್ರುವರಿ 24 ರಂದು ತನ್ನ ದೇಶದ ಮೇಲೆ ದಂಡೆತ್ತಿ ಬಂದಾಗಿನಿಂದ 20,000 ಕ್ಕಿಂತ ಹೆಚ್ಚು ಜನ ಹತರಾಗಿದ್ದಾರೆ. ಗಾಯಗೊಂಡಿರುವ ಜನರ ಸಂಖ್ಯೆ ಎಷ್ಟಿರಬಹುದೆಂಬ ಸ್ಪಷ್ಟ ಮಾಹಿತಿ ಇಲ್ಲ ಎಂದು ಜೆಲೆನ್ಸ್ಕಿ ಹೇಳಿದ್ದಾರಂತೆ.

ಜೋ ಬೈಡೆನ್ ಅವರೊಂದಿಗೆ ಮಾತಿಕತೆ ಪೂರ್ಣಗೊಂಡ ಬಳಿಕ, ‘ಈಗಷ್ಟೇ ಯುಎಸ್ ಅಧ್ಯಕ್ಷರೊಂದಿಗೆ ಒಂದು ಗಂಟೆ ಕಾಲ ಮಾತುಕತೆ ನಡೆಸಿದೆ,’ ಎಂದು ಜೆಲೆನ್ಸ್ಕಿ ಟ್ವೀಟ್ ಮಾಡಿದ್ದಾರೆ. ಉಕ್ರೇನ ಯುದ್ಧಭೂಮಿಯಲ್ಲಿ ಸ್ಥಿತಿ ಹೇಗಿದೆ ಅಂತ ಅವರಿಗೆ ವಿವರಿಸಿದೆ ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ.

‘ರಕ್ಷಣಾತ್ಮಕ ಬೆಂಬಲ, ರಷ್ಯಾದ ಮೇಲೆ ಹೇರಬಹುದಾದ ಇನ್ನಷ್ಟು ನಿರ್ಬಂಧಗಳು, ದೊಡ್ಡ ಪ್ರಮಾಣದ ಆರ್ಥಿಕ ನೆರವು ಮತ್ತು ಮಾನವೀಯ ನೆರವಿನ ಬಗ್ಗೆ ಅಧ್ಯಕ್ಷ ಬೈಡೆನ್ ಅವರೊಂದಿಗೆ ಚರ್ಚಿಸಿದೆ,’ ಎಂದು ಬೈಡೆನ್ ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.

ಮಂಗಳವಾರ ಟರ್ಕಿಯ ಇಸ್ತಾನ್ಬುಲ್ ನಲ್ಲಿ ಉಕ್ರೇನ್ ಮತ್ತು ರಷ್ಯಾ ಮಧ್ಯೆ ನಡೆದು ಮುಖಾಮುಖಿ ಮಾತುಕತೆಯಲ್ಲಿ ಉಕ್ರೇನ್ ರಾಜಧಾನಿ ಕೀವ್ ಮತ್ತು ಚೆರ್ನಿಗಿವ್ ನಗರದ ಸುತ್ತುಮುತ್ತ ಸೇನಾ ಕಾರ್ಯಾಚರಣೆಯನ್ನು ತಗ್ಗಿಸುವ ಬಗ್ಗೆ ರಷ್ಯಾ ಮಾಡಿದ ಪ್ರಮಾಣದ ಮೇಲೆ ಉಕ್ರೇನ್ ಮತ್ತು ಐರೋಪ್ಯ ರಾಷ್ಟ್ರಗಳು ಸಂದೇಹ ವ್ಯಕ್ತಪಡಿಸಿವೆ.

ಇದನ್ನೂ ಓದಿ:   Russia Ukraine War ಸೇನೆ ಹಿಂತೆಗೆತಕ್ಕೆ ಒಪ್ಪಿಗೆ; ಇದು ಕದನ ವಿರಾಮವಲ್ಲ,ಕೀವ್​​ನಲ್ಲಿ ಸೇನಾ ಚಟುವಟಿಕೆ ಕಡಿಮೆ ಮಾಡಲು ಒಪ್ಪಿಕೊಂಡ ರಷ್ಯಾ