Russia Ukraine War ಸೇನೆ ಹಿಂತೆಗೆತಕ್ಕೆ ಒಪ್ಪಿಗೆ; ಇದು ಕದನ ವಿರಾಮವಲ್ಲ,ಕೀವ್​​ನಲ್ಲಿ ಸೇನಾ ಚಟುವಟಿಕೆ ಕಡಿಮೆ ಮಾಡಲು ಒಪ್ಪಿಕೊಂಡ ರಷ್ಯಾ

ರಷ್ಯಾದ ಸಂಧಾನಕಾರರು ಮಂಗಳವಾರ ಉಕ್ರೇನ್‌ನ ರಾಜಧಾನಿ ಕೀವ್ ಮತ್ತು ಉತ್ತರದ ನಗರವಾದ ಚೆರ್ನಿಹಿವ್‌ನ ಸುತ್ತ ಮಿಲಿಟರಿ ಚಟುವಟಿಕೆಯನ್ನು ತೀವ್ರವಾಗಿ ಕಡಿಮೆಗೊಳಿಸುವ ಭರವಸೆ ನೀಡಿದರು. ಇದು ಇನ್ನೂ ಶಾಂತಿ ಒಪ್ಪಂದದ ಕಡೆಗೆ ಪ್ರಗತಿಯ ಅತ್ಯಂತ ಸ್ಪಷ್ಟವಾದ ಸಂಕೇತವಾಗಿದೆ.

Russia Ukraine War ಸೇನೆ ಹಿಂತೆಗೆತಕ್ಕೆ ಒಪ್ಪಿಗೆ; ಇದು ಕದನ ವಿರಾಮವಲ್ಲ,ಕೀವ್​​ನಲ್ಲಿ ಸೇನಾ ಚಟುವಟಿಕೆ ಕಡಿಮೆ ಮಾಡಲು ಒಪ್ಪಿಕೊಂಡ ರಷ್ಯಾ
ಉಕ್ರೇನ್​ನಲ್ಲಿರುವ ರಷ್ಯಾ ಪಡೆಗಳು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Mar 29, 2022 | 10:22 PM

ಕೀವ್ (Kyiv) ಮತ್ತು ಉತ್ತರ ಉಕ್ರೇನ್‌ನ ಸುತ್ತ ಮಿಲಿಟರಿ ಕಾರ್ಯಾಚರಣೆಗಳನ್ನು ಕಡಿಮೆ ಮಾಡುವ ರಷ್ಯಾದ ಭರವಸೆಯು ಕದನ ವಿರಾಮವನ್ನು (ceasefire) ಪ್ರತಿನಿಧಿಸುವುದಿಲ್ಲ ಮತ್ತು ಕೀವ್​​ನೊಂದಿಗಿನ ಔಪಚಾರಿಕ ಒಪ್ಪಂದದ ಕುರಿತು ಮಾತುಕತೆಗಳು ಇನ್ನೂ ಬಾಕಿ ಇದೆ ಎಂದು ಶಾಂತಿ ಮಾತುಕತೆಯಲ್ಲಿ ಮಾಸ್ಕೋದ ಪ್ರಮುಖ ಸಂಧಾನಕಾರರು ಮಂಗಳವಾರ ಹೇಳಿದ್ದಾರೆ. ರಷ್ಯಾದ (Russia) ಸಂಧಾನಕಾರರು ಮಂಗಳವಾರ ಉಕ್ರೇನ್‌ನ ರಾಜಧಾನಿ ಕೀವ್ ಮತ್ತು ಉತ್ತರದ ನಗರವಾದ ಚೆರ್ನಿಹಿವ್‌ನ ಸುತ್ತ ಮಿಲಿಟರಿ ಚಟುವಟಿಕೆಯನ್ನು ತೀವ್ರವಾಗಿ ಕಡಿಮೆಗೊಳಿಸುವ ಭರವಸೆ ನೀಡಿದರು. ಇದು ಇನ್ನೂ ಶಾಂತಿ ಒಪ್ಪಂದದ ಕಡೆಗೆ ಪ್ರಗತಿಯ ಅತ್ಯಂತ ಸ್ಪಷ್ಟವಾದ ಸಂಕೇತವಾಗಿದೆ. “ಇದು ಕದನ ವಿರಾಮವಲ್ಲ ಆದರೆ ಇದು ನಮ್ಮ ಆಕಾಂಕ್ಷೆಯಾಗಿದೆ, ಕನಿಷ್ಠ ಈ ಮೂಲಕ ಸಂಘರ್ಷದಿಂದ ಸೇನೆಯನ್ನು ಕ್ರಮೇಣ ಹಿಂಪಡೆದುಕೊಳ್ಳುವುದು ಎಂದು ರಷ್ಯಾದ ತಂಡದ ಮುಖ್ಯಸ್ಥ ವ್ಲಾಡಿಮಿರ್ ಮೆಡಿನ್ಸ್ಕಿ ಟಾಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.  ಶಾಂತಿ ಒಪ್ಪಂದವನ್ನು ಪ್ರಾರಂಭಿಸಿದ ಅದೇ ಕ್ಷಣದಲ್ಲಿ ಉಭಯ ದೇಶಗಳ ಅಧ್ಯಕ್ಷರ ಸಂಭವನೀಯ ಸಭೆಗೆ ಒಪ್ಪಿಗೆ ನೀಡುವ ಮೂಲಕ ರಷ್ಯಾ ಎರಡನೇ ಪ್ರಮುಖ ಹೆಜ್ಜೆಯಾದ ಸೇನಾ ಹಿಂತೆಗೆತಕ್ಕೆ ಒಪ್ಪಿದೆ ಎಂದು ಮೆಡಿನ್ಸ್ಕಿ ಹೇಳಿದರು.  ಆದಾಗ್ಯೂ, ಪರಸ್ಪರ ಸ್ವೀಕಾರಾರ್ಹ ಆಧಾರದ ಮೇಲೆ ಅಂತಹ ಒಪ್ಪಂದವನ್ನು ಸಿದ್ಧಪಡಿಸಲು, ನಾವು ಇನ್ನೂ ಬಹಳ ದೂರ ಹೋಗಬೇಕಾಗಿದೆ, ”ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ದಕ್ಷಿಣ ನಗರವಾದ ಮೈಕೊಲೈವ್‌ನಲ್ಲಿರುವ ಪ್ರಾದೇಶಿಕ ಸರ್ಕಾರದ ಪ್ರಧಾನ ಕಚೇರಿಯ ಮೇಲೆ ಕ್ಷಿಪಣಿ ದಾಳಿಯಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

ಅನುವಾದಕರ ಮೂಲಕ ಡ್ಯಾನಿಶ್ ಸಂಸತ್ತಿನಲ್ಲಿ ಮಾತನಾಡಿದ ಝೆಲೆನ್ಸ್ಕಿ, ಮಂಗಳವಾರದ ದಾಳಿಯಲ್ಲಿ 22 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದರು. ಟರ್ಕಿಯಲ್ಲಿ ಮಂಗಳವಾರ ಎರಡು ವಾರಗಳಲ್ಲಿ ಉಕ್ರೇನ್ ಮತ್ತು ರಷ್ಯಾ ಮೊದಲ ಮುಖಾಮುಖಿ ಮಾತುಕತೆ ನಡೆಸಿದಾಗಲೂ ಈ ದಾಳಿ ನಡೆದಿದೆ.

ಏತನ್ಮಧ್ಯೆ, ಉಕ್ರೇನ್‌ನ ಮಿಲಿಟರಿ ಸಾಮರ್ಥ್ಯವು ಗಂಭೀರವಾಗಿ ಕುಸಿದಿದೆ ಮತ್ತು ಅದು ಇನ್ನು ಮುಂದೆ ವಾಯುಪಡೆಯನ್ನು ಹೊಂದಿಲ್ಲ ಎಂದು ರಷ್ಯಾದ ರಕ್ಷಣಾ ಸಚಿವರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಕಳೆದ ಎರಡು ವಾರಗಳಲ್ಲಿ ಉಕ್ರೇನ್‌ನಲ್ಲಿ ಸುಮಾರು 600 ವಿದೇಶಿ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿರಷ್ಯಾ ಪರಮಾಣು ಶಸ್ತ್ರಾಸ್ತ್ರ ಪ್ರಯೋಗಕ್ಕೆ ಸಿದ್ಧವಾಗಿದೆಯಾ? -ಸರ್ಕಾರದ ವಕ್ತಾರ ಹೇಳಿದ್ದೇನು?

Published On - 9:47 pm, Tue, 29 March 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್